|
ದರ್ಭಾಂಗ (ಬಿಹಾರ) – ಇಲ್ಲಿನ ಜಿಲ್ಲಾ ಆಡಳಿತದಿಂದ ಮುಂಬರುವ ಶ್ರೀರಾಮನವಮಿ ಮತ್ತು ಛಟಪೂಜೆ ಉತ್ಸವ ಸಮಯದಲ್ಲಿ ಹಾಕಲಾಗುವ ಧ್ವನಿವರ್ಧಕಗಳ ಧ್ವನಿಯ ಮಟ್ಟ ೭೫ ಡೆಸಿಬಲಗಿಂತಲೂ ಹೆಚ್ಚು ಇದ್ದರೆ ಸಂಬಂಧ ಪಟ್ಟ ಕಾರ್ಯಕ್ರಮದ ಮೇಲೆ ನಿರ್ಬಂಧ ಹೇರಲಾಗುವುದು, ಎಂದು ಸುತ್ತೋಲೆ ಹೊರಡಿಸಿದೆ. ಈ ಆದೇಶದ ವಿರುದ್ಧ ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರರಾದ ವಿನೋದ ಬನ್ಸಲ್ ಇವರು ಟ್ವೀಟ್ ಮಾಡಿ, ‘ಈ ರೀತಿಯ ಆದೇಶ ಅಜಾನ ಮತ್ತು ತಾಜಿಯಾ (ಮೊಹರಂ ಸಮಯದಲ್ಲಿ ನಡೆಸುವ ಮೆರವಣಿಗೆ) ಅದಕ್ಕಾಗಿ ಏಕೆ ನೀಡುವುದಿಲ್ಲ ?’, ಎಂದು ಟ್ವೀಟ್ ಮೂಲಕ ಪ್ರಶ್ನೆ ಮಾಡಿದರು. ಜಿಲ್ಲಾ ಆಡಳಿತ ನೀಡಿರುವ ಇತರ ಆದೇಶದಲ್ಲಿ ರಾಮನವಮಿಯ ಪ್ರಯುಕ್ತ ನಡೆಸಲಾಗುವ ಹೊಸ ಮೆರವಣಿಗೆಗಳಿಗೆ ಅನುಮತಿ ನಿರಾಕರಿಸಿದ್ದಾರೆ. ಈ ಆದೇಶದ ಉಲ್ಲಂಘನೆ ಮಾಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
सरकारा ने बनाया हिंदू त्योहारों को निशाना, बिहार पुलिस द्वारा जारी निर्देशों पर VHP का पलटवार@VHPDigital @vinod_bansal @bihar_police @NitishKumar @yadavtejashwi @SMCHOUOfficial @BJP4Bihar https://t.co/AmzvqcQ44V
— Sudarshan News (@SudarshanNewsTV) March 26, 2023
ಸಂಪಾದಕರ ನಿಲುವುಕಳೆದ ವರ್ಷ ೮ ರಾಜ್ಯಗಳಲ್ಲಿ ಶ್ರೀರಾಮನವಮಿಯ ಶೋಭಾಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ ನಡೆದಿತ್ತು. ಆದ್ದರಿಂದ ಮತಾಂಧರ ಮೇಲೆ ಅಂಕುಶ ಇಡುವುದನ್ನು ಬಿಟ್ಟು ಬಿಹಾರದಲ್ಲಿನ ಜನತಾದಳ (ಸಂಯುಕ್ತ) ಮತ್ತು ರಾಷ್ಟ್ರೀಯ ಜನತಾದಳದ ಮೈತ್ರಿ ಸರಕಾರ ಹಿಂದೂಗಳ ಮೇಲೆಯೇ ಒತ್ತಡ ತರುತ್ತಿದೆ, ಇದು ಖೇದಕರವಾಗಿದೆ ! |