‘ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ಮಾತ್ರ ಪ್ರಶ್ನೆಗಳನ್ನು ಎತ್ತಲಾಯಿತು; ಹಾಗಾಗಿ ನನ್ನನ್ನು ದೇಶದ್ರೋಹಿ ಎನ್ನಲು ಸಾಧ್ಯವಿಲ್ಲ !’ (ಅಂತೆ)

ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿ ಇವರ ಖೇದಕರ ಹೇಳಿಕೆ !

ರಾಹುಲ್ ಗಾಂಧಿ

ನವ ದೆಹಲಿ – ನಾನು ಕೇವಲ ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ಪ್ರಶ್ನೆ ಮಂಡಿಸಿದೆ; ಆದ್ದರಿಂದ ನನ್ನನ್ನು ದೇಶದ್ರೋಹಿ ಎನ್ನಲಾಗುವುದಿಲ್ಲ’, ಎಂದು ಕಾಂಗ್ರೆಸ್ಸಿನ ಮುಖಂಡ ರಾಹುಲ್ ಗಾಂಧಿ ಇವರು ಹೇಳಿಕೆ ನೀಡಿದ್ದಾರೆ. ಮಾರ್ಚ್ ೧ ರಂದು ಗಾಂಧಿ ಇವರು ಕೇಂಬ್ರಿಜ್ ವಿದ್ಯಾಪೀಠದಲ್ಲಿ ನೀಡಿರುವ ಭಾಷಣದಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದ್ದರು.

ಈ ಹೇಳಿಕೆಯ ಬಗ್ಗೆ ರಾಹುಲ ಗಾಂಧಿ ಇವರು ವಿದೇಶಾಂಗ ಸಚಿವಾಲಯ ಸಮಿತಿಯ ಸಭೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. ಅವರು, ನನ್ನ ಭಾಷಣ ಯಾವುದೇ ದೇಶ ಅಥವಾ ಸರಕಾರಕ್ಕೆ ಸಂಬಂಧ ಪಟ್ಟದಾಗಿರಲಿಲ್ಲ. ಅದು ಓರ್ವ ವ್ಯಕ್ತಿಯ ಸಂದರ್ಭದಲ್ಲಿ ಇತ್ತು. ನಾನು ಭಾರತದ ಪ್ರಜಾಪ್ರಭುತ್ವದ ಬಗ್ಗೆ ಪ್ರಶ್ನೆ ಉಪಸ್ಥಿತಗೊಳಿಸಿದ್ದೆ. ಈ ಅಂಶಗಳು ಬಗ್ಗೆ ಇತರ ಯಾವುದೇ ದೇಶಕ್ಕೆ ಹಸ್ತಕ್ಷೇಪ ಮಾಡಲು ಹೇಳಿಲ್ಲ. ಅದಕ್ಕಾಗಿ ನನ್ನನ್ನು ದೇಶದ್ರೋಹಿ ಎನ್ನಲಾಗುವುದಿಲ್ಲ ಎಂದು ಹೇಳಿದರು.

ಸಂಪಾದಕರ ನಿಲುವು

* ಇದರಿಂದ ‘ಕಾಂಗ್ರೆಸ್ ನಲ್ಲಿ ದೇಶದ್ರೋಹ ಎಷ್ಟು ಆಳದವರೆಗೆ ತುಂಬಿದೆ ಎಂದರೆ, ಅವರು ವಿದೇಶಕ್ಕೆ ಹೋಗಿ ದೇಶದ ಅವಮಾನ ಮಾಡಿದರು ಅವರಿಗೆ ದೇಶದ್ರೋಹ ಅನಿಸುವುದಿಲ್ಲ’, ಇದೇ ಇದರಿಂದ ಗಮನಕ್ಕೆ ಬರುತ್ತದೆ !

* ವಿದೇಶಕ್ಕೆ ಹೋಗಿ ದೇಶದ ಅವಮಾನ ಮಾಡುವವರಿಗೆ ದೇಶದಲ್ಲಿ ಇರಲು ಅಧಿಕಾರ ಇರುವುದೇ ?