ಅಸ್ಸಾಂನಲ್ಲಿ ೬೦೦ ಮದರಸಾಗಳನ್ನು ಮುಚ್ಚಿದ್ದೇವೆ ಮತ್ತು ಎಲ್ಲವೂ ಮುಚ್ಚುವ ಇಚ್ಛೆ ಇದೆ !

ಅಸ್ಸಾಂನ ಮುಖ್ಯಮಂತ್ರಿ ಹೀಮಂತ ಬೀಸ್ವ ಸರಮಾ ಇವರ ನಿರ್ಧಾರ !

ಹಿಮಂತ ಬಿಸ್ವಾಸ್ ಸರ್ಮ

ಬೆಳಗಾವ – ಬಾಂಗ್ಲಾದೇಶದಲ್ಲಿನ ಜನರು ಅಸ್ಸಾಂಗೆ ಬರುತ್ತಾರೆ ಮತ್ತು ಭಾರತದ ಸಭ್ಯತೆಗೆ ಮತ್ತು ಸಂಸ್ಕೃತಿಗೆ ಅಪಾಯ ತರುತ್ತಾರೆ. ನಾನು ೬೦೦ ಮದರಸಾಗಳನ್ನು ಮುಚ್ಚಿದ್ದೇನೆ ಮತ್ತು ಎಲ್ಲಾ ಮದರಸಗಳನ್ನು ಮುಚ್ಚುವುದು ನನ್ನ ಇಚ್ಛೆಯಾಗಿದೆ; ಕಾರಣ ನಮಗೆ ಮದರಸಗಳು ಬೇಡವಾಗಿದೆ. ನಮಗೆ ಶಾಲೆಗಳು, ಮಹಾವಿದ್ಯಾಲಯಗಳು ಮತ್ತು ವಿಶ್ವವಿದ್ಯಾಲಯಗಳು ಬೇಕೆವೆ, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಶಿವಾಜಿ ಮಹಾರಾಜ ಗಾರ್ಡನ್ ನಲ್ಲಿ ಆಯೋಜಿಸಿದ್ದ ಸಭೆಗೆ ಸಂಬೋಧಿಸುವಾಗ ಹೇಳಿದರು.

೧. ಮುಖ್ಯಮಂತ್ರಿ ಸರಮಾ ಮಾತು ಮುಂದುವರೆಸಿ, ಗೂಢಚಾರದ ಮಾಹಿತಿಯ ಪ್ರಕಾರ ಬಾಂಗ್ಲಾದೇಶದಲ್ಲಿ ಕನಿಷ್ಠ ೬ ಭಯೋತ್ಪಾದಕರು ೨೦೧೬ ರಿಂದ ೨೦೧೭ ರಲ್ಲಿ ಭಾರತದಲ್ಲಿ ನುಗ್ಗಿ ಸ್ಥಳೀಯ ಯುವಕರನ್ನು ಜಿಹಾದಿ ವಿಚಾರಧಾರೆಯ ಮೂಲಕ ಭಯೋತ್ಪಾದಕ ಚಟುವಟಿಕೆಗಾಗಿ ಸಿದ್ಧಗೊಳಿಸಿದ್ದಾರೆ.

೨. ಮುಖ್ಯಮಂತ್ರಿ ಸರಮಾ ಇವರು, ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಇವರು ಭಾರತದ ಇತಿಹಾಸ ಬಾಬರ್, ಔರಂಗಜೇಬ ಮತ್ತು ಶಾಹಜಹಾನ್ ಇವರದಾಗಿದೆ ಎಂದು ತೋರಿಸಿದ್ದಾರೆ ಎಂದು ಹೇಳಿದರು. ನಾನು ಹೇಳುವುದೇನೆಂದರೆ, ಭಾರತದ ಇತಿಹಾಸ ಇದು ಅವರ ಬಗ್ಗೆ ಇಲ್ಲದೆ ಛತ್ರಪತಿ ಶಿವಾಜಿ ಮಹಾರಾಜ್, ಗುರು ಗೋವಿಂದ ಸಿಂಹ ಇವರ ಬಗ್ಗೆ ಆಗಿದೆ. ಔರಂಗಜೇಬನ ಅಧಿಕಾರದಲ್ಲಿ ಸನಾತನ ಸಂಸ್ಕೃತಿ ನಾಶ ಮಾಡುವ ಪ್ರಯತ್ನ ಮಾಡಿದ ಮತ್ತು ಅನೇಕ ಜನರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿದ ಎಂದು ಹೇಳಿದರು.

ಸಂಪಾದಕರ ನಿಲುವು

* ಅಸ್ಸಾಂನ ಮುಖ್ಯಮಂತ್ರಿ ಹೀಗೆ ಮಾಡಬಹುದಾದರೆ, ಇತರ ರಾಜ್ಯದ ಮುಖ್ಯಮಂತ್ರಿ ಏಕೆ ಮಾಡಲು ಸಾಧ್ಯವಿಲ್ಲ ?