ಪಾಕಿಸ್ತಾನದ ಮಾಜಿ ಹಣಕಾಸು ಸಚಿವರಿಂದ ಪಾಕಿಸ್ತಾನಕ್ಕೆ ಕಪಾಳಮೋಕ್ಷ !
ಕರಾಚಿ (ಪಾಕಿಸ್ತಾನ) – ಇಸ್ಲಾಮಿಕ್ ರಾಷ್ಟ್ರಗಳು ಜನಸಂಖ್ಯೆಯನ್ನು ನಿಯಂತ್ರಿಸಿದ ರೀತಿಯಲ್ಲಿ ಪಾಕಿಸ್ತಾನವು ನಿಯಂತ್ರಿಸದೇ ಇದ್ದುದ್ದರಿಂದ ದೇಶದ ಸ್ಥಿತಿ ಹದಗೆಟ್ಟಿದೆ ಎಂದು ಪಾಕಿಸ್ತಾನದ ಮಾಜಿ ಹಣಕಾಸು ಸಚಿವ ಮಿಫ್ತಾಹ ಇಸ್ಮಾಯಿಲ್ ಹೇಳಿದ್ದಾರೆ. ಕರಾಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು. ‘ಆರ್ಥಿಕ ಸವಾಲುಗಳನ್ನು ಮೆಟ್ಟಿ ನಿಲ್ಲಲು ಜನಸಂಖ್ಯೆ ನಿಯಂತ್ರಣಕ್ಕೆ ಒತ್ತು ನೀಡಬೇಕು’, ಎಂದು ಮನವಿ ಮಾಡಿದರು.
1. ಮಿಫ್ತಾಹ ಇಸ್ಮಾಯಿಲ್ ತಮ್ಮ ಮಾತನ್ನು ಮುಂದುವರೆಸುತ್ತಾ, ಪಾಕಿಸ್ತಾನದಲ್ಲಿ ಪ್ರತಿ ವರ್ಷ 55 ಲಕ್ಷ ಮಕ್ಕಳು ಜನಿಸುತ್ತಿದ್ದಾರೆ. ಇಷ್ಟೊಂದು ಮಕ್ಕಳು ಹುಟ್ಟುತ್ತಿದ್ದರೆ ಪಾಕಿಸ್ತಾನದಲ್ಲಿ ಜನಸಂಖ್ಯಾ ಯೋಜನೆ ಬಗ್ಗೆ ಗಮನ ಹರಿಸುವುದು ಯಾವಾಗ ? ಈ ವಿಷಯವನ್ನು ಚರ್ಚಿಸಿದಾಗ, ಅದನ್ನು ಟೀಕಿಸಲು ವಿಶೇಷ ಗುಂಪು ಮುಂದೆ ಬರುತ್ತದೆ. ಮುಸ್ಲಿಂ ರಾಷ್ಟ್ರಗಳಾದ ಈಜಿಪ್ಟ್, ಬಾಂಗ್ಲಾದೇಶ, ಟ್ಯುನೀಷಿಯಾ ಜನಸಂಖ್ಯೆಯನ್ನು ನಿಯಂತ್ರಿಸಲು ಆಯೋಜನೆ ಮಾಡಿವೆ; ಆದರೆ ನಾವು ಮಾಡಲಿಲ್ಲ. ಕಳೆದ 10 ವರ್ಷಗಳಲ್ಲಿ ನಮ್ಮ ಜನನ ಸಂಖ್ಯಾ ದರವು ಬಾಂಗ್ಲಾದೇಶದಂತೆಯೇ ಇದ್ದರೆ, ಪಾಕಿಸ್ತಾನದ ಒಟ್ಟು ರಾಷ್ಟ್ರೀಯ ಆದಾಯವು ಇಂದು ಶೇಕಡ 15 ಕ್ಕಿಂತ ಹೆಚ್ಚಾಗಿರುತ್ತದೆ.
2. ಇಸ್ಮಾಯಿಲ್ ತಮ್ಮ ಮಾತನ್ನು ಮುಂದುವರೆಸುತ್ತಾ, ಪಾಕಿಸ್ತಾನ ಸ್ಥಾಪನೆಯ ಮೊದಲ 11 ವರ್ಷಗಳಲ್ಲಿ 7 ಪ್ರಧಾನಿಗಳಾದರು, ಅದೇ ಅವಧಿಯಲ್ಲಿ ಭಾರತವು 5 ಐಐಟಿಗಳನ್ನು ಸ್ಥಾಪಿಸಿತು. ಹಿಂದಿನ ಸಾಲಗಳನ್ನು ಮರುಪಾವತಿಸಲು ಪಾಕಿಸ್ತಾನ ಹೆಚ್ಚು ಸಾಲ ಪಡೆಯುತ್ತದೆ. ಈ ವಿಧಾನವು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.
I had the opportunity to speak to a few Rotary clubs in Karachi yesterday. Here is my speech. Please take a listen and send me your comments either here or on my Facebook page. I look forward to hearing your valuable views on my speech. https://t.co/Z3vPUWmC3p
— Miftah Ismail (@MiftahIsmail) March 5, 2023
ಸಂಪಾದಕೀಯ ನಿಲುವು
|