ಕಾಂಗ್ರೆಸ್ಸಿನಿಂದ ವಿರೋಧ, ಭಕ್ತರಲ್ಲಿ ಅಸಮಾಧಾನ !
(‘ಮೋಹನಥಾಳ’ಎಂದರೆ ಕಡಲೆಹಿಟ್ಟಿನಿಂದ ತಯಾರಿಸಿರುವ ಒಂದು ರೀತಿಯ ಬರ್ಫಿ)
ಕರ್ಣಾವತಿ (ಗುಜರಾತ) – ೫೧ ಶಕ್ತಿಪೀಠಗಳಲ್ಲಿ ಒಂದಾಗಿರುವ ಗುಜರಾತನ ಬನಾಸಕಾಂಠಾ ಜಿಲ್ಲೆಯ ಅಂಬಾಜಿಮಾತಾ ದೇವಸ್ಥಾನದಲ್ಲಿ ‘ಮೋಹನಥಾಳ’ ಪ್ರಸಾದ ವಿತರಣೆ ನಿಲ್ಲಿಸಿರುವುದರಿಂದ ವಿವಾದ ಆರಂಭವಾಗಿದೆ. ನಾಗರೀಕರು ಈ ವಿಷಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ಸಿನಿಂದ ಮೋಹನಥಾಳ ಮತ್ತೆ ಆರಂಭಿಸಲು ಒತ್ತಾಯಿಸಿದೆ ಹಾಗೂ ಭಾಜಪದ ಮೋಹನಥಾಳಗೆ ಆಂತರಿಕ ಬೆಂಬಲವಿದೆ. ಈಗ ಈ ದೇವಸ್ಥಾನದಲ್ಲಿ ಪ್ರಸಾದ ಎಂದು ಚಿಕ್ಕಿ ನೀಡುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮೋಹನಥಾಳ ನಿಲ್ಲಿಸಿ ಪ್ರಸಾದವೆಂದು ಚಿಕ್ಕಿ ಹಂಚಲಾಗುತ್ತಿದೆ. (ದೇವಸ್ಥಾನದಲ್ಲಿ ವರ್ಷಗಳಿಂದ ಕೆಲವು ಪದ್ಧತಿ ಸಾಂಪ್ರದಾಯ ನಡೆದುಕೊಂಡು ಬರುತ್ತಿರುತ್ತದೆ. ದೇವಸ್ಥಾನದಲ್ಲಿ ನೀಡುವ ಪ್ರಸಾದ ಇದು ಕೂಡ ಅದರದೇ ಒಂದು ಭಾಗವಾಗಿದೆ. ಈ ಬಗ್ಗೆ ಧರ್ಮಾಧಿಕಾರಿಗಳ ಅಭಿಪ್ರಾಯ ಗಮನಕ್ಕೆ ತೆಗೆದುಕೊಳ್ಳದೆ ಪರಸ್ಪರ ಬದಲಾಯಿಸುವ ಜಿಲ್ಲಾಧಿಕಾರಿಗಳು ಎಂದಾದರೂ ಮಸೀದಿಯಲ್ಲಿನ ಪದ್ಧತಿಗಳು ಸಾಂಪ್ರದಾಯಿಕತೆ ಬದಲಾಯಿಸುವ ಧೈರ್ಯ ತೋರಿಸುವರೆ ? – ಸಂಪಾದಕರು)
೧. ಭಾಜಪದ ಗುಜರಾತ ರಾಜ್ಯದಲ್ಲಿನ ಮಾಧ್ಯಮ ಸಮನ್ವಯಕರಾದ ಡಾ. ಯಜ್ಞೇಶ ದವೆ ಇವರು, ಓರ್ವ ಬ್ರಾಹ್ಮಣ ಇರುವುದರಿಂದ, ಮೋಹನಥಾಳ ಪ್ರಸಾದ ಮುಂದುವರಿಯಬೇಕೆಂದು ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಟ್ವಿಟ್ ಮೂಲಕ ಹೇಳಿದ್ದಾರೆ.
Gujarat: Shaktipeeth Ambaji temple prasad changed from ‘mohanthal’ to ‘chikki’, devotees protest, give ultimatum of 48 hourshttps://t.co/CuSdpgnhZv
— OpIndia.com (@OpIndia_com) March 5, 2023
೨. ಮೋಹನಥಾಳ ಪ್ರಸಾದ ವಿಧವೆಯರು ಮತ್ತು ನಿರ್ಗತಿಕ ಮಹಿಳೆಯರಿಂದ ತಯಾರಿಸಲಾಗುತ್ತಿತ್ತು. ‘ಮೋಹನಥಾಳ ನಿಲ್ಲಿಸಿರುವುದರಿಂದ ಅವರ ಉದ್ಯೋಗವೇ ನಿಂತಿತು,’ ಎಂದು ಹೇಳುತ್ತಿದ್ದಾರೆ.
೩. ಕಾಂಗ್ರೆಸ್ ಮುಖಂಡ ಮತ್ತು ಬ್ರಹ್ಮ ಸಮಾಜದ ನಾಯಕ ಹೇಮಾಂಗ ರಾವಲ ಇವರು, ಕಳೆದ ಎರಡು ವರ್ಷಗಳಲ್ಲಿ ಮೋಹನಥಾಳದ ಬೆಲೆ ಹೆಚ್ಚಿಸಲಾಗಿತ್ತು. ಹಿಂದೆ ೧೦ ರೂಪಾಯಿಗೆ ಸಿಗುವ ಮೋಹನಥಾಳ ಇಂದು ೧೨, ೧೫, ೧೮ ಮತ್ತು ಕೊನೆಗೆ ೨೫ ರೂಪಾಯಿಗೆ ದೊರೆಯುತ್ತಿತ್ತು ನಂತರ ಅದನ್ನು ನಿಲ್ಲಿಸಲಾಯಿತು ಎಂದು ಹೇಳಿದರು.
ಸಂಪಾದಕೀಯ ನಿಲುವುದೇವಸ್ಥಾನದ ಸರಕಾರಿಕರಣಯಾದ ನಂತರ ಇನ್ನೇನು ಆಗಲು ಸಾಧ್ಯ ? ಕಳೆದ ೬೦ ವರ್ಷಗಳಿಗಿಂತಲೂ ಹೆಚ್ಚಿನ ಕಾಲ ‘ಮೋಹನಥಾಳ ‘ ಪ್ರಸಾದವೆಂದು ನೀಡುತ್ತಿದ್ದು ಅನಿರೀಕ್ಷಿತವಾಗಿ ಅದನ್ನು ನಿಲ್ಲಿಸುವುದು ಎಂದರೆ ಇದು ದಬ್ಬಾಳಿಕೆಯಾಗಿದೆ ! ದೇವಸ್ಥಾನಗಳನ್ನು ಭಕ್ತರ ನಿಯಂತ್ರಣದಲ್ಲಿ ಇರುವುದಕ್ಕಾಗಿ ಈಗ ಹಿಂದೂ ರಾಷ್ಟ್ರವೇ ಅನಿವಾರ್ಯ ! |