ಮಾಹಿಮ ಸಮುದ್ರದಲ್ಲಿ ಗೋರಿಯ ಸುತ್ತಲಿನ ಅನಧಿಕೃತ ಕಟ್ಟಡ ಕಾಮಗಾರಿಗಳನ್ನು ಸರಕಾರದಿಂದ ತೆರುವು !

ರಾಜ ಠಾಕ್ರೆಯವರು ಎಚ್ಚರಿಕೆಯ ನೀಡಿದ ಪರಿಣಾಮ !

ಮುಂಬಯಿ – ರಾಜ ಠಾಕ್ರೆಯವರು ಕರೆ ನೀಡಿದ ಬಳಿಕ ಮಾಹಿಮ್ ನ ಸಮುದ್ರದಲ್ಲಿರುವ ಗೋರಿಯ ಸುತ್ತವಿರುವ ಅನಧಿಕೃತ ಕಟ್ಟಡ ಕಾಮಗಾರಿಗಳನ್ನು ಮಾರ್ಚ 23 ರಂದು ಮುಂಬಯಿ ಮಹಾನಗರಪಾಲಿಕೆಯು ನೆಲಸಮ ಮಾಡಿತು. ಯುಗಾದಿಯ ನಿಮಿತ್ತ ಶಿವಾಜಿ ಪಾರ್ಕ ಮೈದಾನದಲ್ಲಿ ನಡೆದ ಮ.ನ.ಸೆ ಪಕ್ಷದ ಸಾರ್ವಜನಿಕ ಸಭೆಯಲ್ಲಿ ರಾಜ ಠಾಕ್ರೆಯವರು ಗೋರಿಯ ಸುತ್ತಲಿನ ಅನಧಿಕೃತ ಕಟ್ಟಡ ಕಾಮಗಾರಿಗಳನ್ನು ಒಂದು ತಿಂಗಳಿನಲ್ಲಿ ಕೆಡವದಿದ್ದರೆ, ಗೋರಿಯ ಪಕ್ಕದಲ್ಲಿ ಗಣಪತಿಯ ಭವ್ಯ ದೇವಸ್ಥಾನವನ್ನು ಕಟ್ಟುವೆವು, ಎಂದು ಎಚ್ಚರಿಕೆ ನೀಡಿದ್ದರು. ತದನಂತರ ಎಚ್ಚರಗೊಂಡ ಸರಕಾರವು ಈ ಕ್ರಮವನ್ನು ಕೈಗೊಂಡಿತು.

ರಾಜ ಠಾಕ್ರೆಯವರು ಮನಸೆ ಪಕ್ಷದ ಸಭೆಯಲ್ಲಿ ಗೋರಿಯ ಸುತ್ತಲೂ ಹೆಚ್ಚುತ್ತಿರುವ ಅನಧಿಕೃತ ಕಟ್ಟಡ ಕಾಮಗಾರಿಯ ಛಾಯಾಚಿತ್ರವನ್ನು ತೋರಿಸಿದರು. ಕಳೆದ 2 ವರ್ಷಗಳಲ್ಲಿ ಗೋರಿಯ ಸುತ್ತಲೂ ದರ್ಗಾ ಕಟ್ಟುವ ಕೆಲಸ ಪ್ರಾರಂಭವಾಗಿದೆ. ಮಾಹಿಮ್ ನ ಸಮುದ್ರದ ಗೋರಿಯ ಸುತ್ತಲೂ ಮತ್ತೊಂದು `ಹಾಜಿ ಅಲಿ’ ನಿರ್ಮಾಣವಾಗುತ್ತಿದೆಯೆಂದು ಅವರು ಈ ಸಮಯದಲ್ಲಿ ಆರೋಪಿಸಿದರು. ರಾಜ ಠಾಕ್ರೆಯವರ ಎಚ್ಚರಿಕೆಯ ಬಳಿಕ ಮುಂಬಯಿ ಪೊಲೀಸರು ರಾತ್ರಿಯಿಂದಲೇ ಈ ಗೋರಿಯ ಸುತ್ತಲೂ ಬೃಹತ್ ಪ್ರಮಾಣದಲ್ಲಿ ಗಸ್ತು ನಡೆಸಲಾಯಿತು. ತದನಂತರ ಮಾರ್ಚ 23 ರಂದು ಮುಂಬಯಿ ಮಹಾನಗರಪಾಲಿಕೆಯ ಅತಿಕ್ರಮಣ ವಿರೋಧಿ ದಳದ ಅಧಿಕಾರಿ ಬೆಳಿಗ್ಗೆ 7.00 ಗಂಟೆಗೆ ಮಾಹಿಮ್ ಸಮುದ್ರದ ಸ್ಥಳಕ್ಕೆ ಬಂದರು. ಬೆಳಿಗ್ಗೆಯೇ ಬೃಹತ್ ಪ್ರಮಾಣದಲ್ಲಿ ಪೊಲೀಸರ ಬಂದೋಬಸ್ತಿನಲ್ಲಿ ಗೋರಿಯ ಸುತ್ತಲಿನ ಅನಧಿಕೃತ ಕಟ್ಟಡ ಕಾಮಗಾರಿಗಳನ್ನು ಕೆಡವಲಾಯಿತು.

ಸಂಪಾದಕೀಯ ನಿಲುವು

ಎಚ್ಚರಿಕೆ ನೀಡಿದನಂತರ ಎಚ್ಚರಗೊಂಡ ಸರಕಾರ ಇಲ್ಲಿಯವರೆಗೆ ಈ ಅನಧಿಕೃತ ಕಟ್ಟಡ ಕಾಮಗಾರಿಯ ಮೇಲೆ ಏಕೆ ಕ್ರಮಕೈಗೊಳ್ಳಲಿಲ್ಲ ? ಸಂಬಂಧಪಟ್ಟ ಅಧಿಕಾರಿಗಳ ಮೇಲೆಯೂ ಕ್ರಮ ಕೈಕೊಳ್ಳಬೇಕು !

ಸರಕಾರವು ರಾಜ್ಯದಲ್ಲಿ ಇಂತಹ ಎಲ್ಲ ಅನಧಿಕೃತ ಗೋರಿ, ದರ್ಗಾಗಳು ಮತ್ತು ಮಸೀದಿಗಳನ್ನು ಹುಡುಕಿ ಕ್ರಮ ಕೈಗೊಳ್ಳಬೇಕು ಎಂದು ಅಪೇಕ್ಷೆ !