‘ನಾನು ಸುಮ್ಮನೆ ಕೂರುವುದಿಲ್ಲ, ನಾನು ಮೋದಿಗೆ ಹೆದರುವುದಿಲ್ಲ !’ (ಅಂತೆ) – ರಾಹುಲ ಗಾಂಧಿ

ನವ ದೆಹಲಿ – ದೇಶದಲ್ಲಿ ಇಂದು ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದೆ. ಇದರ ಉದಾಹರಣೆಗಳು ಪ್ರತಿದಿನ ನೋಡುತ್ತಿದ್ದೇವೆ. ನಾನು ಸಂಸತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಉದ್ಯಮಿ ಅದಾನಿ ಇವರ ಸಂಬಂಧದ ಬಗ್ಗೆ ಪ್ರಶ್ನೆ ಎತ್ತಿದೆ. ಅದರ ಸಾಕ್ಷಿಗಳು ಕೂಡ ಪ್ರಸ್ತುತಪಡಿಸಿದ್ದೆ. ‘ಅದಾನಿ ಇವರ ಕಂಪನಿಯಲ್ಲಿ ೨೦ ಸಾವಿರ ಕೋಟಿ ರೂಪಾಯಿ ಯಾರು ಹೂಡಿಕೆ ಮಾಡಿದ್ದಾರೆ ?’ ಎಂದು ನಾನು ನೇರ ಪ್ರಶ್ನೆ ಕೇಳಿದ್ದೆ .ಆದ್ದರಿಂದ ನನ್ನ ಸಂಸತ್ತಿನ ಸದಸ್ಯ ಸ್ಥಾನ ರದ್ದುಪಡಿಸಲಾಗಿದೆ, ಎಂದು ರಾಹುಲ್ ಗಾಂಧಿಯವರು ಇಲ್ಲಿಯ ಕಾಂಗ್ರೆಸ್ ಕಾರ್ಯಾಲಯದಲ್ಲಿ ಆಯೋಜಿಸಿರುವ ಪತ್ರಕರ್ತರ ಪರಿಷತ್ತಿನಲ್ಲಿ ಆರೋಪಿಸಿದರು. ‘ನನ್ನ ಸಂಸತ್ತಿನ ಸದಸ್ಯ ಸ್ಥಾನ ರದ್ದು ಪಡಿಸಿದ್ದರೂ ನಾನು ಸುಮ್ಮನೆ ಕೂರುವುದಿಲ್ಲ. ನಾನು ಮೋದಿ ಸರಕಾರಕ್ಕೆ ಪ್ರಶ್ನೆ ಕೇಳುವುದನ್ನು ನಿಲ್ಲಿಸುವುದಿಲ್ಲ. ನಾನು ಅವರಿಗೆ ಹೆದರುವುದಿಲ್ಲ’, ಎಂದು ರಾಹುಲ್ ಗಾಂಧಿ ಹೇಳಿದರು. ಸೂರತ್ ನ್ಯಾಯಾಲಯದಿಂದ ಮೋದಿ ಉಪನಾಮದ ಬಗ್ಗೆ ಅಪಕೀರ್ತಿ ಮಾಡಿದ್ದರಿಂದ ರಾಹುಲ್ ಗಾಂಧಿ ಇವರಿಗೆ ೨ ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಇದರ ನಂತರ ರಾಹುಲ್ ಗಾಂಧಿಯವರು ಸಂಸತ್ತಿನ ಸದಸ್ಯ ಸ್ಥಾನ ರದ್ದು ಮಾಡಲಾಗಿದೆ. ಈ ಪ್ರಕರಣದಲ್ಲಿ ಗಾಂಧೀಜಿಯವರು ತಮ್ಮ ನಿಲುವನ್ನು ಮಂಡಿಸುವುದಕ್ಕಾಗಿ ಪತ್ರಿಕಾಗೋಷ್ಠಿ ಕರೆದಿದ್ದರು. ಮೋದಿ ಸಮಾಜ ಒಬಿಸಿ ವರ್ಗದಲ್ಲಿ ಬರುವುದರಿಂದ ಭಾಜಪದಿಂದ ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ಇವರು ಮೋದಿ ಸಮಾಜದ ಅವಮಾನ ಮಾಡಿರುವುದಾಗಿ ಕೂಡ ಆರೋಪಿಸಿದೆ.

ರಾಹುಲ್ ಗಾಂಧಿ ಮಾತು ಮುಂದುವರಿಸಿ, ಮೂಲತಃ ಇದು ಒಬಿಸಿಯ ವಿಷಯವೇ ಅಲ್ಲ. ಇದು ಮೋದಿ ಮತ್ತು ಅದಾನಿ ಇವರಿಗೆ ಸಂಬಂಧಪಟ್ಟ ವಿಷಯವಾಗಿದೆ. ಓಬಿಸಿ ಮುಂದೆ ಮಾಡಿ ಭಾಜಪ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ; ಆದರೆ ಅವರು ಎಷ್ಟೇ ಆರೋಪಿಸಿದರು, ನಾನು ಅವರಿಗೆ ಪ್ರಶ್ನೆ ಕೇಳುವುದನ್ನು ನಿಲ್ಲಿಸುವುದಿಲ್ಲ, ಎಂದು ಕೂಡ ಅವರು ಹೇಳಿದರು.

ಸಂಪಾದಕೀಯ ನಿಲುವು

ಭಾರತದಲ್ಲಿ ಪ್ರಜಾಪ್ರಭುತ್ವ ಇರುವುದರಿಂದ ಪ್ರತಿಯೊಬ್ಬರಿಗೂ ಮಾತನಾಡುವ, ಅಭಿಪ್ರಾಯ ಮಂಡಿಸುವ ಸ್ವಾತಂತ್ರ್ಯವಿದೆ; ಆದರೆ ಈ ಸ್ವಾತಂತ್ರ್ಯದ ಹೆಸರಿನಲ್ಲಿ ಬೇರೆಯವರನ್ನು ಅಪಕೀರ್ತಿ ಮಾಡುವುದನ್ನು ಸಂವಿಧಾನವು ಯಾರಿಗೂ ಅನುಮತಿ ನೀಡಿಲ್ಲ, ಇದನ್ನು ರಾಹುಲ ಗಾಂಧಿ ಇವರು ಮರೆತಿದ್ದಾರೆ, ಅವರು ‘ಮೂಳೆ ಇಲ್ಲದ ನಾಲಿಗೆ’ ರೀತಿಯಲ್ಲಿ ಮಾತನಾಡುತ್ತಾರೆ ಎಂಬುದು ಗಮನಕ್ಕೆ ಬರುತ್ತದೆ !

‘ನಾನು ಸಾವರ್ಕರ್ ಅಲ್ಲ, ಗಾಂಧಿ ಆಗಿರುವೆ; ಕ್ಷಮೆ ಕೇಳುವುದಿಲ್ಲ !’ (ಅಂತೆ) – ರಾಹುಲ್ ಗಾಂಧಿ

ಪತ್ರಿಕಾಗೋಷ್ಠಯಲ್ಲಿ ಓರ್ವ ಪತ್ರಕರ್ತನು, ‘ನೀವು ಕ್ಷಮೆ ಯಾಚಿಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಭಾಜಪ ಹೇಳಿದೆ, ಇದರ ಬಗ್ಗೆ ನಿಮಗೆ ಏನು ಅನಿಸುತ್ತದೆ ?’ ಈ ಪ್ರಶ್ನೆಗೆ ರಾಹುಲ್ ಗಾಂಧಿ ಇವರಿಗೆ ಮಾನಹಾನಿಯ ಬಗ್ಗೆ ಕೇಳಿದ್ದಾರೆ. ಅದರ ಬಗ್ಗೆ ರಾಹುಲ್ ಗಾಂಧಿ ಉತ್ತರಾ ನೀಡುವಾಗ, ‘ನಾನು ಸಾವರ್ಕರ ಅಲ್ಲ, ಗಾಂಧಿ ಇರುವೆನು. ಕ್ಷಮೆ ಕೇಳುವುದಿಲ್ಲ’, ಎಂದು ಮತ್ತೆ ಹೇಳಿದರು. ಇದಕ್ಕೂ ಮೊದಲು ಕಾಂಗ್ರೆಸ್ ಒಂದು ಚಿತ್ರ ಟ್ವೀಟ್ ಮಾಡಿದೆ. ಅದರಲ್ಲಿ ರಾಹುಲ್ ಗಾಂಧಿ ಇವರನ್ನು ತೋರಿಸಿ ಮೇಲಿನ ಹೇಳಿಕೆ ಬರೆದಿದ್ದಾರೆ.

ಸಂಪಾದಕೀಯ ನಿಲುವು

ರಾಹುಲ್ ಗಾಂಧಿ ಕಪಟಿಯಾಗಿದ್ದಾರೆ. ಈ ಹಿಂದೆ ಕೂಡ ಅವರು ೨ ಬಾರಿ ನ್ಯಾಯಾಲಯದಲ್ಲಿ ಕ್ಷಮೆ ಯಾಚಿಸಿದ್ದರು. ಆದ್ದರಿಂದ ಅವರಿಗೆ ಶಿಕ್ಷೆ ಆಗಿರಲಿಲ್ಲ. ಇದು ಬಹಿರಂಗ ಘಟನೆಯಾಗಿದೆ; ಆದರೆ ರಾಹುಲ್ ಗಾಂಧಿ ಸ್ವಾತಂತ್ರ್ಯ ವೀರ ಸಾವರ್ಕರಗಿಂತಲೂ ತನ್ನನ್ನು ತಾನು ಉಚ್ಚ ಸ್ಥಾನದಲ್ಲಿ ಇರುವ ಹಾಗೆ ಸುಳ್ಳು ಮಾತನಾಡುತ್ತಿದ್ದಾರೆ, ಇದನ್ನು ತಿಳಿಯಿರಿ ! ಇಂತಹವರನ್ನು ಎಂದಾದರೂ ಸಾವರ್ಕರ ಜೊತೆಗೆ ಹೋಲಿಸಲು ಸಾಧ್ಯವೇ ?