ಅಫಘಾನಿಸ್ತಾನದಲ್ಲಿ ತಾಲಿಬಾನ ಕಮಾಂಡರ ಮತ್ತು ರಾಜ್ಯಪಾಲನ ಹತ್ಯೆ !

ದಾವೂದ ಮುಜಮ್ಮಿಲ್

ಕಾಬುಲ (ಅಫಘಾನಿಸ್ತಾನ) – ತಾಲಿಬಾನ ಹಿರಿಯ ಕಮಾಂಡರ ಮತ್ತು ಬಾಲ್ಖ ಪ್ರಾಂತ್ಯದ ರಾಜ್ಯಪಾಲ ದಾವೂದ ಮುಜಮ್ಮಿಲ್ ನನ್ನು ಬಾಂಬ್ ಸ್ಫೋಟದ ಮೂಲಕ ಹತ್ಯೆ ಮಾಡಲಾಯಿತು. ದಾವೂದನ ಕಾರ್ಯಾಲಯದಲ್ಲಿ ನುಗ್ಗಿ ಬಾಂಬ್ ಸ್ಫೋಟಿಸಲಾಯಿತು. ಇದರಲ್ಲಿ 2 ಹತ್ಯೆಗೊಳಗಾದರು. ಈ ಹತ್ಯೆಯ ಹಿಂದಿನ ಕಾರಣ ಇದುವರೆಗೂ ಸ್ಪಷ್ಟವಾಗಿಲ್ಲ. ಈ ಆಕ್ರಮಣದ ಹೊಣೆಯನ್ನು ಇದುವರೆಗೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಅಫಘಾನಿಸ್ತಾನದಲ್ಲಿ ಕಳೆದ ಕೆಲವು ದಿನಗಳಿಂದ `ಇಸ್ಲಾಮಿಕ ಸ್ಟೇಟ ಖುರಾಸಾನ ಪ್ರೊವ್ಹಿಸನ್ಸ’ ಈ ಭಯೋತ್ಪಾದಕ ಸಂಘಟನೆಯಿಂದ ನಿರಂತರ ಭಯೋತ್ಪಾದಕ ಕಾರ್ಯಾಚರಣೆ ನಡೆಸುತ್ತಿದೆ.