ಕರಾಚಿ (ಪಾಕಿಸ್ತಾನ) – ಲಾಹೊರನ ಪಂಜಾಬ ವಿಶ್ವವಿದ್ಯಾಲಯದಲ್ಲಿ ಹೋಳಿ ಆಡುವ ಹಿಂದೂ ವಿದ್ಯಾರ್ಥಿಗಳ ಮೇಲೆ ದಾಳಿ ನಡೆದಿರುವ ಘಟನೆಯಂತೆ ಕರಾಚಿ ವಿಶ್ವವಿದ್ಯಾಲಯದಲ್ಲಿ ಕೂಡ ನಡೆದಿದೆ. ಇಲ್ಲಿ ಮುಸಲ್ಮಾನ ವಿದ್ಯಾರ್ಥಿಗಳು ನಡೆಸಿರುವ ದಾಳಿಯಲ್ಲಿ ಕೆಲವು ಹಿಂದೂ ವಿದ್ಯಾರ್ಥಿ ಗಾಯಗೊಂಡಿದ್ದಾರೆ. ಈ ಘಟನೆಗೆ ವಿಶ್ವವಿದ್ಯಾಲಯದ ಅಧಿಕಾರಿಗಳಿಂದ ಪುಷ್ಟಿ ಸಿಕ್ಕಿದೆ.
Holi festival in Pakistan
1) 15 Hindu students injured after being attacked by Islami Jamiat-e-Talaba (IJT) radicals for celebrating Holi at Punjab University, Lahore
2) Hindu students beaten up by Islami Jamiat-e-Talaba (IJT) radicals for celebrating Holi at Karachi University pic.twitter.com/mYmGvDmchD
— Anshul Saxena (@AskAnshul) March 7, 2023
ವಿಶ್ವವಿದ್ಯಾಲಯದಲ್ಲಿ ಸಿಂಧಿ ವಿಭಾಗದಲ್ಲಿ ಹಿಂದೂ ವಿದ್ಯಾರ್ಥಿ ಹೋಳಿ ಆಡುತ್ತಿರುವಾಗ ಅವರ ಮೇಲೆ ದಾಳಿ ಮಾಡಿದರು. ಅಧಿಕಾರಿಗಳು, ಇಂತಹ ಘಟನೆ ನಮ್ಮ ನೀತಿಯ ವಿರುದ್ಧವಾಗಿದೆ, ನಾವು ಈ ಘಟನೆಯ ವಿಚಾರಣೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಓರ್ವ ಹಿಂದೂ ವಿದ್ಯಾರ್ಥಿನಿಯು ಈ ಘಟನೆಯ ಒಂದು ವಿಡಿಯೋ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಆಕೆ, ಇಸ್ಲಾಮಿ ಜಾಮಿಯತ್ ತುಲಬಾ (ಐಜೆಟಿ ) ಸಂಘಟನೆಯ ಕೆಲವು ಕಾರ್ಯಕರ್ತರು ನಮ್ಮ ಮೇಲೆ ದಾಳಿ ಮಾಡಿದರು ಎಂದು ಹೇಳಿದಳು.
ಸಂಪಾದಕೀಯ ನಿಲುವುಇಸ್ಲಾಮಿ ದೇಶದಲ್ಲಿ ಮುಸಲ್ಮಾನರ ‘ಸರ್ವಧರ್ಮ ಸಮಭಾವ’ ! ಈ ಕುರಿತು ಭಾರತದಲ್ಲಿನ ಜಾತ್ಯತೀತರು, ಪ್ರಗತಿ(ಅಧೋಗತಿ)ಪರರು ಎಂದೂ ಮಾತನಾಡುವುದಿಲ್ಲ, ಇದನ್ನು ತಿಳಿದುಕೊಳ್ಳಿರಿ ! |