ಛತರಪುರ (ಮಧ್ಯಪ್ರದೇಶ) – ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ಹಿಂದೂಗಳು ಸಂಘಟಿತರಾಗಿರಬೇಕು ಎಂದು ಬಾಗೇಶ್ವರ ಧಾಮ ಪಂಡಿತ ಧೀರೇಂದ್ರ ಶಾಸ್ತ್ರಿಯವರು ಪ್ರತಿಪಾದಿಸಿದ್ದಾರೆ. ಇಲ್ಲಿಯ ಅನ್ನಪೂರ್ಣಾ ರಾಮಲೀಲಾ ಮೈದಾನದಲ್ಲಿ ಅವರ ಹಸ್ತದಿಂದ ರಾಮನವಮಿ ಕಚೇರಿಯನ್ನು ಉದ್ಘಾಟಿಸಲಾಯಿತು. ಆ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ಈ ಪ್ರಸಂಗದಲ್ಲಿ 5 ಸಾವಿರ ನಾಗರಿಕರು ಉಪಸ್ಥಿತರಿದ್ದರು. ಶ್ರೀ ರಾಮನವಮಿನಿಮಿತ್ತ ಇಲ್ಲಿ ಪ್ರತಿ ವರ್ಷ ವಿಶಾಲ ಮೆರವಣಿಗೆಯನ್ನು ನೆರವೇರಿಸಲಾಗುತ್ತದೆ. ಇದಕ್ಕಾಗಿ ಇಲ್ಲಿ ಕಛೇರಿಯನ್ನು ಸ್ಥಾಪಿಸಲಾಗುತ್ತದೆ.
Bageshwar Dham: इस चैलेंज पर बोले पंडित धीरेंद्र शास्त्री- मैं कोई फरमाइशी गीत नहीं, हिंदू राष्ट्र को लेकर कही ये बात! #BagheshwarDham #DhirendraKrishnaShastri #Chhatarpur https://t.co/g2wi1urQvM
— Zee MP-Chhattisgarh (@ZeeMPCG) March 13, 2023
ಕಾರ್ಯಕ್ರಮದಲ್ಲಿ ಪಂಡಿತ ಧೀರೇಂದ್ರ ಶಾಸ್ತ್ರಿಯವರು ಉಪಸ್ಥಿತರಿಂದ ಹಿಂದೂ ರಾಷ್ಟ್ರದ ಉದ್ಘೋಷವನ್ನು ಮಾಡಿಸಿಕೊಂಡರು. `ಅನೇಕ ಜನರು ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ನನ್ನನ್ನು ಆಹ್ವಾನಿಸುತ್ತಿರುತ್ತಾರೆ. ಈ ಹಿಂದೆಯೂ ನಾನು ಅನೇಕ ಆಹ್ವಾನಗಳನ್ನು ಸ್ವೀಕರಿಸಿ ಜಯಶಾಲಿಯಾಗಿದ್ದೇನೆ. ನನಗೆ ಪ್ರತಿಯೊಂದು ಸಮಯದಲ್ಲಿಯೂ ಆಹ್ವಾನ ನೀಡಲು ನಾನು `ಬೇಡಿಕೆಯಂತೆ ಹಾಡನ್ನು ಹಾಡುವ ಗಾಯಕನಲ್ಲ’ ಎಂದೂ ಹೇಳಿದರು.