ಮಹಾರಾಷ್ಟ್ರದಲ್ಲಿ ‘ಲವ್ ಜಿಹಾದ್’ನ ೧ ಲಕ್ಷಕ್ಕೂ ಹೆಚ್ಚಿನ ಘಟನೆ ನಡೆದಿವೆ ! – ಮಂಗಲಪ್ರಭಾತ ಲೋಢಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವೆ

(ಸೌಜನ್ಯ : News 18)

ಮುಂಬಯಿ – ನಾವು ಮಹಿಳೆಯರ ಸುರಕ್ಷತೆಯ ವಿಷಯ ಮಾತಾಡುತ್ತೇವೆ; ಆದರೆ ರಾಜ್ಯದಲ್ಲಿ ‘ಲವ್ ಜಿಹಾದ್’ನ ವಿರುದ್ಧ ೫೦ ಸಾವಿರಕ್ಕೂ ಹೆಚ್ಚು ಉಪಸ್ಥಿತಿ ಇರುವ ಆಂದೋಲನ ನಡೆಸಿದ್ದಾರೆ. ಮಹಾರಾಷ್ಟ್ರದಲ್ಲಿ ಲವ್ ಜಿಹಾದ್ ನ ೧ ಲಕ್ಷಕ್ಕಿಂತಲೂ ಹೆಚ್ಚಿನ ಘಟನೆ ಘಟಿಸಿವೆ. ಶ್ರದ್ಧಾ ವಾಲಕರನಂತೆ ೩೬ ತುಂಡುಗಳ ಮಾಡುವ ಪ್ರಕರಣ ಮಹಾರಾಷ್ಟ್ರದಲ್ಲಿ ಆಗಲು ಬಿಡುವುದಿಲ್ಲ, ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವೆ ಮಂಗಲ ಪ್ರಭಾತ ಲೋಢಾ ಇವರು ವಿಧಾನಸಭೆಯಲ್ಲಿ ಹೇಳಿಕೆ ನೀಡಿದರು.

‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾರ್ಚ್ ೮ ರಂದು ವಿಧಾನಸಭೆಯ ಚರ್ಚೆಯ ಸಮಯದಲ್ಲಿ ಉತ್ತರ ನೀಡುವಾಗ ಮಂಗಲ ಪ್ರಭಾತ ಲೋಢಾ ಇವರು ಮೇಲಿನ ಹೇಳಿಕೆ ನೀಡಿದರು.ಈ ಸಮಯದಲ್ಲಿ ಮಂಗಲಪ್ರಭಾತ ಲೋಢಾ ಇವರು, ”ಲವ್ ಜಿಹಾದ್ ಘಟನೆಯಿಂದ ಸಮಾಜ ಸಂಕಷ್ಟದಲ್ಲಿದೆ. ಅಂತರ್ಧಮಿಯ ವಿವಾಹಗಳಿಂದ ಮಹಿಳೆಯರ ಮೇಲೆ ಆಗುವ ದೌರ್ಜನ್ಯದ ಘಟನೆಗಳು ನಡೆಯಬಾರದು, ಅದಕ್ಕಾಗಿ ಸರಕಾರ ಸ್ಥಾಪಿಸಿರುವ ಸಮಿತಿಗಳ ಮೂಲಕ ಕುಟುಂಬದಿಂದ ಸಂಪರ್ಕ ಕಳೆದುಕೊಂಡಿರುವ ಮಹಿಳೆಯರಿಗೆ ಕುಟುಂಬದ ಜೊತೆಗೆ ಸಂಪರ್ಕ ಕಲ್ಪಿಸಲಾಗುವುದು.” ಎಂದು ಹೇಳಿದರು.

ಸಂಪಾದಕರ ನಿಲುವು

* ಇನ್ನು ಮುಂದೆ ಘಟನೆಗಳು ನಡೆಯುವುದಿಲ್ಲ ಎಂಬ ಭರವಸೆ !