ನೇಪಾಳದ ಪ್ರಧಾನಮಂತ್ರಿ ಪ್ರಚಂಡ ಇವರಿಗೆ ಸರ್ವೋಚ್ಚ ನ್ಯಾಯಾಲದಿಂದ ಕಾರಣ ನೀಡಿ ನೊಟೀಸ್ !

ಮಾವೊವಾದಿಗಳ ಹಿಂಸಾಚಾರದಲ್ಲಿ 5 ಸಾವಿರ ಜನರು ಸಾವನ್ನಪ್ಪಿದ ಪ್ರಕರಣ

ಕಾಠಮಂಡು (ನೇಪಾಳ) – ನೇಪಾಳದ ಸರ್ವೋಚ್ಚ ನ್ಯಾಯಾಲಯವು ಪ್ರಧಾನಮಂತ್ರಿ ಪುಷ್ಪ ಕಮಲ ದಹಲ ಪ್ರಚಂಡರಿಗೆ ಕಾರಣ ನೀಡಿ ನೊಟಿಸ್ ಜಾರಿಮಾಡಿದೆ. ಒಂದು ದಶಕಗಳಿಂದ ನಡೆಯುತ್ತಿರುವ ಮಾವೋವಾದಿ ಹಿಂಸಾಚಾರದಲ್ಲಿ 5 ಸಾವಿರ ಜನರ ಹತ್ಯೆಯ ಪ್ರಕರಣದಲ್ಲಿ ಪ್ರಚಂಡರ ಪಾತ್ರದ ಬಗ್ಗೆ ವಿಚಾರಣೆ ನಡೆಸುವಂತೆ ನ್ಯಾಯಾಲಯದಲ್ಲಿ ಒಂದು ದೂರು ದಾಖಲಿಸಲಾಗಿದೆ. ಈ ಬಗ್ಗೆ ನ್ಯಾಯಾಲಯವು ಒಂದು ನೋಟೀಸನ್ನು ಜಾರಿಗೊಳಿಸಿದೆ. ಪ್ರಚಂಡ ಇವರು ಇಂತಹ ಹತ್ಯೆಯಾಗಿದೆಯೆಂದು ಈ ಹಿಂದೆ ಒಪ್ಪಿಕೊಂಡಿದ್ದರು. ತದನಂತರ ಈ ದೂರನ್ನು ದಾಖಲಿಸಲಾಗಿತ್ತು. ಇದರಿಂದ ಕಾರಣ ನೀಡಿ ನೊಟೀಸ್ ಜಾರಿಗೊಳಿಸುವಾಗ ನ್ಯಾಯಾಲಯವು ಪ್ರಚಂಡ ಇವರಿಗೆ `ಆಗ ಏನು ನಡೆದಿತ್ತು ಮತ್ತು ದೂರುದಾರನ ಮನವಿಯಂತೆ ನಿಮ್ಮ ವಿಚಾರಣೆ ಏಕೆ ನಡೆಸಬಾರದು ?, ಎಂದು ಕೇಳಿದೆ. ದೂರುದಾರನು ಪ್ರಚಂಡ ಇವರನ್ನು ಬಂಧಿಸುವಂತೆ ಕೋರಿದ್ದನು; ಆದರೆ ನ್ಯಾಯಾಲಯ ಅದಕ್ಕೆ ಒಪ್ಪಿಗೆ ನೀಡಲಿಲ್ಲ.

ಜನೇವರಿ 15, 2020 ರಂದು ಕಾಠಮಂಡುವಿನ ಮಾಘಿ ಉತ್ಸವದಲ್ಲಿ ಪ್ರಚಂಡ ಇವರು, `ಒಂದು ದಶಕಕ್ಕಿಂತ ಹೆಚ್ಚು ಕಾಲಾವಧಿಯಿಂದ ನಡೆದಿರುವ ವಿದ್ರೋಹಿಗಳ ನೇತೃತ್ವ ವಹಿಸಿಕೊಂಡಿರುವ ಮಾವೋವಾದಿ ಪಕ್ಷದ ಮುಖಂಡನೆಂದು 5 ಸಾವಿರ ಜನರ ಸಾವಿನ ಹೊಣೆಯನ್ನು ನಾನು ತೆಗೆದುಕೊಳ್ಳುತ್ತೇನೆ ಮತ್ತು ಇನ್ನುಳಿದ ಸಾವಿನ ಹೊಣೆಯನ್ನು ಸಂಬಂಧಪಟ್ಟವರು ತೆಗೆದುಕೊಳ್ಳಬೇಕು’ ಎಂದು ಹೇಳಿದ್ದರು. ಈ ವಿದ್ರೋಹಿಗಳ ಹಿಂಸಾಚಾರದಲ್ಲಿ 17 ಸಾವಿರ ಜನರು ಸಾವನ್ನಪ್ಪಿದ್ದರು. ಪ್ರಚಂಡ ಇವರು `ಪೀಪಲ್ಸ ವಾರ’ ಈ ಹೆಸರಿನಡಿಯಲ್ಲಿ ಸಶಸ್ತ್ರ ಆಂದೋಲನ ನಡೆಸಿದ್ದರು.