ಈಡಿಯಿಂದ ದರ್ಗಾ ಸಮಿತಿಯ ವಿಚಾರಣೆ ಮಾಡುವಂತೆ ಅಲ್ಲಿಯ ಸೇವಕರಿಂದ ಆಗ್ರಹ !

ಅಜಮೇರ ದರ್ಗಾಗೆ ಸಿಗುವ ಅರ್ಪಣೆಯಲ್ಲಿ ಭ್ರಷ್ಟಾಚಾರ !

ಅಜ್ಮೀರ್ (ರಾಜಸ್ಥಾನ) – ಇಲ್ಲಿಯ ಕ್ವಾಜಾ ಮೋಹಿದ್ದಿನ್ ಹಸನ್ ಚಿಸ್ತಿ ದರ್ಗಾದ ಖಾದೀಮ್ (ಸೇವಕ) ಮತ್ತು ದರ್ಗಾ ಸಮಿತಿಯ ಸದಸ್ಯರಲ್ಲಿ ವಿವಾದ ಮುಂದುವರೆದಿದೆ. ಖಾದಿಮರು ಈ ಸಮಿತಿಯ ಸದಸ್ಯರ ಬಗ್ಗೆ ದರ್ಗಾಕ್ಕೆ ದೊರೆಯುವ ದೆಣಗಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಅವರು ಈಡಿ ಇಂದ ವಿಚಾರಣೆ ನಡೆಯಲು ಆಗ್ರಹಿಸುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ಅಜಮೇರದ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.

ಈ ಮನವಿಯಲ್ಲಿ, ಕಳೆದ ೫ ವರ್ಷಗಳಿಂದ ಇಲ್ಲಿ ಬರುವ ಭಕ್ತರಿಗೆ ಸಮಿತಿಯು ಯಾವುದೇ ಸೌಕರ್ಯ ನೀಡಿಲ್ಲ. ದರ್ಗಾದ ಚಾವಣಿ ಮುರಿದಿದೆ. ನೆಲದ ಕಲ್ಲುಗಳ ಸ್ಥಿತಿ ಕೂಡ ಹಾಗೆ ಇದೆ. ಎಲ್ಲಾ ಕಡೆ ಅಸ್ವಚ್ಚತೆ ಇದೆ. ಆದ್ದರಿಂದ ಬರುವ ಭಕ್ತರಿಗೆ ತೊಂದರೆ ಸಹಿಸಬೇಕಾಗುತ್ತದೆ. ಜನರು ನೀಡಿರುವ ದಾನದ ಹಣದ ಲೆಕ್ಕದಲ್ಲಿ ಮೋಸ ಮಾಡಲಾಗುತ್ತಿದೆ. ದರ್ಗಾದ ಸಂಪತ್ತಿಯ ದುರುಪಯೋಗ ಮಾಡಲಾಗುತ್ತಿದೆ. ರಾಜಸ್ಥಾನ ಉಚ್ಚ ನ್ಯಾಯಾಲಯದ ಆದೇಶದ ನಂತರ ಕೂಡ ದರ್ಗಾ ಸಮಿತಿಯಿಂದ ನಿರೀಕ್ಷಣಾ ಕೋಣೆ ತೆರೆದಿಲ್ಲ ಎಂದು ಹೇಳಿದೆ.

ಸಂಪಾದಕರ ನಿಲುವು

* ಹಿಂದೂಗಳ ದೇವಸ್ಥಾನಗಳನ್ನು ಸರಾಗವಾಗಿ ಸರಕಾರಿಕರಣ ಮಾಡುವ ಎಲ್ಲಾ ಪಕ್ಷದ ಸರಕಾರಗಳು ಇಂತಹ ದರ್ಗಾದ ಸರಕಾರಿಕರಣ ಮಾಡುವ ಧೈರ್ಯ ತೋರುವುದೇ ?