ವರ್ಲ್ಡ್ ಉಘುರ್ ಕಾಂಗ್ರೆಸ್ ಸಂಘಟನೆಗೆ ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ನಾಮನಿರ್ದೇಶನ

ಚೀನಾದಿಂದ ಟೀಕೆ

ವಾಷಿಂಗ್ಟನ್ – ಚೀನಾದಲ್ಲಿನ ಉಘುರ್ ಮುಸಲ್ಮಾನರ ಹಕ್ಕುಗಳಿಗಾಗಿ ಕೆಲಸ ಮಾಡುವ ಸಂಘಟನೆ ‘ವರ್ಲ್ಡ್ ಉಘುರ್ ಕಾಂಗ್ರೆಸ್’ಗೆ ೨೦೨೩ ರ ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ನಾಮನಿರ್ದೇಶನ ಮಾಡಲಾಗಿದೆ. ಕೆನಡಾದ ಸಂಸದ, ನಾರ್ವೇದ ನಾಯಕ ಮತ್ತು ರಾಜಕೀಯ ಪಕ್ಷ ‘ನೋರ್ವೇ ವೆಸ್ಟ್ರೆ’ಯ ಯುವ ಸಂಘಟನೆಯಿಂದ ಈ ಸಂಘಟನೆಯ ಹೆಸರು ಸೂಚಿಸಿದ್ದಾರೆ. ಡಿಸೆಂಬರ್ ನಲ್ಲಿ ಇದರ ಬಗ್ಗೆ ಘೋಷಣೆ ಮಾಡುವರು. ಮೊಬೈಲ್ ಪುರಸ್ಕಾರ ನೀಡುವ ಸಮಿತಿಯಿಂದ ಈ ಸಂಘಟನೆಯ ಹೆಸರು ಘೋಷಿಸದೇ ಇದ್ದರು ಕೂಡ, ಅದನ್ನು ಸೂಚಿಸುವವರು ಹೆಸರು ಘೋಷಣೆ ಮಾಡಿದ್ದಾರೆ.

ವರ್ಲ್ಡ್ ಉಘುರ್ ಕಾಂಗ್ರೆಸ್ಸಿಗೆ ನಾಮನಿರ್ದೇಶನ ಸಿಕ್ಕಿರುವ ವಾರ್ತೆಯ ಬಗ್ಗೆ ಅಮೇರಿಕಾದಲ್ಲಿನ ಚೀನಾದ ರಾಯಭಾರಿ ಕಚೇರಿಯಿಂದ ಟೀಕಿಸಲಾಗಿದೆ. ರಾಯಭಾರಿಯು, ಭಯೋತ್ಪಾದಕ ಸಂಘಟನೆಯ ಜೊತೆ ಇಂತಹ ತಥಾಕಥಿತ ಸಂಘಟನೆಯ ಸಂಬಂಧ ಇದೆ, ಇಂತಹ ಸಂಘಟನೆಗೆ ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ನಾಮನಿರ್ದೇಶಿತಗೊಳಿಸುವುದು ಅಂತರಾಷ್ಟ್ರೀಯ ಶಾಂತಿಗಾಗಿ ಅಪಾಯಕಾರಿ ಆಗಿದೆ ಎಂದು ಹೇಳಿದೆ.