|
ಮುಂಬಯಿ – ನಾಲಾಸೋಪಾರಾದಲ್ಲಿನ ತಥಾಕಥಿತ ಶಸ್ತ್ರಾಸ್ತ್ರ ಸಂಗ್ರಹದ ಪ್ರಕರಣದಲ್ಲಿ ಮಾರ್ಚ್ ೨೪ ರಂದು ಮುಂಬಯಿ ಉಚ್ಚ ನ್ಯಾಯಾಲಯದಿಂದ ತಥಾಕಥಿತ ಆರೋಪಿ ಶ್ರೀ. ಲೀಲಾಧರ ಲೋಧೀ ಮತ್ತು ಶ್ರೀ. ಪ್ರತಾಪ ಹಾಜರಾ ಇವರನ್ನು ಜಾಮಿನಿನ ಮೇಲೆ ಬಿಡುಗಡೆ ಮಾಡಲಾಯಿತು. ಈ ಸಮಯದಲ್ಲಿ ‘ಹಿಂದೂ ರಾಷ್ಟ್ರ’ ಸ್ಥಾಪನೆ ಮಾಡುವ ಉದ್ದೇಶದಿಂದ ಸಾರ್ವಭೌಮತ್ವ ಮತ್ತು ಅಖಂಡತೆ ನಾಶಗೊಳಿಸಿ ಭಾರತಕ್ಕೆ ಅಸ್ಥಿರಗೊಳಿಸುವುದಕ್ಕಾಗಿ ಭಯೋತ್ಪಾದಕ ಕಾರ್ಯ ಚಟುವಟಿಕೆಯಲ್ಲಿ ಭಾಗಿಯಾಗಿರುವ ಆರೋಪ ಇದ್ದರೂ, ಸನಾತನ ಸಂಸ್ಥೆಗೆ ಕಾನೂನ ಬಾಹಿರ ಚಟುವಟಿಕೆ ಪ್ರತಿಬಂದಿತ ಕಾನೂನಿನ ಪ್ರಕಾರ ‘ಭಯೋತ್ಪಾದಕ’ ಅಥವಾ ‘ನಿಷೇಧಿತ ಸಂಘಟನೆ’ ಎಂದು ಘೋಷಿಸಲಿಲ್ಲ’, ಎಂದು ನ್ಯಾಯಾಲಯವು ಜಾಮೀನು ನೀಡುವಾಗ ಪ್ರತಿಪಾದಿಸಿತು.
Sanatan Sanstha: ಸನಾತನ ಸಂಸ್ಥೆ ನಿಷೇಧಿತ ಅಥವಾ ಉಗ್ರ ಸಂಘಟನೆ ಅಲ್ಲ: ಬಾಂಬೆ ಹೈಕೋರ್ಟ್
#terror https://t.co/hbu2NoObmX— vijaykarnataka (@Vijaykarnataka) March 25, 2023
ಶ್ರೀ. ಲೀಲಾಧರ ಲೋಧೀ ಮತ್ತು ಶ್ರೀ. ಪ್ರತಾಪ ಹಾಜರಾ ಇವರು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಸುನಿಲ್ ಶುಕ್ರೆ ಮತ್ತು ನ್ಯಾಯಮೂರ್ತಿ ಕಮಲ ಖಾತಾ ಇವರ ಖಂಡಪೀಠದಲ್ಲಿ ವಿಚಾರಣೆ ನಡೆಯಿತು. ೨೦೧೮ ರಲ್ಲಿ ರಾಜ್ಯದ ಉಗ್ರ ನಿಗ್ರಹ ದಳದಿಂದ ನಾಲಾಸೋಪಾರಾದಲ್ಲಿನ ಗೋ ರಕ್ಷಕ ಶ್ರೀ. ವೈಭವ ರಾವುತ ಇವರ ಮನೆಯಲ್ಲಿ ಸ್ಪೋಟಕಗಳು ದೊರಕಿರುವ ದಾವೆ ಮಾಡಿದ್ದರು. ಈ ಪ್ರಕರಣದಲ್ಲಿ ಸರ್ವಶ್ರೀ. ವೈಭವ ರಾವುತ, ಲೀಲಾಧರ ಲೋಧೀ , ಪ್ರತಾಪ ಹಾಜರಾ ಇವರ ಜೊತೆಗೆ ಇತರ ಕೆಲವು ಆರೋಪಿಗಳನ್ನು ಬಂಧಿಸಲಾಗಿತ್ತು. ಸರಕಾರಿ ನ್ಯಾಯವಾದಿಗಳಿಂದ ಆರೋಪಿಗಳ ಜಾಮೀನಿಗೆ ವಿರೋಧಿಸಲಾಗಿತ್ತು; ಆದರೆ ಸಹ ಆರೋಪಿಗಳ ಉತ್ತರದ ಸತ್ಯಾ ಸತ್ಯತೆ ಪರಿಶೀಲಿಸುವವರೆಗೆ ಅವರ ಮೇಲಿನ ಆರೋಪ ಸ್ವೀಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ನಮೂದಿಸಿದೆ.