ದೆಹಲಿಯ ಶಾಸಕರ ವೇತನದಲ್ಲಿ ಶೇ.67 ರಷ್ಟು ಹಾಗೂ ಮುಖ್ಯಮಂತ್ರಿಯ ವೇತನದಲ್ಲಿ ಶೇ.136 ರಷ್ಟು ಹೆಚ್ಚಳ !

ದೆಹಲಿ – 12 ವರ್ಷಗಳ ನಂತರ, ದೆಹಲಿ ವಿಧಾನಸಭೆಯಲ್ಲಿ ಶಾಸಕರ ವೇತನವನ್ನು ಶೇಕಡಾ 67 ರಷ್ಟು ಹೆಚ್ಚಿಸಲಾಗಿದೆ. ಮೊದಲು ಪ್ರತಿ ತಿಂಗಳಿಗೆ 54 ಸಾವಿರ ಪಡೆಯುತ್ತಿದ್ದ ಅವರು ಈಗ 90 ಸಾವಿರ ಸಿಗಲಿದೆ. ಇದರೊಂದಿಗೆ ಮುಖ್ಯಮಂತ್ರಿ, ಸಚಿವರು, ಸ್ಪೀಕರ್, ಉಪಸಭಾಪತಿಗಳ ವೇತನ ಮತ್ತು ಭತ್ಯೆಗಳನ್ನು ಶೇ.136 ರಷ್ಟು ಹೆಚ್ಚಿಸಲಾಗಿದೆ. ಪ್ರತಿತಿಂಗಳು 72 ಸಾವಿರ ಪಡೆಯುತ್ತಿದ್ದವರು ಈಗ 1 ಲಕ್ಷದ 70 ಸಾವಿರ ಪಡೆಯುವರು.

ಸಂಪಾದಕೀಯ ನಿಲುವು

ಸರಕಾರಿ ನೌಕರರ ಸಂಬಳದಲ್ಲಿ ಇಂತಹ ಹೆಚ್ಚಳ ಎಂದಾದರೂ ಆಗುತ್ತದೆಯೇ ?

ಇಷ್ಟು ಹೆಚ್ಚಿದ ನಂತರವೂ ಈ ಶಾಸಕರು ಎಷ್ಟು ಕೆಲಸ ಮಾಡುತ್ತಾರೆ ? ಅವರ ಕೆಲಸವು ಜನರಿಗೆ ಮತ್ತು ದೇಶಕ್ಕೆ ಎಷ್ಟು ಪ್ರಯೋಜನವಾಗಿದೆ ಎಂಬುದನ್ನು ಯಾರು ಪರಿಶೀಲಿಸುತ್ತಾರೆ ? ಸಾಮಾನ್ಯ ನೌಕರರು ಕೆಲಸ ಮಾಡದಿದ್ದರೆ, ಅವರಿಗೆ ಕೇಳುತ್ತಾರೆ, ಹಾಗಾದರೆ ಇವರನ್ನು ಯಾರು ಕೇಳುತ್ತಾರೆ ?