ಹಿಂದೂ ಧರ್ಮ ಬಿಟ್ಟು ಮುಸಲ್ಮಾನ ಮತ್ತು ಕ್ರೈಸ್ತರಾದ ಜನರಿಗೆ ಮೀಸಲಾತಿಯ ಲಾಭ ಸಿಗಬಾರದು ! – ವಿಶ್ವ ಹಿಂದೂ ಪರಿಷತ್

ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕಾರಿ ಅಧ್ಯಕ್ಷ ಅಲೋಕ ಕುಮಾರ

ನೋಯ್ಡಾ (ಉತ್ತರ ಪ್ರದೇಶ) – ದೇಶದಲ್ಲಿ ಮತಾಂತರಗೊಂಡಿರುವ ಜನರಿಗೆ ನೀಡಲಾಗುತ್ತಿರುವ ಮೀಸಲಾತಿ ಬಗ್ಗೆ ಈಗ ತೀವ್ರ ಗತಿಯಲ್ಲಿ ವಿರೋಧ ಸಾಗುತ್ತಿದೆ. ಹಿಂದೂ ಧರ್ಮ ಬಿಟ್ಟು ಇಸ್ಲಾಂ ಮತ್ತು ಕ್ರೈಸ್ತ ಆಗಿರುವ ಜನರಿಗೆ ಮೀಸಲಾತಿಯ ಲಾಭ ಸಿಗಬಾರದು, ಎಂದು ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿದೆ. ಉತ್ತರ ಪ್ರದೇಶದಲ್ಲಿ ಗ್ರೇಟರ್ ನೋಯ್ಡಾದ ಗೌತಮ್ ಬುದ್ಧ ವಿದ್ಯಾ ಪೀಠದಲ್ಲಿ ಆಯೋಜಿಸಲಾಗಿದ್ದ ಒಂದು ಚರ್ಚಾಕೂಟದಲ್ಲಿ ಒತ್ತಾಯಿಸಲಾಯಿತು. ವಿಶ್ವ ಸಂವಾದ ಕೇಂದ್ರ, ಗೌತಮ ಬುದ್ಧ ವಿದ್ಯಾಪೀಠ ಮತ್ತು ಹಿಂದೂ ವಿಶ್ವ ಪತ್ರಿಕೆಯ ವತಿಯಿಂದ ‘ಮತಾಂತರ ಮತ್ತು ಮೀಸಲಾತಿ’ ಈ ವಿಷಯದ ಬಗ್ಗೆ ಇತ್ತೀಚಿಗೆ ಒಂದು ಚರ್ಚಾಕೂಟ ಆಯೋಜಿಸಲಾಗಿತ್ತು. ಈ ಚರ್ಚಾಕೂಟಲ್ಲಿ ಮತಾಂತರಗೊಂಡಿರುವವರಿಗೆ ನೀಡಲಾಗುವ ಮೀಸಲಾತಿಯ ಬಗ್ಗೆ ವಿವಿಧ ವಿಭಾಗದಲ್ಲಿನ ೧೫೦ ಜನರು ಅವರ ಅಭಿಪ್ರಾಯ ಮಂಡಿಸಿದರು. ಇದರಲ್ಲಿ ಮಾಜಿ ನ್ಯಾಯಾಧೀಶ, ವಿದ್ಯಾಪೀಠದ ಕುಲಗುರು, ಪ್ರಾಧ್ಯಾಪಕರು, ಪತ್ರಕರ್ತರು ಮತ್ತು ನ್ಯಾಯವಾದಿಗಳು ಇವರು ಭಾಗವಹಿಸಿದ್ದರು. ಧರ್ಮ ಬದಲಾಯಿಸುವವರಿಗೆ ಮೀಸಲಾತಿಯ ಲಾಭ ಸಿಗಬಾರದು, ಎಂದು ಇತರ ಗಣ್ಯರ ಅಭಿಪ್ರಾಯ ಕೂಡ ಆಗಿತ್ತು.

ಮತಾಂತರಗೊಂಡಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯ ಅಂಶಗಳ ಮೇಲೆ ಉಪಾಯ ಮಾಡುವುದಕ್ಕಾಗಿ ಕೇಂದ್ರ ಸರಕಾರ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಆಯೋಗದ ಸ್ಥಾಪನೆ ಮಾಡಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾಧ್ಯಮ ಶಾಖೆಯಾಗಿರುವ ವಿಶ್ವ ಸಂವಾದ ಕೇಂದ್ರದಿಂದ ಬಾಲಕೃಷ್ಣನ್ ಆಯೋಗಕ್ಕೆ ಮನವಿ ನೀಡುವ ನಿರ್ಣಯ ತೆಗೆದುಕೊಂಡಿದೆ. ಮೀಸಲಾತಿಯ ಬಗ್ಗೆ ಯೋಗ್ಯ ನಿಷ್ಕರ್ಷದವರೆಗೆ ತಲುಪುವುದಕ್ಕಾಗಿ ಆಯೋಗದ ಎದುರು ಸತ್ಯಾಂಶ ಮಂಡಿಸಲು ಯೋಗ್ಯ ನಿರ್ಧಾರ ಕೈಗೊಳ್ಳಬಹುದು ಎಂದು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕಾರಿ ಅಧ್ಯಕ್ಷ ಅಲೋಕ ಕುಮಾರ ಇವರು ಹೇಳಿದರು.