ಚೀನಾ ನಮ್ಮ ನಾಯಕರು ಮತ್ತು ಅಧಿಕಾರಿಗಳಿಗೆ ಲಂಚ ನೀಡಿ ಖರೀದಿಸಲು ಪ್ರಯತ್ನಸುತ್ತಿದೆ !

ಮೈಕ್ರೋನೇಷಿಯಾದ ರಾಷ್ಟ್ರಪತಿಯ ಆರೋಪ !

ಮೈಕ್ರೋನೇಶಿಯ ದೇಶದ ರಾಷ್ಟ್ರಪತಿ ಡೇವಿಡ್ ಪ್ಯಾನುಎಲೋ

ನವ ದೆಹಲಿ – ಪ್ರಶಾಂತ ಮಹಾಸಾಗರದ ದ್ವೀಪ ಮೈಕ್ರೋನೇಶಿಯ ದೇಶದ ರಾಷ್ಟ್ರಪತಿ ಡೇವಿಡ್ ಪ್ಯಾನುಎಲೋ ಇವರು, ಚೀನಾವು ಪ್ರಶಾಂತ ಮಹಾಸಾಗರ ಕ್ಷೇತ್ರದಲ್ಲಿ ರಾಜಕೀಯ ಯುದ್ಧ ಮಾಡಲು ಪ್ರಯತ್ನಿಸುತ್ತಿದೆ. ಅದು ನಮ್ಮ ದೇಶದಲ್ಲಿನ ನಾಯಕರು ಮತ್ತು ಅಧಿಕಾರಿಗಳಿಗೆ ಲಂಚ ನೀಡಿ ಕೊಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಹಾಗೂ ಚೀನಾದಿಂದ ನನ್ನ ಜೀವಕ್ಕು ಅಪಾಯ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.

ರಾಷ್ಟ್ರಪತಿ ಡೇವಿಡ್ ಪ್ಯಾನುಎಲೋ ಇವರ ಕಾರ್ಯಕಾಲ ಬರುವ 2 ತಿಂಗಳಲ್ಲಿ ಮುಗಿಯಲಿದೆ. ಅವರು ದೇಶದ ಸಂಸತ್ತು ಮತ್ತು ರಾಜ್ಯದ ರಾಜ್ಯಪಾಲರಿಗೆ ಪತ್ರ ಬರೆದು ಈ ಆರೋಪ ಮಾಡಿದ್ದಾರೆ. ಇದರಲ್ಲಿ ಅವರು, ಚೀನಾ ತೈವಾನ್ ಜೊತೆಗೆ ಯುದ್ಧ ಮಾಡುವ ಸಿದ್ಧತೆಯಲ್ಲಿದೆ. ನಮ್ಮ ದೇಶದಲ್ಲಿ ಕೂಡ ಹಸ್ತಕ್ಷೇಪ ಮಾಡಿ ಭವಿಷ್ಯದಲ್ಲಿ ಪ್ರಶಾಂತ ಕ್ಷೇತ್ರದಲ್ಲಿ ಯುದ್ಧ ಮಾಡುವ ಪ್ರಯತ್ನ ಮಾಡುತ್ತಿದೆ. ಅಮೇರಿಕಾ ನಮ್ಮ ಹಳೆಯ ಸ್ನೇಹಿತವಾಗಿದ್ದೂ ಅದರ ಜೊತೆಗಿನ ನಮ್ಮ ಸಂಬಂಧ ಹಾಳಾಗಬೇಕು ಎಂದು ಚೀನಾ ಪ್ರಯತ್ನಿಸುತ್ತಿದೆ ಎಂದು ಹೇಳಿದರು.