ಜರ್ಮನಿಯ ಚರ್ಚನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ೭ ಜನರ ಸಾವು

ದಾಳಿಯ ಹಿಂದಿನ ಕಾರಣ ಸ್ಪಷ್ಟವಾಗಿಲ್ಲ !

ಹ್ಯಾಮ್ಬರ್ಗ್ (ಜರ್ಮನಿ) – ಜರ್ಮನಿಯ ಗ್ರಾಸ್ ಬೊರಸ್ಟೆಲ್ ಜಿಲ್ಲೆಯ ಡೀಲಬೋಗೆ ಸ್ಟ್ರಿಟನಲ್ಲಿರುವ ಒಂದು ಚರ್ಚನಲ್ಲಿ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಏಳು ಜನರು ಹತರಾಗಿದ್ದಾರೆ ಹಾಗೂ ಕೆಲವರು ಗಾಯಗೊಂಡಿದ್ದಾರೆ. ದಾಳಿಯ ಮಾಹಿತಿ ದೊರೆಯುತ್ತಲೇ ಪೊಲೀಸರು ಚರ್ಚನ್ನು ಸುತ್ತುವರೆದು ಗುಂಡಿನ ದಾಳಿ ನಡೆಸಿರುವವರ ಶೋಧ ಕಾರ್ಯಾ ಆರಂಭಿಸಿದ್ದಾರೆ; ಆದರೆ ಅವರು ಸಿಗಲಿಲ್ಲ. ಈ ದಾಳಿಯ ಕಾರಣ ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಪೊಲೀಸರು ಚರ್ಚನ ಪರಿಸರ ನಿರ್ಬಂಧಿಸಿದ್ದಾರೆ.