‘ಅಧಿಕಾರಕ್ಕೆ ಬಂದರೆ ಮುಸಲ್ಮಾನರಿಗೆ ಮತ್ತೆ ಮೀಸಲಾತಿ !’(ಅಂತೆ) ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ

ಡಿ.ಕೆ. ಶಿವಕುಮಾರ

ಬೆಂಗಳೂರು (ಕರ್ನಾಟಕ) – ಕರ್ನಾಟಕದಲ್ಲಿ ಆಢಳಿತಾರೂಢ ಭಾಜಪ ಮುಸಲ್ಮಾನರಿಗೆ ಸಿಗುವ ಶೇಖಡ ೪ ಮೀಸಲಾತಿ ರದ್ದು ಪಡಿಸಿದ ನಂತರ ಕಾಂಗ್ರೆಸ್ ‘ಅಧಿಕಾರಕ್ಕೆ ಬಂದರೆ ಮತ್ತೆ ಮೀಸಲಾತಿ ನೀಡುವೆವು’ ಎಂದು ಆಶ್ವಾಸನೆ ನೀಡಿದೆ.

ರಾಜ್ಯ ಸರಕಾರದ ನಿರ್ಣಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ ಶಾಹ ಇವರು, ‘ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವ ಕಾನೂನು ಸಂವಿಧಾನದಲ್ಲಿ ಇಲ್ಲ; ಎಂದು ಹೇಳಿದರು. ಆದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಇವರು ಸರಕಾರದ ನಿರ್ಣಯ ಸಂವಿಧಾನ ವಿರೋಧಿ ಇರುವುದೆಂದು ದಾವೆ ಮಾಡಿದ್ದಾರೆ. ’ಮೀಸಲಾತಿಯನ್ನು ಆಸ್ತಿಯ ಹಾಗೆ ಭಾಗ ಮಾಡುವುದು ಎಂದು ಭಾಜಪ ಸರಕಾರಕ್ಕೆ ಅನಿಸುತ್ತದೆ; ಆದರೆ ಮೀಸಲಾತಿ ಇದು ಆಸ್ತಿಯಾಗಿರದೇ ಅಧಿಕಾರವಾಗಿದೆ. ಅಲ್ಪಸಂಖ್ಯಾತ ಸಮೂಹಕ್ಕಾಗಿ ಶೇಕಡಾ ೪ ಮೀಸಲಾತಿ ತೆರವುಗೊಳಿಸಿ ಅದನ್ನು ದೊಡ್ಡ ಸಮಾಜಕ್ಕೆ ನೀಡಬೇಕು, ಎಂದು ನಮಗೆ ಅನಿಸುವುದಿಲ್ಲ. ಅಲ್ಪಸಂಖ್ಯಾತರರು ನಮ್ಮ ಸಹೋದರರು ಮತ್ತು ನಮ್ಮ ಕುಟುಂಬದ ಸದಸ್ಯರಾಗಿದ್ದಾರೆ’, ಎಂದು ಕೂಡ ಶಿವಕುಮಾರ ಹೇಳಿದರು.

ಸಂಪಾದಕರ ನಿಲುವು

* ಸಂವಿಧಾನದ ಪ್ರಕಾರ ಧರ್ಮದ ಆಧಾರದಲ್ಲಿ ಯಾರಿಗೂ ಕೂಡ ಮೀಸಲಾತಿ ನೀಡಬಾರದು ಎಂದು ಇದ್ದರೂ ಕಾಂಗ್ರೆಸ್ ಸಂವಿಧಾನ ವಿರೋಧಿ ಕೃತ್ಯ ಮಾಡಿ ಈ ಮೀಸಲಾತಿ ನೀಡುವರು, ಎಂದು ಇದರ ಅರ್ಥ ! ಇಂತಹ ಸಂವಿಧಾನ ವಿರೋಧಿ ಪಕ್ಷಕ್ಕೆ ಜನರು ಎಂದಾದರು ಅಧಿಕಾರದಲ್ಲಿ ಕೂಡಿಸುವರೆ ?

* ಮುಸಲ್ಮಾನರನ್ನು ಓಲೈಸುವ ಕಾಂಗ್ರೆಸ್ ಗೆ ದೇಶದಲ್ಲಿನ ಜನರೇ ೨೦೧೪ ರಿಂದ ಕೇಂದ್ರದಿಂದ ಮತ್ತು ಅನೇಕ ರಾಜ್ಯಗಳಿಂದ ಅಧಿಕಾರದಿಂದ ಕೆಳಗಿಳಿಸಿರುವಾಗ ಕಾಂಗ್ರೆಸ್ಸಿಗೆ ಇನ್ನೂ ಬುದ್ದಿ ಬಂದಿಲ್ಲ. ಇದರ ಅರ್ಥ ವಿನಾಶ ಕಾಲೆ ವಿಪರೀತ ಬುದ್ಧಿ ಎಂದಗುತ್ತದೆ !