ಕೇರಳದಲ್ಲಿನ ಮೊಪಲ್ ರ ಗಲಭೆ ಇದು ‘ಜಿಹಾದ್ವೇ ಆಗಿತ್ತು ! – ನ್ಯಾಯವಾದಿ ಕೃಷ್ಣರಾಜ, ಕೇರಳ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ

೧೯೨೧ ರಲ್ಲಿ ನಡೆದಿರುವ ಮೋಪಲರ ಗಲಭೆಯ ಹಿನ್ನೆಲೆಯು ಮೊದಲನೆಯ ಮಹಾಯುದ್ಧದೊಂದಿಗಿದೆ. ಈ ಗಲಭೆಯಲ್ಲಿ ಸರಕಾರಿ ಕಾರ್ಮಿಕರು, ಪೊಲೀಸ್ ಮತ್ತು ಅಂದಿನ ಬ್ರಿಟಿಷ ಸೈನಿಕರ ಮೇಲೆ ದಾಳಿ ಮಾಡಲಾಗಿತ್ತು, ಮತ್ತು ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ನರಸಂಹಾರ ಮಾಡಲಾಗಿತ್ತು. ಈ ಗಲಭೆ ಸುಮಾರು ೬ ತಿಂಗಳ ನಡೆಯಿತು. ಮತಾಂಧ ಜಿಹಾದಿಗಳು ಇದು ನಮ್ಮ ಚಳುವಳಿಯಾಗಿದ್ದು ಇದು ನಮ್ಮ ವಿಜಯವಾಗಿದೆ ಎಂದು ಘೋಷಿಸಿದರು. ಆದರೆ ಇದು ಚಳುವಳಿಯಲ್ಲ, ಇದು ಹಿಂದೂಗಳ ನರಸಂಹಾರವಾಗಿತ್ತು. ಮೋಪಲ ಗಲಭೆಯಲ್ಲಿ ಮತಾಂಧರಿಂದ ಹಿಂದೂಗಳ ಮೇಲೆ ಅತ್ಯಾಚಾರ ಮಾಡಲಾಗಿತ್ತು. ಆದರೆ ಹಿಂದೂ-ಮುಸ್ಲಿಂ ಏಕತೆಗಾಗಿ ಹಿಂದೂಗಳು ಈ ಅತ್ಯಾಚಾರ ಸಹಿಸಬೇಕು, ಎಂಬಂತಹ ಆಘಾತಕಾರಿ ಹೇಳಿಕೆ ಮೋಹನದಾಸ ಗಾಂಧಿ ಇವರು ನೀಡಿದ್ದರು. ಮೊಪಲ ಗಲಭೆ ಇದು ಜಿಹಾದನ ಒಂದು ಭಾಗವಾಗಿತ್ತು. ಗಲಭೆಕೋರರು ಸಹ ಇದು ‘ಜಿಹಾದ್ ಎಂದು ಒಪ್ಪಿದ್ದರು.