ಪಾಕಿಸ್ತಾನದಲ್ಲಿ ಹಿಂದೂ ಅಂಗಡಿಕಾರನನ್ನು ಥಳಿಸಿದ ಪೊಲೀಸ ಅಧಿಕಾರಿ ಅಮಾನತು

ಇಸ್ಲಾಮಾಬಾದ (ಪಾಕಿಸ್ತಾನ) – ಬೇಡಿಕೆಯನುಸಾರ ಬಿರ್ಯಾನಿ ತಯಾರಿಸುವ ಹಿಂದೂ ಅಂಗಡಿಕಾರನನ್ನು ಪೊಲೀಸರು ಥಳಿಸಿದ್ದರಿಂದ ಪೊಲೀಸ ಠಾಣೆಯ ಮುಖ್ಯಾಧಿಕಾರಿಯನ್ನು ಅಮಾನತು ಗೊಳಿಸಿರುವ ಘಟನೆ ಪಾಕಿಸ್ತಾನ ಸಿಂಧ ಪ್ರಾಂತ್ಯದ ಘೋಟಕಿಯಲ್ಲಿ ನಡೆದಿದೆ ; ಆದರೆ ಸ್ಥಳೀಯ ಪ್ರಸಾರ ಮಾಧ್ಯಮಗಳು ಈ ಘಟನೆ ಪಾಕಿಸ್ತಾನದ ಪಂಜಾಬಿನ ಬಹಾವಲಪುರದಲ್ಲಿ ನಡೆದಿದೆಯೆಂದು ತಿಳಿಸಿವೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ವಿಡಿಯೋ  ಆಧಾರದಲ್ಲಿ ಸಿಂಧ್ ಮಾನವಾಧಿಕಾರ  ಆಯೋಗವು ಹಿರಿಯ ಪೊಲೀಸ ಅಧಿಕಾರಿಗಳಿಗೆ ಪತ್ರ ಬರೆದು ಸಂಬಂಧಿಸಿದ ಪೊಲೀಸರ ಮೇಲೆ ಕ್ರಮ ಕೈಕೊಳ್ಳುವಂತೆ  ಮನವಿ ಮಾಡಿದೆ.

  1. ಹಿಂದೂ ಅಂಗಡಿಕಾರ ಬಿರ್ಯಾನಿ  ತಯಾರಿಸುತ್ತಿರುವಾಗ ಪೊಲೀಸ ಅಧಿಕಾರಿ ಕಾಬಿಲ ಬಾಯೋ  ಪೊಲೀಸ  ಸಿಬ್ಬಂದಿಗಳೊಂದಿಗೆ ಅಲ್ಲಿಗೆ ತಲುಪಿ, ರಮಝಾನ ನಿಮಿತ್ತ ಉಪವಾಸ ಮಾಡುವುದರ ಬದಲಾಗಿ ಬಿರ್ಯಾನಿ ತಯಾರಿಸುತ್ತಿದ್ದಾನೆಂದು ಅಂಗಡಿಕಾರ ಮತ್ತು ಅವನ ವಿತರಕನನ್ನು ಥಳಿಸಲು ಪ್ರಾರಂಭಿಸಿದನು. ಅಂಗಡಿಕಾರನು ಉಪವಾಸ ಬಿಡಲು ಗಿರಾಕಿಗಳಿಂದ ಬೇಡಿಕೆ ಬಂದಿದ್ದರಿಂದ ಬಿರ್ಯಾನಿ ತಯಾರಿಸುತ್ತಿರುವುದಾಗಿ ಹೇಳಿದಾಗ ಕಾಬಿಲ್ ಬಾಯೊ  ಹಿಂದೂ ಅಂಗಡಿಕಾರನಿಗೆ ಅವನ ಹಿಂದೂ ಧರ್ಮಗ್ರಂಥದ ಶಪಥ ತೆಗೆದುಕೊಳ್ಳುವಂತೆ ಹೇಳಿದನು.
  2. ಪಾಕಿಸ್ತಾನದ ಮಾಜಿ ನ್ಯಾಯಮೂರ್ತಿ ತಸದ್ದುಕ ಹುಸೈನ ಜಿಲಾನಿಯವರು 19 ಜೂನ 2014 ರಂದು ಪೊಲೀಸ ಅಧಿಕಾರಿ ಕಾಬಿಲ ಭಾಯೊ ಇವನ ವರ್ತನೆ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರ ವಿರುದ್ಧ  ಇದೆಯೆಂದು ಹೇಳಿದ್ದರು.