ವಿಶ್ವ ಸಂಸ್ಥೆಯ ವರದಿಯಲ್ಲಿನ ಮಾಹಿತಿ ಲಭ್ಯ
ಕ್ಯಾಲಿಫೋರ್ನಿಯಾ – ವಿಶ್ವ ಸಂಸ್ಥೆಯು ಮಂಡಿಸಿದ `ಯುನೈಟೆಡ್ ನೇಶನ್ಸ ವಾಟರ ಡೆವಲಪಮೆಂಟ ರಿಪೋರ್ಟ 2023’ ಅನುಸಾರ ಜಗತ್ತಿನ ಶೇ. 26 ರಷ್ಟು ಜನರಿಗೆ ಕುಡಿಯಲು ಶುದ್ಧ ನೀರು ಲಭ್ಯವಿಲ್ಲ, ಹಾಗೆಯೇ ಶೇ. 46 ರಷ್ಟು ಜನರ ಬಳಿ ಸ್ವಚ್ಛತೆಯ ಮೂಲಭೂತ ಸೌಕರ್ಯಗಳು ಲಭ್ಯವಿಲ್ಲ. ಈ ವರದಿಯಲ್ಲಿ 2030 ರ ವರೆಗೆ ಜನರಿಗೆ ಶುದ್ಧ ನೀರು ಮತ್ತು ಸ್ವಚ್ಛತೆಯ ಮೂಲಭೂತ ಸೌಕರ್ಯಗಳು ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಈ ವರದಿಯಲ್ಲಿ ನಮೂದಿಸಿರುವಂತೆ ಕಳೆದ 40 ವರ್ಷಗಳಿಂದ ವಿಶ್ವ ಮಟ್ಟದಲ್ಲಿ ನೀರಿನ ಉಪಯೋಗ ಪ್ರತಿವರ್ಷ ಶೇ. 1 ರಷ್ಟು ಹೆಚ್ಚಳವಾಗುತ್ತಿದೆ. ಜನಸಂಖ್ಯೆ ಹೆಚ್ಚಳ, ಸಾಮಾಜಿಕ–ಆರ್ಥಿಕ ಅಭಿವೃದ್ಧಿ ಈ ಕಾರಣಗಳಿಂದ 2050 ರ ವರೆಗೆ ವಿಶ್ವ ಮಟ್ಟದಲ್ಲಿ ನೀರಿನ ಉಪಯೋಗ ಪ್ರತಿವರ್ಷ ಶೇ. 1 ರಷ್ಟು ಹೆಚ್ಚಳವಾಗಲಿದೆ. ಈ ವರದಿಯನುಸಾರ ಉಷ್ಣತೆಯ ಹೆಚ್ಚಳದಿಂದ ಮಳೆಗಾಲದಿಂದ ಲಭ್ಯವಾಗುವ ನೀರಿನ ಪ್ರಮಾಣ ಮುಂದಿನ ಕೆಲವು ಕಾಲಾವಧಿಯಲ್ಲಿ ಇಳಿಕೆಯಾಗಲಿದೆ. ಮಧ್ಯ ಆಫ್ರಿಕಾ, ಪೂರ್ವ ಏಷ್ಯಾ, ದಕ್ಷಿಣ ಅಮೇರಿಕಾ ಮುಂತಾದ ಸ್ಥಳಗಳಲ್ಲಿ ನೀರಿನ ಕೊರತೆಯಿದ್ದು, ಈ ಸ್ಥಳಗಳಲ್ಲಿ ಈ ಕೊರತೆ ಅಧಿಕ ಪ್ರಮಾಣದಲ್ಲಿ ಕಾಡುವ ಸಾಧ್ಯತೆಯಿದೆ.
#WorldWaterDay | A new report launched on the eve of the first major U.N. conference on water in over 45 years says 26% of the world’s population doesn’t have access to safe drinking water and 46% lack access to basic sanitation.https://t.co/s8erwVp5Xh
— The Hindu (@the_hindu) March 22, 2023