ಕ್ರಿಮಿನಲ್ ಕೇಸ ರದ್ದು ಪಡಿಸಲು ಸಾಯರೋ ಮಲಬಾರ್ ಚರ್ಚ್ ನ ಮುಖ್ಯಸ್ಥರ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಿಂದ ತಿರಸ್ಕಾರ

ಭೂ ಹಗರಣದ ಪ್ರಕರಣ

ನವ ದೆಹಲಿ – ಕೇರಳದಲ್ಲಿನ ಎರ್ನಾಕುಲಂ-ಆಗಮಾಲಿ ಆರ್ಕಡಾಯೋಸಿಸ್ ನ ಭೂ ಹಗರಣದ ಪ್ರಕರಣದಲ್ಲಿ ತಮ್ಮ ವಿರುದ್ಧ ಇರುವ ಕ್ರಿಮಿನಲ್ ಕೇಸ ರದ್ದು ಪಡಿಸಲು ಒತ್ತಾಯಿಸಿ ಸಾಯರೋ ಮಲಬಾರ್ ಚರ್ಚ್ ನ ಪ್ರಮುಖ ಆರ್ಚ್ ಬಿಷಪ್ ಕಾರ್ಡಿನಲ್ ಜಾರ್ಜ್ ಅಲೆಂಚೆರಿ ಇವರ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ತಿರಸ್ಕರಿಸಿದೆ. ಈ ಪ್ರಕರಣದಲ್ಲಿ ಕೇರಳ ಉಚ್ಚ ನ್ಯಾಯಾಲಯವು ಆಗಸ್ಟ್ ೨೦೨೧ ರಲ್ಲಿ ನೀಡಿರುವ ತೀರ್ಪಿನ ವಿರುದ್ಧ ಕಾರ್ಡಿನಲ್ ಚಾರ್ಜ್ ಅಲೆಂಚೆರಿ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಬೇಲಾ ತ್ರಿವೇದಿ ಇವರ ಖಂಡಪೀಠವು ಈ ಪ್ರಕರಣದ ತೀರ್ಪು ಕಾಯ್ದಿರಿಸಿದ ನಂತರ ಕೇರಳ ನ್ಯಾಯಾಲಯವು ಈ ಪ್ರಕರಣದ ಮುಂದಿನ ಆದೇಶ ನೀಡಿದ್ದು; ಆದರೆ ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಖಂಡಪೀಠವು ಪ್ರಶ್ನೆ ಉಪಸ್ಥಿತಗೊಳಿಸಿತ್ತು.