ಮಂಗಳೂರಿನ ಹಿಂದೂ ರಾಷ್ಟ್ರ-ಜಾಗೃತಿ ಸಭೆಗೆ ವಿರೋಧದ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ DCP ಅಶುತೋಷ್ ಇವರಿಗೆ ಮನವಿ !
ಮಂಗಳೂರು : ಹಿಂದೂ ಜನಜಾಗೃತಿ ಸಮಿತಿಯು ಇದುವರೆಗೆ ಸಮಿತಿಯು ದೇಶದಾದ್ಯಂತ ೨೩೦೦ ಸಭೆಗಳ ಆಯೋಜನೆ ಮಾಡಿ ೨೫ ಲಕ್ಷ ಹಿಂದೂಗಳಲ್ಲಿ ಧರ್ಮಜಾಗೃತಿ ಮೂಡಿಸಿದೆ. ಇದುವರೆಗೆ ಯಾವುದೇ ಅಹಿತಕರ ಘಟನೆಯಾಗಿಲ್ಲ. ಹೀಗಿರುವಾಗ ಇಸ್ಲಾಮಿಕ್ ಮತಾಂಧ ಪಕ್ಷವಾದ ಎಸ್.ಡಿ.ಪಿ.ಐ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು, ಹಿಂದೂ ಮತ್ತು ಮುಸಲ್ಮಾನರ ಬಗ್ಗೆ ಕೋಮು ಭಾವನೆಯನ್ನು ಕೆರಳಿಸಲು ಸಭೆಯ ಬಗ್ಗೆ ಸಮಾಜದಲ್ಲಿ ಅಪಪ್ರಚಾರ ಮಾಡುತ್ತಿದೆ. ಈ ಮೂಲಕ ಮುಸಲ್ಮಾನ ಸಮುದಾಯವನ್ನು ಹಿಂದೂ ಸಮಾಜದ ಎದುರು ಎತ್ತಿಕಟ್ಟಿ ಕೋಮುದ್ವೇಷ ಬಿತ್ತುವ ಕುಕೃತ್ಯವನ್ನು ಮಾಡುತ್ತಿದ್ದು ಇಂತಹ ಎಸ್.ಡಿ.ಪಿ.ಐ ಮೇಲೆ ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ಚಂದ್ರ ಮೊಗೇರ ಇವರು ಆಗ್ರಹಿಸಿದ್ದಾರೆ. ಅವರು ಈ ವಿಷಯದ ಕುರಿತು DCP ಅಶುತೋಷ್ ಅವರಿಗೆ ಮನವಿ ನೀಡುತ್ತಾ ಮಾತನಾಡಿದರು. ಈ ವೇಳೆಯಲ್ಲಿ ಉದ್ಯಮಿಗಳಾದ ಶ್ರೀ. ಮಧುಸೂಧನ ಅಯರ್, ಶ್ರೀ. ದಿನೇಶ್ ಎಂ.ಪಿ. ಹಿಂದೂ ಮಹಾಸಭಾದ ಶ್ರೀ. ಲೋಕೇಶ್ ಇವರು ಉಪಸ್ಥಿತರಿದ್ದರು.
SDPI is linked to the banned PFI which wanted to convert India into an Islamic state. And now they are opposing the Hindu demand for Hindu Rashtra!
Hindus are not communal, SDPI is !
So #Ban_Communal_SDPI pic.twitter.com/UIVwz8juMs— HinduJagrutiOrg (@HinduJagrutiOrg) March 10, 2023
ಶ್ರೀ. ಚಂದ್ರ ಮೊಗೇರ ಇವರು ಮಾತನ್ನು ಮುಂದುವರೆಸುತ್ತಾ,
1. ಹಿಂದೂ ಜನಜಾಗೃತಿ ಸಮಿತಿಯು ಕಳೆದ ೨೦ ವರ್ಷಗಳಿಂದ ಕಾನೂನು ಚೌಕಟ್ಟಿನಲ್ಲಿ ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮತ್ತು ಸಮಾಜ ಸಹಾಯ ಕಾರ್ಯವನ್ನು ಮಾಡುತ್ತಿದೆ. ಹಿಂದೂ ಸಮಾಜದಲ್ಲಿ ಹಿಂದೂ ಧರ್ಮದ ಆಚರಣೆಗಳ ಬಗ್ಗೆ ಜಾಗೃತಿಯಾಗಬೇಕು, ಹಿಂದೂ ಸಮಾಜದಲ್ಲಿ ಐಕ್ಯತೆ ನಿರ್ಮಾಣವಾಗಬೇಕು ಎಂದು ಈ ಸಭೆಗಳ ಆಯೋಜನೆ ಮಾಡಲಾಗುತ್ತಿದೆ. ಹಿಂದೂ ರಾಷ್ಟ್ರವೆಂದರೆ ಹಿಂದೂ ಧರ್ಮ ಮತ್ತು ರಾಷ್ಟವನ್ನು ಗೌರವಿಸುವವರ ರಾಷ್ಟ ಎಂದು ಅರ್ಥವಾಗಿದೆ. ಇದೊಂದು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ರಾಷ್ಟ್ರವಾಗಿದೆ.
2. ಇಂದು ರಾಜ್ಯದಲ್ಲಿ ಪ್ರವೀಣ ನೆಟ್ಟಾರು ಸೇರಿ ಹಲವು ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ಎಸ್.ಡಿ.ಪಿ.ಐ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಅದಲ್ಲದೇ ಬೆಂಗಳೂರು ಕೆಜಿ ಹಳ್ಳಿ, ಮಂಗಳೂರು, ಮೈಸೂರು, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ದಂಗೆ ಪ್ರಕರಣದಲ್ಲಿ ಎಸ್.ಡಿ.ಪಿ.ಐ ಕಾರ್ಯಕರ್ತರು ಭಾಗಿಯಾದ್ದಾರೆ. ಅದಲ್ಲದೇ ಮಂಗಳೂರಿನಲ್ಲಿ ಎಸ್.ಡಿ.ಪಿ.ಐ ಕಾರ್ಯಕ್ರಮದಲ್ಲಿ ಹಿಂದೂಗಳನ್ನು ಹತ್ಯೆ ಮಾಡಲು ಕರೆ ನೀಡುವ ಮೂಲಕ ದ್ವೇಷ ಭಾಷಣವನ್ನು ಮಾಡಿದ್ದಾರೆ.
3. ಈಗ ಇದೇ ಎಸ್.ಡಿ.ಪಿ.ಐ ಕಾರ್ಯಕರ್ತರು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಿಗೆ ಜೀವ ಬೆದರಿಕೆಯನ್ನು ಹಾಕುತ್ತಿದ್ದಾರೆ. ಈ ಎಲ್ಲ ಘಟನೆಗಳು ಅತ್ಯಂತ ಗಂಭೀರವಾಗಿದ್ದು ಎಸ್.ಡಿ.ಪಿ.ಐ ಮೇಲೆ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದರು.