ಬಿಹಾರನ ಪ್ರಿಯಾ ದಾಸ ಒಲೆಯಲ್ಲಿ ಮನುಸ್ಮೃತಿಯನ್ನು ಸುಟ್ಟಿ ಅದರ ಬೆಂಕಿಯಿಂದ ಸಿಗರೇಟ ಹಚ್ಚಿಕೊಂಡಳು !

ಸಾಮಾಜಿಕ ಮಾಧ್ಯಮದ ಮೂಲಕ ಘಟನೆಯ ವಿಡಿಯೋ ಪ್ರಸಾರ

ನವ ದೆಹಲಿ – ಬಿಹಾರಿನ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗುತ್ತಿದೆ. ಇದರಲ್ಲಿ ಓರ್ವ ಯುವತಿಯು ಮನುಸ್ಮೃತಿ ಸುಡುತ್ತಿರುವುದು ಕಾಣಿಸುತ್ತಿದೆ. ಈ ವಿಡಿಯೋ ಬಗ್ಗೆ ಕೆಲವು ಜನರಿಂದ ಬೆಂಬಲ ಸಿಗುತ್ತಿದ್ದರೆ, ಇನ್ನೂ ಕೆಲವರು ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸಲಾಗಿದೆಯೆಂದು ಹೇಳಲಾಗುತ್ತಿದೆ.

ಈ ವಿಡಿಯೋದಲ್ಲಿರುವ ಯುವತಿ ಪ್ರಿಯಾ ದಾಸ ಈಕೆಯ ಕೈಯಲ್ಲಿ ಸಿಗರೇಟು ಇದೆ. ಅವಳು ಒಲೆಯ ಹತ್ತಿರ ಕುಳಿತಿದ್ದಾಳೆ. ಒಲೆಯ ಮೇಲೆ ಕೋಳಿ ಮಾಂಸ ಬೇಯಿಸುತ್ತಿದ್ದಾಳೆ. ಯುವತಿ ತನ್ನ ಪಕ್ಕದಲ್ಲಿ ನೆಲದ ಮೇಲೆ ಇಟ್ಟಿದ್ದ ಮನುಸ್ಮೃತಿಯನ್ನು ಕೈಯಲ್ಲಿ ಹಿಡಿದು ಅದನ್ನು ಒಲೆಯಲ್ಲಿ ಹಾಕಿ ಸುಡುತ್ತಾಳೆ. ನಂತರ ಸುಡುತ್ತಿರುವ ಮನುಸ್ಮೃತಿಯ ಮೇಲೆ ತನ್ನ ಕೈಯಲ್ಲಿರುವ ಸಿಗರೇಟನ್ನು ಹೊತ್ತಿಸುತ್ತಾಳೆ. ಮತ್ತು ಅವಳು, ಮನುಸ್ಮೃತಿ ಸುಡುವುದು ಕೇವಲ ಸಾಂಕೇತಿಕ ಘಟನೆ ಮತ್ತು ತಾತ್ಕಾಲಿಕ ಘಟನೆಯಾಗಿದೆ. ಡಾ. ಬಾಬಾಸಾಹೇಬ ಆಂಬೇಡಕರ ಇವರು ಈ ಮೊದಲೇ ಸ್ಪಷ್ಟಪಡಿಸಿದ್ದು, ಅದು ಓರ್ವ ವ್ಯಕ್ತಿಯ ವಿರೋಧದಲ್ಲಿ ಅಲ್ಲ, ಬದಲಾಗಿ ಕಪಟ ಮತ್ತು ಢೋಂಗಿ ವಿಚಾರಗಳ ಮೇಲೆ ಹಲ್ಲೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ಹೇಳುತ್ತಾಳೆ.

ಸಂಪಾದಕೀಯ ನಿಲುವು

  • ಮನುಸ್ಮೃತಿ ಸುಡುವುದು ಈಗ ‘ಫ್ಯಾಶನ’ ಆಗಿದೆ; ಆದರೆ ಇಂತಹ ಜನರಿಗೆ ‘ಯಾವುದೇ ಪುಸ್ತಕ ಸುಡುವುದರಿಂದ ಅದರಲ್ಲಿರುವ ವಿಚಾರಗಳು ನಷ್ಟವಾಗುವುದಿಲ್ಲ’, ಎನ್ನುವುದು ಎಂದಿಗೂ ಗಮನಕ್ಕೆ ಬರುವುದಿಲ್ಲ !
  • ಜಗತ್ತಿಗೆ ಯಾವ ಜಿಹಾದಿ ಭಯೋತ್ಪಾದಕರಿಂದ ತಲೆನೋವು ನಿರ್ಮಾಣವಾಗಿದೆಯೋ, ಆ ಜಿಹಾದಿ ಹಿಂದಿರುವ ವಿಚಾರಗಳು ಎಲ್ಲಿಂದ ಬರುತ್ತದೆ ಎನ್ನುವ ಬಗ್ಗೆ ಯಾರೂ ಬಾಯಿ ಬಿಡುವುದಿಲ್ಲ, ಎನ್ನುವುದನ್ನು ಗಮನಿಸಬೇಕು ! ಒಂದು ವೇಳೆ ಮಾತನಾಡಿದರೆ ಅದರ ಪರಿಣಾಮ ಶಿರಚ್ಛೇದವೇ ಆಗಿದೆ ಎನ್ನುವುದು ಸ್ಪಷ್ಟವಾಗಿರುವುದರಿಂದ ಎಲ್ಲರೂ ಗಾಂಧೀಜಿಯವರ ಮಂಗಗಳಂತೆ ಕೃತಿ ಮಾಡುತ್ತಾರೆ !