ನವದೆಹಲಿ – ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯವು 2 ವರ್ಷಗಳ ಶಿಕ್ಷೆ ವಿಧಿಸಿದ ನಂತರ ಅವರ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ. 2019 ರಲ್ಲಿ ಕರ್ನಾಟಕದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ, ‘ಎಲ್ಲಾ ಕಳ್ಳರು ಮೋದಿ ಎಂಬ ಉಪನಾಮವನ್ನೇ ಇಟ್ಟುಕೊಂಡಿರುವುದು ಹೇಗೆ ?’, ಎಂದು ಪ್ರಶ್ನಿಸಿದ್ದರು. ಮಾರ್ಚ್ 23 ರಂದು ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸಿ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಹಾಗಾಗಿ ನಿಯಮಾನುಸಾರ ಸಂಸತ್ ಸದಸ್ಯರೆಂದು ಅನರ್ಹರಾದರು. ಈ ಹಿಂದೆ ಇಂದಿರಾಗಾಂಧಿ ಮತ್ತು ಸೋನಿಯಾ ಗಾಂಧಿ ಕೂಡ ಬೇರೆ ಬೇರೆ ಪ್ರಕರಣಗಳಲ್ಲಿ ಸದಸ್ಯ ಸ್ಥಾನದಿಂದ ಅನರ್ಹರಾಗಿದ್ದರು. ರಾಹುಲ್ ಗಾಂಧಿ ವಿರುದ್ಧದ ಕ್ರಮದ ನಂತರ, ಮಾರ್ಚ್ 24 ರಂದು ಸಂಜೆ ಕಾಂಗ್ರೆಸ್ ಪಕ್ಷದ ಉಚ್ಚಾಧಿಕಾರಿ ಸಮಿತಿ ಸದಸ್ಯರು, ರಾಜ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಮತ್ತು ಮೈತ್ರಿ ಸಂಘಟನೆಗಳ ಮುಖಂಡರ ಸಭೆಯನ್ನು ಕರೆಯಲಾಗಿತ್ತು. ಮತ್ತೊಂದೆಡೆ ರಾಹುಲ್ ಗಾಂಧಿಯ ಸದಸ್ಯ ಸ್ಥಾನ ರದ್ದಾದ ನಂತರ ಯಾವ ಮತ ಕ್ಷೇತ್ರದಿಂದ ಆಯ್ಕೆಯಾಗಿದ್ದರೋ ಆ ಕೇರಳದ ವಯನಾಡ್ ಮತದಾನ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ಚಿಂತನೆ ನಡೆಸಿದ್ದು, ಏಪ್ರಿಲ್ ತಿಂಗಳಲ್ಲಿ ಈ ಕುರಿತು ಘೋಷಣೆ ಹೊರಬೀಳಬಹುದು ಎಂದು ಹೇಳಲಾಗುತ್ತಿದೆ.
#Congress leader #RahulGandhi has been disqualified as a #LokSabha MP following his conviction in the criminal defamation case over his ‘Modi surname’ remark. The disqualification is effective from March 23, the date of conviction.https://t.co/26MJ3egI12
— The Times Of India (@timesofindia) March 24, 2023
1. ಕಾಂಗ್ರಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇವರು, ರಾಹುಲ್ ಗಾಂಧಿ ಸತ್ಯವನ್ನು ಮಂಡಿಸುತ್ತಿದ್ದರು ಮತ್ತು ಅದನ್ನು ಮಂಡಿಸುತ್ತಲೇ ಇರುವರು. ಇದು ಭಾಜಪಗೆ ಜೀರ್ಣವಾಗುತ್ತಿಲ್ಲ. ಹೀಗಾಗಿ ರಾಹುಲ್ ಗಾಂಧಿಯವರ ಸಂಸದ ಸ್ಥಾನವನ್ನು ಕಸಿದುಕೊಳ್ಳುವುದರಿಂದ ಸಮಸ್ಯೆಗಳೆಲ್ಲ ಮುಗಿಯುತ್ತವೆ ಎಂದು ಯಾರಾದರೂ ಭಾವಿಸಿದ್ದರೆ ಅದು ತಪ್ಪು. ನಾವು ಸಂಸದೀಯ ತನಿಖಾ ಸಮಿತಿಗೆ ಆಗ್ರಹಿಸುವುದನ್ನು ಮುಂದುವರಿಸುತ್ತೇವೆ. ಹೋರಾಟ ಮುಂದುವರಿಸುತ್ತೇವೆ. ಪ್ರಜಾಪ್ರಭುತ್ವ ಉಳಿಸಲು ಜೈಲಿಗೆ ಹೋಗಬೇಕಾಗಿ ಬಂದರೂ ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
2. ರಾಜಸ್ಥಾನದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಅಶೋಕ ಗೆಹಲೊತ್ ಇವರು ಮಾತನಾಡಿ, ರಾಹುಲ್ ಗಾಂಧಿಯವರ ಸಂಸದ ಸ್ಥಾನವನ್ನು ರದ್ದು ಪಡಿಸುವುದು ಸರ್ವಾಧಿಕಾರದ ಉದಾಹರಣೆಯಾಗಿದೆ. ಭಾಜಪ ಇದೇ ರೀತಿಯಲ್ಲಿ ಇಂದಿರಾ ಗಾಂಧಿ ವಿರುದ್ಧ ಕ್ರಮ ಕೈಗೊಂಡಿದ್ದನ್ನು ಭಾಜಪ ಮರೆಯುತ್ತಿದೆ; ಆದರೆ ನಂತರ ಅವರು ಪೇಚಿಗೆ ಸಿಲುಕಿಕೊಂಡಿದ್ದರು. ರಾಹುಲ್ ಗಾಂಧಿ ದೇಶದ ಧ್ವನಿಯಾಗಿದ್ದು, ಇದು ಸರ್ವಾಧಿಕಾರದ ವಿರುದ್ಧ ಪ್ರಬಲವಾಗಲಿದೆ ಎಂದು ಹೇಳಿದರು.
ಈ ಮೊದಲು ಸದಸ್ಯ ಸ್ಥಾನವನ್ನು ಕಳೆದುಕೊಂಡಿರುವವರು
1. ಇದೇ ವರ್ಷದಲ್ಲಿ, ಲಕ್ಷದ್ವೀಪ ಸಂಸದ ಮುಹಮ್ಮದ್ ಅವರನ್ನು ಕೊಲೆಯ ಪ್ರಕರಣದಲ್ಲಿ ಅಪರಾಧಿ ಎಂದು ನ್ಯಾಯಾಲಯವು ಘೋಷಿಸಿದ ನಂತರ ಅವರ ಸದಸ್ಯ ಸ್ಥಾನವನ್ನು ರದ್ದುಗೊಳಿಸಲಾಗಿತ್ತು; ಆದರೆ ಇದಕ್ಕೆ ಕೇರಳ ಉಚ್ಚ ನ್ಯಾಯಾಲಯ ತಡೆ ನೀಡಿತ್ತು.
2. ಸಮಾಜವಾದಿ ಪಕ್ಷದ ಮುಖಂಡ ಆಜಮ್ ಖಾನ್ ಇವರು ಕಳೆದ ವರ್ಷ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಅವರ ಸದಸ್ಯ ಸ್ಥಾನವನ್ನು ರದ್ದುಗೊಳಿಸಲಾಗಿತ್ತು.
3. ನೂರಾರು ಕೋಟಿ ರೂಪಾಯಿ ಮೌಲ್ಯದ ಮೇವು ಹಗರಣದಲ್ಲಿ ಲಾಲು ಪ್ರಸಾದ್ ಯಾದವ್ ತಪ್ಪಿತಸ್ಥರೆಂದು ಸಾಬೀತಾದ ನಂತರ ಅವರ ಸಂಸದ ಸದಸ್ಯ ಸ್ಥಾನವನ್ನು ರದ್ದುಪಡಿಸಲಾಯಿತು.
4. ಉತ್ತರಪ್ರದೇಶದ ಮುಜಫ್ಫರ್‌ನಗರ ಗಲಭೆ ಪ್ರಕರಣದಲ್ಲಿ ಭಾಜಪದ ಶಾಸಕ ವಿಕ್ರಮ್ ಸೈನಿ ತಪ್ಪಿತಸ್ಥರಾಗಿದ್ದರು. ಇದರಿಂದಾಗಿ ಅವರ ವಿಧಾನಸಭೆಯ ಸದಸ್ಯತ್ವ ತೆಗೆದುಹಾಕಬೇಕಾಯಿತು.