ಪಾಕಿಸ್ತಾನದಲ್ಲಿರುವ ಅಸುರಕ್ಷಿತ ಹಿಂದೂ
ಲಾಹೋರ – ಪಾಕಿಸ್ತಾನದಲ್ಲಿರುವ ಕಟ್ಟಾವಾದಿ ಮುಸ್ಲಿಂ ಸಂಘಟನೆಯ ವಿದ್ಯಾರ್ಥಿಗಳು ಪಂಜಾಬ ವಿದ್ಯಾಪೀಠದಲ್ಲಿ ಬಣ್ಣದೋಕುಳಿ ಆಡುವ ಹಿಂದೂ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದರು. ಈ ದಾಳಿಯಲ್ಲಿ 15 ಹಿಂದೂ ವಿದ್ಯಾರ್ಥಿಗಳು ಗಾಯಗೊಂಡರು. ಈ ಘಟನೆಯ ವಿಡಿಯೋ ಪ್ರಸಾರಗೊಂಡಿದೆ.
Hindu students attacked by Islamists in Pakistan for celebrating Holi.
Similar incidents of attacks on Holi celebrations happen in India every year.
Secular cowardice cost Hindus more than Islamist violence.pic.twitter.com/nGpuCXuFRP
— Pakistan Untold (@pakistan_untold) March 6, 2023
ಪಂಜಾಬ ವಿದ್ಯಾಪೀಠದ ಕಾನೂನು ವಿಶ್ವವಿದ್ಯಾಲಯದಲ್ಲಿ ಹೋಳಿಹಬ್ಬ ಆಚರಿಸಲು 30 ಹಿಂದೂ ವಿದ್ಯಾರ್ಥಿಗಳು ಒಂದುಗೂಡಿದ್ದರು. ‘ಇಸ್ಲಾಮಿ ತಮಿಯತ ತುಲಬಾ’ (ಐಜೆಟಿ) ಈ ಮುಸ್ಲಿಂ ಸಂಘಟನೆಯ ಮತಾಂಧ ಕಾರ್ಯಕರ್ತರು ಅವರನ್ನು ಹೋಳಿ ಆಚರಿಸುವುದನ್ನು ಬಲವಂತವಾಗಿ ತಡೆದರು. ಇದರಿಂದ ಹೊಡೆದಾಟ ನಡೆಯಿತು. ಈ ಗಲಾಟೆಯಲ್ಲಿ 15 ಹಿಂದೂ ವಿದ್ಯಾರ್ಥಿಗಳು ಗಾಯಗೊಂಡರು. ಹೋಳಿ ಆಚರಿಸಲು ವಿಶ್ವವಿದ್ಯಾಲಯದ ಅನುಮತಿ ಪಡೆದಿರುವುದಾಗಿ ಹಿಂದೂ ವಿದ್ಯಾರ್ಥಿಗಳು ಹೇಳಿದ್ದಾರೆ. ‘ಕುಲಪತಿಗಳು ಈ ಪ್ರಕರಣದ ವಿಚಾರಣೆಯ ಆದೇಶ ನೀಡಿದ್ದಾರೆ’, ಎಂದು ಪಂಜಾಬ ವಿಶ್ವವಿದ್ಯಾಲಯದ ವಕ್ತಾರ ಖುರ್ರಮ್ ಶಹಜಾದ ಹೇಳಿದ್ದಾರೆ.