ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದೂಗಳಿಗೆ ನೀರು ಪೂರೈಸಲು ನಿರಾಕರಣೆ !

 ಹಿಂದೂ ಸಮುದಾಯದ ಜನರನ್ನು ಗ್ರಾಮದಿಂದ ಹೊರಹಾಕಲಾಯಿತು !

ಗ್ರಾಮದ ಮೇಘಾವರ ಸಮುದಾಯದ ಹಿಂದೂಗಳು ಪೊಲೀಸ್ ಠಾಣೆ ಪರಿಸರದಲ್ಲಿ ಆಶ್ರಯ ಪಡೆದಿರುವುದು

ಥಾರಪಾರಕರ – ಸಿಂಧ್ ಪ್ರಾಂತ್ಯದ ಥಾರಪಾರಕರ ಜಿಲ್ಲೆಯ ಛಾಪರ್ ಖೋಸೋ ಗ್ರಾಮದ ಹಿಂದೂ ಮೇಘಾವರ್ ಸಮುದಾಯದ ಜನರಿಗೆ ನೀರು ಸರಬರಾಜು ನಿರಾಕರಿಸಲಾಗಿದೆ. ಅದರೊಂದಿಗೆ ಈ ಸಮಾಜದ ಜನರಿಗೆ ಗ್ರಾಮದ ರಾಜು ಖೋಸೋ, ಸಿಕಂದರ್ ಖೋಸೋ ಮತ್ತು ಇತರ ಮುಸ್ಲಿಮರು ಓಡಿಸಿದರು. ಇದರಿಂದ ಗ್ರಾಮದ ಮೇಘಾವರ ಸಮುದಾಯದ ಹಿಂದೂಗಳು ಪೊಲೀಸ್ ಠಾಣೆ ಪರಿಸರದಲ್ಲಿ ಆಶ್ರಯ ಪಡೆದಿದ್ದಾರೆ. ಈ ಜನರು ಮುಸ್ಲಿಮರ ವಿರುದ್ಧ ದೂರು ನೀಡಲು ಪ್ರಯತ್ನಿಸಿದರು; ಆದರೆ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ.

ಥಾರಪರಕರ್ ಜಿಲ್ಲೆಯು ಭಾರತ-ಪಾಕಿಸ್ತಾನ ಗಡಿಯಲ್ಲಿದೆ. ಈ ಜಿಲ್ಲೆ ಪಾಕಿಸ್ತಾನದ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿದೆ. ಇಲ್ಲಿ ವಾಸಿಸುವ ಅಲ್ಪಸಂಖ್ಯಾತ ಹಿಂದೂಗಳ ಸಮಸ್ಯೆಗಳನ್ನು ಸರಕಾರ, ಆಡಳಿತ ಮತ್ತು ಪೊಲೀಸರು ನಿರ್ಲಕ್ಷಿಸಿದ್ದಾರೆ. ಈ ಪ್ರದೇಶದಲ್ಲಿ ಹಿಂದೂಗಳ ಮೇಘಾವರ್, ಭಿಲ್ ಮತ್ತು ಜೋಗಿ ಸಮುದಾಯದ ಜನರು ವಾಸಿಸುತ್ತಾರೆ. ಇಲ್ಲಿ ಹಿಂದೂಗಳ ಅಪಹರಣ, ಹಿಂದೂ ಹುಡುಗಿಯರ ಮತಾಂತರ, ಯುವಕರ ಆತ್ಮಹತ್ಯೆ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತವೆ.

ಸಂಪಾದಕರ ನಿಲುವು

* ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು ! ಭಾರತದಲ್ಲಿ ಅಲ್ಪಸಂಖ್ಯಾತರಿಗೆ ತಥಾಕಥಿತ ಅನ್ಯಾಯವಾಗಿದೆ ಎಂದು ಆರೋಪಿಸಿದ ಕೋಲಾಹಲವೆಬ್ಬಿಸುವ ಆಕಾಶ ಪಾತಾಳ ಒಂದುಮಾಡುವ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳಿಗೆ, ಹಿಂದೂಗಳಿಗೆ ನೀರಿನಂತಹ ಮೂಲಭೂತ ಅವಶ್ಯಕತೆಗಳನ್ನು ಸಹ ಒದಗಿಸದ ಪಾಕಿಸ್ತಾನದ ಅಮಾನವೀಯತೆ ಕಾಣುತ್ತಿಲ್ಲವೇ? ಅಥವಾ ಅವರು ಅದನ್ನು ಬೇಕೆಂದು ನಿರ್ಲಕ್ಷಿಸುತ್ತಾರೆಯೇ? ಭಾರತವು ಪಾಕಿಸ್ತಾನದ ಜೊತೆಗೆ ಇಂತಹ ಸಂಘಟನೆಗಳಿಗೆ ಛೀಮಾರಿ ಹಾಕಬೇಕು !