೨೦೨೪ ರ ಮೊದಲೇ ಏಕರೂಪ ನಾಗರಿಕ ಕಾನೂನು ಜಾರಿಗೊಳಿಸಿ ! – ಯೋಗ ಋಷಿ ಬಾಬಾ ರಾಮದೇವ ಇವರ ಬೇಡಿಕೆ

ಯೋಗ ಗುರು ಬಾಬಾ ರಾಮದೇವ್

ಹರಿದ್ವಾರ – ಏಕರೂಪ ನಾಗರಿಕ ಸಂಹಿತೆ ಮತ್ತು ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತರುವಂತೆ ಯೋಗ ಋಷಿ ರಾಮದೇವ್ ಬಾಬಾ ಮೋದಿ ಸರಕಾರದ ಕಡೆ ಆಗ್ರಹಿಸಿದ್ದಾರೆ. ‘ಈ ಕಾನೂನು ೨೦೨೪ ರ ಮೊದಲೇ ಜಾರಿಗೊಳಿಸಬೇಕೆಂದು ಅವರು ಸರಕಾರದಿಂದ ನಿರೀಕ್ಷಿಸಿದ್ದಾರೆ. ಇಲ್ಲಿ ನಡೆಯುವ ೯ ದಿನಗಳ ಸನ್ಯಾಸ ದೀಕ್ಷೆ ಮಹೋತ್ಸವವನ್ನು ಉದ್ಘಾಟಿಸುತ್ತಾ ಮಾತನಾಡಿದರು.

ರಾಮದೇವ ಬಾಬಾ ತಮ್ಮ ಮಾತನ್ನು ಮುಂದುವರೆಸುತ್ತಾ, ಯಾವ ಮಹತ್ವಾಕಾಂಕ್ಷೆಯಿಂದ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆಯೋ ಅವರ ಕನಸಿನ ಭಾರತವನ್ನು ನಿರ್ಮಿಸುವ ಕೆಲಸ ಪ್ರಾರಂಭವಾಗಿದೆ. ಭಾರತದಲ್ಲಿ ಯಾರು ರಾಮವಿರೋಧಿಗಳು, ದೇಶದ್ರೋಹಿಗಳಿದ್ದಾರೆಯೋ ಅವರು ದಂಗಾಗಿದ್ದಾರೆ; ಏಕೆಂದರೆ ಈಗ ಶ್ರೀರಾಮ ಮಂದಿರವು ತನ್ನ ವಿಖ್ಯಾತಿಯೊಂದಿಗೆ ಪೂರ್ಣತ್ವವನ್ನು ಪಡೆಯುತ್ತದೆ. ಎಂದು ಹೇಳಿದರು.

ಋಷಿಗ್ರಾಮದಲ್ಲಿ ೬೦ ಯುವಕರು ಮತ್ತು ೪೦ ಯುವತಿಯರು ಸನ್ಯಾಸ ದೀಕ್ಷೆ ತೆಗೆದುಕೊಳ್ಳಲಿದ್ದಾರೆ. ಯೋಗಋಷಿ ರಾಮದೇವ್ ಬಾಬಾ ಅವರು ಎಲ್ಲರಿಗೂ ಸನ್ಯಾಸ ದೀಕ್ಷೆ ನೀಡಲಿದ್ದಾರೆ. ಇದರೊಂದಿಗೆ ಹಬ್ಬದ ಸಂದರ್ಭದಲಿ ೫೦೦ ಯುವಕ-ಯುವತಿಯರಿಗೆ ಬ್ರಹ್ಮಚರ್ಯ ದೀಕ್ಷೆ ನೀಡಲಾಗುವುದು ಎಂದು ರಾಮದೇವ್ ಬಾಬಾ ಅವರು ಮಾಹಿತಿ ನೀಡಿದ್ದಾರೆ.