ನ್ಯಾಯಾಲಯದಿಂದ ಕೂಡಲೇ ಜಾಮೀನು !
ಸೂರತ – ‘ಮೋದಿ’ ಈ ಮನೆತನದ ಹೆಸರಿನಿಂದ ಮಾಡಿರುವ ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಮುಖಂಡರು ರಾಹುಲ ಗಾಂಧಿ ಇವರಿಗೆ ಸೂರತ ಜಿಲ್ಲಾ ನ್ಯಾಯಾಲಯವು ೨ ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ೨೦೧೯ ರಲ್ಲಿ ಕರ್ನಾಟಕದಲ್ಲಿನ ಒಂದು ಸಾರ್ವಜನಿಕ ಸಭೆಯಲ್ಲಿ ಗಾಂಧೀಜಿಯವರು ‘ಎಲ್ಲಾ ಕಳ್ಳರ ಹೆಸರು ‘ಮೋದಿ’ ಹೇಗೆ ?’ ಎಂದು ಪ್ರಶ್ನೆ ಕೇಳಿದ್ದರು. ಅದರ ನಂತರ ಸೂರತದಲ್ಲಿ ಮೋದಿ ಸಮಾಜದಿಂದ ತೀವ್ರ ಅಕ್ಷೇಪ ವ್ಯಕ್ತಪಡಿಸಿ ಗಾಂಧಿಯವರ ವಿರುದ್ಧ ಮೊಕ್ಕದಮೆ ದಾಖಲಿಸಿದರು. ಈ ಪ್ರಕರಣದಲ್ಲಿ ಮಾರ್ಚ್ ೧೭, ೨೦೨೩ ರಲ್ಲಿ ಕೊನೆಯ ತೀರ್ಪು ಕಾದಿರಸಲಾಗಿತ್ತು. ನ್ಯಾಯಾಲಯವು ಮಾರ್ಚ್ ೨೩ ರಂದು ಗಾಂಧಿಯವರನ್ನು ದೋಷಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಿತು. ಅದರ ನಂತರ ಅವರಿಗೆ ಜಾಮೀನು ಕೂಡ ದೊರೆಯಿತು. ಇದರ ಜೊತೆಗೆ ಗಾಂಧಿಯವರಿಗೆ ಮೇಲಿನ ನ್ಯಾಯಾಲಯದಲ್ಲಿ ಈ ಶಿಕ್ಷೆಯ ವಿರುದ್ಧ ೩೦ ದಿನದಲ್ಲಿ ಆಹ್ವಾನ ನೀಡುವ ಸವಲತ್ತು ನೀಡಿದೆ.
2019ರ ಕೋಲಾರದ ಭಾಷಣಕ್ಕೆ ರಾಹುಲ್ ಗಾಂಧಿಗೆ ಗುಜರಾತ್ನಲ್ಲಿ ಶಿಕ್ಷೆ! ಅವತ್ತು ರಾಹುಲ್ ಗಾಂಧಿ ಮಾತಾಡಿದ್ದಾದ್ರು ಏನು? ಇಲ್ಲಿದೆ ಪೂರ್ಣ ಮಾಹಿತಿ.. #Rahulgandhi #Congress #Kolar https://t.co/n3sPtDQdCu
— vijaykarnataka (@Vijaykarnataka) March 23, 2023
ರಾಹುಲ ಗಾಂಧಿಯವರು ಅವರ ಬಂಧನಕ್ಕೆ ಉಚ್ಚ ನ್ಯಾಯಾಲಯದಲ್ಲಿ ಆವಾಹನೆ ನೀಡಬಹುದು. ಸುರತ್ ನ ನ್ಯಾಯಾಲಯದ ಆದೇಶಕ್ಕೆ ತಡೆ ಆಜ್ಞೆ ನೀಡಿದರೆ ರಾಹುಲ ಗಾಂಧಿಯವರ ಸಂಸದ ಸ್ಥಾನ ಉಳಿಯಬಹುದು; ಆದರೆ ತಡೆ ಆಜ್ಞೆ ದೊರೆಯದಿದ್ದರೆ, ಅವರಿಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಬೇಕಾದಬಹುದು, ಇಂತಹ ಪರಿಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯ ತಡೆ ಆಜ್ಞೆ ನೀಡಿದರೆ, ರಾಹುಲ ಗಾಂಧಿ ಇವರ ಸಂಸದ ಸ್ಥಾನ ಉಳಿಯಬಹುದು ಇಲ್ಲವಾದರೆ ಅದು ರದ್ದಾಗುವುದು. ಗಾಂಧಿ ಇವರಿಗೆ ೨ ವರ್ಷದ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಮತ್ತು ಅವರು ಮುಂದಿನ ೮ ವರ್ಷ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲ.
(ಸೌಜನ್ಯ : News18 Kannada)
ಸತ್ಯ ಇದುವೇ ನನ್ನ ದೇವರು ! – ರಾಹುಲ ಗಾಂಧಿ
मेरा धर्म सत्य और अहिंसा पर आधारित है। सत्य मेरा भगवान है, अहिंसा उसे पाने का साधन।
– महात्मा गांधी
— Rahul Gandhi (@RahulGandhi) March 23, 2023
ನ್ಯಾಯಾಲಯವು ಶಿಕ್ಷೆ ವಿಧಿಸಿದ ನಂತರ ರಾಹುಲ ಗಾಂಧಿಯವರು ಟ್ವೀಟ್ ಮೂಲಕ ತಮ್ಮ ವಿಚಾರ ಮಂಡಿಸಿದ್ದಾರೆ. ಇದರಲ್ಲಿ ಗಾಂಧಿ ಇವರು ಮ. ಗಾಂಧಿಯವರ ಮುಂದಿನ ವಾಕ್ಯ ಬರೆದಿದ್ದಾರೆ. ‘ಸತ್ಯವೇ ನನ್ನ ದೇವರು ಮತ್ತು ಅದು ಅಹಿಂಸಾಗೆ ಆಧಾರಿಸಿದೆ. ಸತ್ಯ ಇದೇ ನನ್ನ ದೇವರು ಮತ್ತು ಅಹಿಂಸ ಅದು ಪಡೆಯುವ ಸಾಧನವಾಗಿದೆ.- ಮ. ಗಾಂಧಿ’