ಅಮೃತಪಾಲ್ ಸಿಂಗ್ ಖಲಿಸ್ತಾನಗಾಗಿ ಸ್ವತಂತ್ರ ಕರೆನ್ಸಿ ಮತ್ತು ಸೈನ್ಯವನ್ನು ನಿರ್ಮಿಸಲು ಷಡ್ಯಂತ್ರ ರಚಿಸಿದ್ದ !

ಚಂಡಿಗಡ – ‘ವಾರಿಸ ಪಂಜಾಬ ದೇ’ (ಪಂಜಾಬ್ ಉತ್ತರಾಧಿಕಾರಿಗಳು) ಸಂಘಟನೆಯ ಮುಖ್ಯಸ್ಥ ಹಾಗೂ ಖಲಿಸ್ತಾನಿ ಅಮೃತಪಾಲ್ ಸಿಂಗ್ ನನ್ನು ಬಂಧಿಸಲು ಪಂಜಾಬ್ ಪೊಲೀಸರು ಕಳೆದ ಕೆಲವು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದುವರೆಗೆ 207 ಖಲಿಸ್ತಾನಿ ಬೆಂಬಲಿಗರನ್ನು ಬಂಧಿಸಲಾಗಿದೆ. ಇದರೊಂದಿಗೆ ಅಮೃತಪಾಲ್ ಸಿಂಗ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಪೊಲೀಸರ ನೀಡಿದ ಮಾಹಿತಿಯ ಪ್ರಕಾರ ಅಮೃತಪಾಲ್ ಸಿಂಗ್ ‘ಆನಂದಪುರ ಖಾಲಸಾ ಫೌಜ್’ ಸಹಾಯದಿಂದ ‘ಅಮೃತಪಾಲ್ ಟೈಗರ್ ಫೋರ್ಸ್’ ಅನ್ನು ಸಿದ್ದಪಡಿಸುತ್ತಿದ್ದನು. ಇದರಲ್ಲಿ ಸಿಖ್ ಯುವಕರನ್ನು ನೇಮಿಸಿಕೊಳ್ಳುವ ಯೋಜನೆ ಮಾಡಲಾಗಿತ್ತು. ಇದಲ್ಲದೆ, ಅವರು ಖಲಿಸ್ತಾನ್‌ಗೆ ಪ್ರತ್ಯೇಕ ಕರೆನ್ಸಿ ಮತ್ತು ಖಲಿಸ್ತಾನ್‌ನ ಪ್ರತ್ಯೇಕ ನಕ್ಷೆಯನ್ನು ಸಹ ಅವನು ರಚಿಸಿದ್ದ.

ಪಾಕಿಸ್ತಾನದ ಐ.ಎಸ್.ಐ. ನಿಂದ

ಪಂಜಾಬ್ ಪೊಲೀಸ್ ನ ಬಂದಂನದಲ್ಲಿರುವ ಅಮೃತಪಾಲ್ ಸಿಂಗ್ ನ ಅಂಗರಕ್ಷಕ ತೇಜಿಂದರ್ ಸಿಂಗ್ ಅಲಿಯಾಸ್ ಗೋರಖಾ ಬಾಬಾನ ಮೊಬೈಲ್ ನಿಂದ ಪೊಲೀಸರಿಗೆ ಹಲವು ಮಾಹಿತಿ ಸಿಕ್ಕಿದ್ದು, ಅದರಲ್ಲಿ ಖಲಿಸ್ತಾನ್ ರಚಿಸಲು ಅಮೃತಪಾಲ್ ಸಿಂಗ್ ಹಲವು ದೇಶಗಳೊಂದಿಗೆ ಸಂಪರ್ಕದಲ್ಲಿದ್ದ ಎಂಬುದು ಬಯಲಾಗಿದೆ. ಇದರಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐ.ಎಸ್.ಐ’ಯು ಅವನಿಗೆ ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತಿತ್ತು. ಇದಕ್ಕೂ ಮೊದಲು ಗುಪ್ತಚರ ಸಂಸ್ಥೆ ಸಂಚಲನ ಬಹಿರಂಗಮಾಡಿತು. ಅಮೃತಪಾಲ್ ಸಿಂಗ್ ಆತ್ಮಾಹೂತಿ ದಾಳಿಗೆ ಯುವಕರನ್ನು ಸಿದ್ಧಪಡಿಸುತ್ತಿದ್ದಾನೆ. ಅಮೃತಪಾಲ್ ಸಿಂಗ್ ‘ಐ.ಎಸ್.ಐ’ನ ನೆರವಿನಿಂದ ‘ಆನಂದಪುರ ಖಾಲಸಾ ಪಡೆ’ ಸಿದ್ಧಪಡಿಸುತ್ತಿದ್ದಾನೆ ಎಂದು ಗುಪ್ತಚರ ಸಂಸ್ಥೆಗಳು ಹೇಳಿದ್ದವು.

ಸಂಪಾದಕೀಯ ನಿಲುವು

‘ಇಷ್ಟೊಂದು ಆಗುವ ತನಕ ಭಾರತೀಯ ಭದ್ರತಾ ವ್ಯವಸ್ಥೆಯು ಏನು ಮಾಡುತಿತ್ತು ?’ ಇಂತಹ ಪ್ರಶ್ನೆ ಜನಸಾಮಾನ್ಯರಲ್ಲಿ ಬರುವುದು ಸಹಜ !