ಛತ್ರಪತಿ ಸಂಭಾಜಿ ನಗರದಲ್ಲಿ ‘ಹಿಂದೂ ಜನಗರ್ಜನಾ ಆಂದೋಲನ’ !

ಛತ್ರಪತಿ ಸಂಭಾಜಿ ನಗರ ಮರುನಾಮಕರಣದ ಬೆಂಬಲಿಸಲು ಮತ್ತು ‘ಲವ್ ಜಿಹಾದ್’, ಮತಾಂತರದ ವಿರುದ್ಧ ಕಠಿಣ ಕಾನೂನು ರೂಪಿಸುವದಕ್ಕಾಗಿ ೬೦ ಸಾವಿರಕ್ಕಿಂತಲೂ ಹೆಚ್ಚಿನ ಹಿಂದೂ ಜನರು ಒಗ್ಗೂಡಿರುವ ದಾಖಲೆ !

ಛತ್ರಪತಿ ಸಂಭಾಜಿನಗರ ಮಾರ್ಚ್ ೧೯ (ವಾರ್ತೆ) – ಎಲ್ಲಾ ಹಿಂದುತ್ವನಿಷ್ಟ ಸಂಘಟನೆಗಳು ಮತ್ತು ಎಲ್ಲಾ ಹಿಂದೂ ಸಮಾಜದ ವತಿಯಿಂದ ಛತ್ರಪತಿ ಸಂಭಾಜಿ ನಗರದಲ್ಲಿ ಮಾರ್ಚ್ ೧೯ ರಂದು ‘ಹಿಂದೂ ಜನಗರ್ಜನಾ ಆಂದೋಲನ’ ನಡೆಸಲಾಯಿತು. ಛತ್ರಪತಿ ಸಂಭಾಜಿ ನಗರ ಮರುನಾಮಕರಣವನ್ನು ಬೆಂಬಲಿಸಿ ಹಾಗೂ ಲವ್ ಜಿಹಾದ್, ಮತಾಂತರ, ಗೋ ಹತ್ಯೆಯ ವಿರುದ್ಧ ಕಠಿಣ ಕಾನೂನು ರೂಪಿಸಬೇಕು, ಇದಕ್ಕಾಗಿ ೬೦ ಸಾವಿರಕ್ಕಿಂತಲೂ ಹೆಚ್ಚಿನ ಹಿಂದುಗಳು ಈ ಆಂದೋಲನದಲ್ಲಿ ಸಹಭಾಗಿಯಾಗಿ, ಹಿಂದೂ ಶಕ್ತಿಯ ದಾಖಲೆ ನಿರ್ಮಿಸಿದ್ದಾರೆ. ಕ್ರಾಂತಿ ವೃತ್ತದಿಂದ ಛತ್ರಪತಿ ಶಿವಾಜಿ ಮಹಾರಾಜರ ಸ್ಮಾರಕಕ್ಕೆ ವಂದನೆ ಸಲ್ಲಿಸಿ ಆರಂಭವಾದ ಆಂದೋಲನ ಸತೀಶ್ ಮೋಟಾರ್ಸ್ – ಸ್ವಾತಂತ್ರ್ಯ ವೀರ ಸಾವರ್ಕರ್ ವೃತ್ತ ದ ಮೂಲಕ ಮಹಾತ್ಮ ಫುಲೆ ವೃತ್ತದಲ್ಲಿ ಮುಕ್ತಾಯವಾಯಿತು. ಅಲ್ಲಿ ಆಂದೋಲನವು ಸಭೆಯಾಗು ರೂಪಗೊಂಡಿತು. ಸಮಾರೋಪದ ಸಮಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮನೆತನದ ವಂಶಜರು ಮತ್ತು ಭಾಜಪ ಶಾಸಕ ಶ್ರೀ. ಶಿರೇಂದ್ರರಾಜೇ ಭೋಸಲೆ, ಪಾಲಕ ಸಚಿವ ಸಂದೀಪಾನ ಭುಮರೆ, ಭಾಗ್ಯನಗರದ ಹಿಂದುತ್ವನಿಷ್ಠ ಸಂಸದ ರಾಜಸಿಂಹ ಠಾಕೂರ, ‘ಸುದರ್ಶನ್ ನ್ಯೂಸ್ ಚಾನೆಲ್’ ನ ಮುಖ್ಯ ಸಂಪಾದಕರಾದ ಶ್ರೀ. ಸುರೇಶ ಚೌಹಾಣಕೆ, ಸಹಕಾರಿ ಸಚಿವರಾದ ಶ್ರೀ. ಅತುಲ್ ಸಾವೆ, ಮರಾಠಿ ಕ್ರಾಂತಿ ಮೋರ್ಚಾದ ಶ್ರೀ. ವಿನೋದ ಪಾಟೀಲ್, ಶ್ರೀ. ಅಭಿಜಿತ ದೇಶಮುಖ, ಶ್ರೀ. ರಾಜೇಂದ್ರ ಜಂಜಾಳ, ರಾಷ್ಟ್ರೀಯ ಧರ್ಮಚಾರ್ಯ ಹ.ಭ.ಪ. ಜನಾರ್ಧನ ಮಹಾರಾಜ ಮೇಟೆ, ಶ್ರೀ. ಅಪ್ಪಾ ಬಾರಗಜೆ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸುನಿಲ ಘನವಟ, ಕುಮಾರಿ ಪ್ರಿಯಾಂಕಾ ಲೋಣೆ ಮುಂತಾದವರು ಉಪಸ್ಥಿತರಿದ್ದರು.

ಗೌರವಾನ್ವಿತರ ಉಪಸ್ಥಿತಿ

ಸನಾತನದ ಧರ್ಮ ಪ್ರಚಾರಕ ಸದ್ಗುರು ನಂದಕುಮಾರ ಜಾಧವ, ನ್ಯಾಯವಾದಿ ಪೂ. ಸುರೇಶ ಕುಲಕರ್ಣಿ, ಹ.ಭ.ಪ. ಆಂಧಳೆ ಮಹಾರಾಜ, ಹ.ಭ.ಪ ಅಡಗಾವಕರ ಮಹಾರಾಜ

ಆಂದೋಲನದ ಸಮಾರೋಪದ ಸಮಯದಲ್ಲಿ ಗೌರವಾನ್ವಿತರಿಂದ ವ್ಯಕ್ತಪಡಿಸಲಾದ ಅಭಿಪ್ರಾಯ

೧. ಇಂದಿನ ಈ ಆಂದೋಲನದಿಂದ ಯುಗಾದಿ ಹಬ್ಬ ಆಚರಿಸುತ್ತಿರುವ ಹಾಗೆ ಆನಂದವಾಗಿದೆ ! – ಶ್ರೀ. ಶಿವೆಂದ್ರರಾಜೇ ಭೋಸಲೆ, ಶಾಸಕರು, ಭಾಜಪ

ಕಳೆದ ೩೦ ವರ್ಷಗಳ ಸುಧೀರ್ಘ ಹೋರಾಟದ ನಂತರ ಇಂದು ನಗರದ ಮರುನಾಮಕರಣದ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ಪ್ರತಾಪಗಡದಲ್ಲಿನ ಕಾನೂನ ಬಾಹಿರ ಕಟ್ಟಡ ನೆಲೆಸಮ ಮಾಡಿರುವುದರಿಂದ ಮತ್ತು ಮರುನಾಮಕರಣದ ಬಗ್ಗೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ಅಭಿನಂದನೆ ! ಆಂದೋಲನದ ಪ್ರಯುಕ್ತ ಇರುವ ಕೇಸರಿ ಧ್ವಜಗಳನ್ನು ನೋಡಿ ಇಂದೇ ಯುಗಾದಿ ಹಬ್ಬ ಆಚರಿಸುತ್ತಿದ್ದೇವೆ ಎಂದು ಅನಿಸುತ್ತಿತ್ತು.

೨. ಔರಂಗಾಬಾದದ ಹೆಸರು ಬದಲಾಯಿತು, ಇನ್ನೂ ಇತಿಹಾಸ ಕೂಡ ಬದಲಾಯಿಸಲಾಗುವುದು ! – ಶ್ರೀ. ಸುರೇಶ ಚೌಹಾನಕೆ, ಮುಖ್ಯ ಸಂಪಾದಕರು, ‘ಸುದರ್ಶನ್ ನ್ಯೂಸ್’

ಶ್ರೀ. ಸುರೇಶ ಚೌಹಾನಕೆ

ಔರಂಗಜೇಬನ ಹೆಸರು ನಗರಕ್ಕೆ ಏಕೆ ಬೇಕು ? ಔರಂಗಜೇಬನು ದುಷ್ಟ ಬಾದಶಹ ಆಗಿದ್ದನು. ಅವನು ಬಾದಶಹ ಆಗಲು ತನ್ನ ಸ್ವಂತ ಸಹೋದರರ ಹತ್ಯೆ ಮಾಡಿದನು. ಮಕ್ಕಳನ್ನು ಜೈಲಲ್ಲಿ ಕೂಡಾಕಿದನು. ಬಾದಶಹ ಆಗುವ ಕನಸು ಅವನಿಗೆ ೨೭ ವರ್ಷವಾದರೂ ಪೂರ್ಣಗೊಳಿಸಲಾಗಲಿಲ್ಲ. ಮರಾಠರು ಅವನಿಗೆ ಮಣ್ಣುಮುಕ್ಕಿಸಿದ್ದರು. ಇನ್ನೊಂದು ಕಡೆ ಧರ್ಮರಕ್ಷಣೆಗಾಗಿ ತನ್ನ ಪ್ರಾಣದ ಆಹುತಿ ನೀಡುವ ಛತ್ರಪತಿ ಸಂಭಾಜಿ ಮಹಾರಾಜರ ಜೊತೆಗೆ ಹೋಲಿಸಲು ಸಾಧ್ಯವಿಲ್ಲ. ಔರಂಗಾಬಾದ ಹೆಸರು ಬದಲಾಯಿತು, ಇನ್ನು ಇತಿಹಾಸ ಕೂಡ ಬದಲಾಯಿಸುವುದು. ಇತ್ತೀಚಿಗೆ ‘ಜಿ೨೦’ ದೇಶಗಳ ಸಭೆ ಸಂಭಾಜಿ ನಗರದಲ್ಲಿ ನಡೆಯಿತು. ಅದರಲ್ಲಿನ ಅತಿಥಿಗಳಿಗೆ ‘ಬೀಬಿ ಕಾ ಮಕಬರಾ’ ತೋರಿಸಲಾಯಿತು. ಅದರ ಕೆಳಗೆ ಕೂಡ ಒಂದು ಹಿಂದೂ ದೇವಸ್ಥಾನ ಇದ್ದೂ ಅದನ್ನೂ ಸಹ ನಾವು ಮುಕ್ತಮಾಡಬೇಕಿದೆ. ನಗರದಲ್ಲಿ ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬನ ಜಯಂತಿ ಆಚರಿಸಲಾಗುತ್ತದೆ, ಇನ್ನು ಮುಂದೆ ನಡೆಯಬಾರದು.

೩. ಮರುನಾಮಕರಣಕ್ಕೆ ಮತಾಂಧರ ವಿರೋಧ ಏಕೆ ? – ಶ್ರೀ. ರಾಜಾಸಿಂಹ ಠಾಕೂರ, ಸಂಸದ ಭಾಗ್ಯನಗರ

ಶ್ರೀ. ರಾಜಾಸಿಂಹ ಠಾಕೂರ

ಮತಾಂಧದಿಂದ ಛತ್ರಪತಿ ಶಿವಾಜಿ ಮಹಾರಾಜರ ಮಂತ್ರಿ ಮಂಡಲದಲ್ಲಿ ಮುಸಲ್ಮಾನರು ಇದ್ದರು, ಎಂದು ಪ್ರಚಾರ ಮಾಡಲಾಗುತ್ತದೆ, ಹೀಗೆ ಇರುವಾಗ ನಗರದ ಮರುನಾಮಕರಣಕ್ಕೆ ಮುಸಲ್ಮಾನರಿಂದ ವಿರೋಧ ಏಕೆ ? ಇಂದು ನಾನು ಬರುತ್ತೇನೆಂದು ನನಗು ಕೂಡ ಸಂಭಾಜಿನಗರದಲ್ಲಿ ವಿರೋಧಿಸಲಾಯಿತು. ನಾನು ನಗರದಲ್ಲಿ ಗಲಭೆ ಸೃಷ್ಟಿಸಲು ಬರುವುದಿಲ್ಲ, ಹಿಂದೂ ಸಂಘಟನೆಗಾಗಿ ಬಂದಿದ್ದೇನೆ. ಇಂದು ಕೋಟೆಗಳ ಮೇಲೆ ಹಸಿರು ದಾಳಿ ನಡೆಯುತ್ತಿದೆ. ಸರಕಾರ ಅದರ ಕಡೆ ಗಮನ ನೀಡಬೇಕು. ಪುರಾತತ್ವ ಇಲಾಖೆಯಿಂದ ಕೋಟೆ ದುರ್ಗಗಳ ಮೇಲೆ ಕೇಸರಿ ಬಾವುಟ ತೆಗೆದುಕೊಂಡು ಹೋಗುವವರಿಗೆ ಗೌರವಿಸಬೇಕು ಎಂದು ಹೇಳಿದರು.

ಕ್ಷಣ ಚಿತ್ರಗಳು:

೧. ಅಕ್ಕ ಪಕ್ಕದ ಗ್ರಾಮದಿಂದ ಅನೇಕ ಹಿಂದೂ ಯುವಕರು ಕೇಸರಿ ಧ್ವಜ ತೆಗೆದು ಕೊಂಡು ಬೈಕ್ ರೆಲಿಯಲ್ಲಿ ಸಹಭಾಗಿದ್ದರು. ಅಂದೋಲನದಲ್ಲಿ ಯುವತಿಯರು, ಮಹಿಳೆಯರು, ವೃದ್ಧರು ಉಪಸ್ಥಿತಿಯು ಗಮನಾರ್ಹವಾಗಿತ್ತು.
೨. ಪ್ರಾರಂಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಮತ್ತು ಛತ್ರಪತಿ ಸಂಭಾಜಿ ಮಹಾರಾಜ್ ಇವರ ಜೀವನ ಚರಿತ್ರೆಯ ಮೇಲೆ ಆಧಾರಿತ ಪೋವಾಡೆ (ಕ್ಷಾತ್ರ ಗೀತೆಗಳು) ಹಾಡಿದರು.
೩. ಆಂದೋಲನದಲ್ಲಿ ಟ್ರ್ಯಾಕ್ಟರ್ ಮೇಲೆ ಛತ್ರಪತಿ ಶಿವಾಜಿ ಮಹಾರಾಜ್, ಛತ್ರಪತಿ ಸಂಭಾಜಿ ಮಹಾರಾಜ್ ಇವರ ಪುತ್ತಳಿಗಳನ್ನು ಹಾಗೂ ಪ್ರಭು ಶ್ರೀ ರಾಮನ ಮೂರ್ತಿಯನ್ನು ಇಟ್ಟಿದ್ದರು.