ಶ್ರೀನಗರ (ಜಮ್ಮು-ಕಾಶ್ಮೀರ) – ಕೇಂದ್ರ ಗೃಹ ಸಚಿವ ಅಮಿತ್ ಶಾ ಇವರು ಮಾರ್ಚ್ ೨೨ ರಂದು ಕಾಶ್ಮೀರದ ಕುಪ್ವಾಡದಿಂದ ೩೦ ಕಿಮೀ ದೂರದಲ್ಲಿರುವ, ಭಾರತ-ಪಾಕ್ ನಿಯಂತ್ರಣ ರೇಖೆ ಬಳಿಯ ಕರ್ನಾಹ್ ಸೆಕ್ಟರ್‌ನ ಟೀಟ್ವಾಲ್‌ನಲ್ಲಿರುವ ಪುರಾತನ ಶ್ರೀ ಶಾರದಾ ದೇವಿ ದೇವಸ್ಥಾನವನ್ನು (ಶಾರದಾ ಪೀಠ) ಜೀರ್ಣೋದ್ಧಾರದ ನಂತರ ಆನ್‌ಲೈನ್ ಮೂಲಕ ಉದ್ಘಾಟಿಸಿದರು. ದೇವಾಲಯವು ಕಳೆದ ಅನೇಕ ದಶಕಗಳಿಂದ ಶೋಚನೀಯ ಸ್ಥಿತಿಯಲ್ಲಿತ್ತು.
ಈ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ ಮಾತನಾಡಿ, ನಮ್ಮ ಸರಕಾರ ಕರತಾಪುರ ಕ್ವಾರಿಡಾರ್‌ನಂತೆ (ಸುಸಜ್ಜಿತ ಮಾರ್ಗ) ಶ್ರೀ ಶಾರದಾದೇವಿ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ನಿರ್ಮಿಸುತ್ತಿದೆ. ೩೭೦ ನೇ ವಿಧಿಯನ್ನು ರದ್ದುಪಡಿಸಿದ ನಂತರ, ಕಾಶ್ಮೀರದ ಪ್ರಾಚೀನ ಸಂಪ್ರದಾಯಗಳು ಮತ್ತು ಸಂಸ್ಕೃತಿಗಳನ್ನು ಪುನಃಸ್ಥಾಪಿಸಲಾಗುತ್ತಿದೆ. ಶಾರದಾ ಪೀಠವು ಭಾರತದ ಸಾಂಸ್ಕೃತಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಪರಂಪರೆಯ ಐತಿಹಾಸಿಕ ಕೇಂದ್ರವಾಗಿದೆ. ಒಂದು ಕಾಲದಲ್ಲಿ ಶಾರದಾ ಪೀಠವು ಉಪಖಂಡದಲ್ಲಿನ ಜ್ಞಾನದ ಕೇಂದ್ರವಾಗಿತ್ತು. ಆಧ್ಯಾತ್ಮಿಕ ಜ್ಞಾನಕ್ಕಾಗಿ ಎಲ್ಲಾ ದೇಶಗಳಿಂದ ವಿದ್ವಾಂಸರು ಇಲ್ಲಿಗೆ ಬರುತ್ತಿದ್ದರು. ಚೈತ್ರ ನವರಾತ್ರಿಯ ಮೊದಲು ಇಲ್ಲಿ ತಾಯಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಇದು ಕೇವಲ ದೇವಸ್ಥಾನದ ಜೀರ್ಣೋದ್ಧಾರವಾಗಿರದೇ, ಶಾರದ ಸಂಸ್ಕೃತಿಯ ಆವಿಷ್ಕಾರದ ಪ್ರಾರಂಭವಾಗಿದೆ. ಇದು ಶಕ್ತಿಪೀಠಗಳಲ್ಲಿ ಒಂದಾಗಿದೆ. ಇಲ್ಲಿ ಮಾತಾ ಸತಿಯ ಎಡಗೈ ಇಲ್ಲಿ ಬಿದ್ದಿತ್ತು, ಹಾಗೆಯೇ ಕ್ಷೀರಸಾಗರದಲ್ಲಿ ಅಮೃತ ಮಂಥನದಿಂದ ದೊರೆತ ಅಮೃತವನ್ನು ಇಲ್ಲಿಗೆ ತರಲಾಗಿತ್ತು. ಅದರ ೨ ಹನಿಗಳು ಇಲ್ಲಿ ಬಿದ್ದು ವಿಗ್ರಹಗಳಾಗಿ ರೂಪಗೊಂಡವು. ಇಲ್ಲಿ ಆದಿ ಶಂಕರಾಚಾರ್ಯರು ಬಂದು ಶ್ರೀ ಸರಸ್ವತಿ ಮಾತೆಯನ್ನು ಸ್ತುತಿಸಿದರು.
Kashmir Sharada Mandir- ಕಾಶ್ಮೀರ ಗಡಿ ನಿಯಂತ್ರಣ ರೇಖೆ ಬಳಿ ಲೋಕಾರ್ಪಣೆಗೊಂಡಿದೆ ಐತಿಹಾಸಿಕ ಶಾರದಾ ಮಂದಿರ
#tejaswisurya https://t.co/KQMRGLrauL— vijaykarnataka (@Vijaykarnataka) March 22, 2023
ಈ ದೇವಸ್ಥಾನದ ಜೀರ್ಣೋದ್ಧಾರವನ್ನು ಡಿಸೆಂಬರ್ ೨೦೨೧ ರಲ್ಲಿ ಆರಂಭಿಸಲಾಗಿತ್ತು. ‘ಸೇವ್ ಶಾರದಾ ಸಮಿತಿ’ಯು ದೇವಸ್ಥಾನ ನಿರ್ಮಾಣ ಸಮಿತಿಯನ್ನು ರಚಿಸಿತು. ಇದರಲ್ಲಿ ೩ ಸ್ಥಳೀಯ ಮುಸಲ್ಮಾನರು, ೧ ಸಿಖ್ ಮತ್ತು ೧ ಕಾಶ್ಮೀರಿ ಹಿಂದೂಗಳ ಸಮಾವೇಶವಿದೆ. ದೇವಾಲಯದ ಜೊತೆಗೆ ಗುರುದ್ವಾರ ಮತ್ತು ಮಸೀದಿಯನ್ನು ಸಹ ನಿರ್ಮಿಸಲಾಗುತ್ತಿದೆ.
ಶಾರದ ಪೀಠದ (ದೇವಸ್ಥಾನ) ಇತಿಹಾಸ !
ಶಾರದಾ ಪೀಠವು ಶ್ರೀ ಸರಸ್ವತಿ ದೇವಿಯ ಪ್ರಾಚೀನ ದೇವಾಲಯವಾಗಿದೆ. ಇದು ೨ ಸಾವಿರದ ೪೦೦ ವರ್ಷಗಳಿಗಿಂತಲೂ ಪುರಾತನವಾಗಿದೆ. ಇದು ಶಕ್ತಿಯನ್ನು ಪೂಜಿಸುವ ಶಾಕ್ತ ಸಂಪ್ರದಾಯದ ಮೊದಲ ತಿರ್ಥಕ್ಷೇತ್ರವಾಗಿದೆ. ಕಾಶ್ಮೀರದಲ್ಲಿ ಈ ದೇವಸ್ಥಾನದಿಂದಲೇ ದೇವಿಯನ್ನು ಮೊಟ್ಟಮೊದಲು ಪೂಜಿಸಲು ಆರಂಭವಾಯಿತು. ಇದರ ನಂತರವೇ ಶ್ರೀ ವೈಷ್ಣೋದೇವಿ ಮತ್ತು ಖೀರ್ ಭವಾನಿ ದೇವಸ್ಥಾನಗಳನ್ನು ಸ್ಥಾಪಿಸಲಾಯಿತು.
ಈ ದೇವಾಲಯವನ್ನು ಮಗಧ ಚಕ್ರವರ್ತಿ ಅಶೋಕನು ಕ್ರಿ.ಪೂ ೨೩೭ ರಲ್ಲಿ ನಿರ್ಮಿಸಿದನು. ಅದರ ಮೇಲೆ ಹಲವು ಬಾರಿ ದಾಳಿ ನಡೆಸಲಾಯಿತು. ಈ ದೇವಸ್ಥಾನದ ಕೊನೆಯ ಜೀರ್ಣೋದ್ಧಾರವನ್ನು ೧೯ ನೇ ಶತಮಾನದಲ್ಲಿ ಡೋಗ್ರಾ ಸಾಮ್ರಾಜ್ಯದ ಸಂಸ್ಥಾಪಕ ಮತ್ತು ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಗುಲಾಬ ಸಿಂಗ್ ಜಾಮ್ವಾಲ್ ಅವರು ಮಾಡಿದರು. ಈ ದೇವಸ್ಥಾನವು ಕಳೆದ ೭ ದಶಕಗಳಿಂದ ಪಾಳುಬಿದ್ದಿತ್ತು.
ಸ್ಥಳಿಯರ, ಈ ಪೀಠದಲ್ಲಿ ಶಾರದಾ ದೇವಿಯ ೩ ಶಕ್ತಿಗಳ ಸಂಗಮವಿದೆ ಎಂದು ಅಭಿಪ್ರಾಯವಾಗಿದೆ. ಇದರಲ್ಲಿ ಮೊದಲನೇಯದು ಶಾರದಾ (ವಿದ್ಯೆಯ ದೇವತೆ), ಎರಡನೆಯದು ಸರಸ್ವತಿ (ಜ್ಞಾನದ ದೇವತೆ) ಮತ್ತು ಮೂರನೆಯದು ವಾಗ್ದೇವಿ (ವಾಣಿಯ ದೇವತೆ) ಇವರ ಸಂಗಮವಿದೆ.