ಬನಾರಸ ಹಿಂದೂ ವಿಶ್ವವಿದ್ಯಾಲಯದಲ್ಲಿ ಹೋಳಿ ಮೇಲೆ ನಿರ್ಬಂಧ !

  • ವಿದ್ಯಾರ್ಥಿಗಳು ನಿರ್ಬಂಧವನ್ನು ಕಡೆಗಣಿಸಿ ವಿಶ್ವವಿದ್ಯಾಲಯದ ಪರಿಸರದಲ್ಲಿ ಹೋಳಿ ಆಡಿದರು !

  • ವಿಶ್ವವಿದ್ಯಾಲಯದಲ್ಲಿ ಇಫ್ತಾರ ಪಾರ್ಟಿಯನ್ನು ಆಯೋಜಿಸಲಾಗುವುದಾದರೆ ಹೋಳಿ ಏಕಿಲ್ಲ ? – ವಿದ್ಯಾರ್ಥಿಗಳ ಪ್ರಶ್ನೆ

ವಾರಾಣಸಿ (ಉತ್ತರಪ್ರದೇಶ) – ಇಲ್ಲಿನ ಬನಾರಸ ಹಿಂದೂ ವಿಶ್ವವಿದ್ಯಾಲಯದಲ್ಲಿ ಹೋಳಿ ಆಡುವುದರ ಮೇಲೆ ನಿರ್ಬಂಧ ಹೇರಲಾಗಿದೆ. ವಿಶ್ವವಿದ್ಯಾಲಯದ ಆಡಳಿತದಿಂದ ಈ ಆದೇಶ ನೀಡಲಾಗಿದೆ. ಈ ಆದೇಶವನ್ನು ಉಲ್ಲಂಘಿಸುವವರ ಮೇಲೆ ಕಾರ್ಯಾಚರಣೆಯನ್ನು ಮಾಡಲಾಗುವ ಬಗ್ಗೆ ಹೇಳಲಾಗಿದೆ. ಈ ಆದೇಶವನ್ನು ವಿರೋಧಿಸಲಾಗುತ್ತಿದೆ. ಮಾರ್ಚ ೩, ೨೦೨೩ರಂದು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಪರಿಸರದಲ್ಲಿ ಹೋಳಿ ಆಚರಿಸಿದರು. ಈ ಸಮಯದಲ್ಲಿ ‘ಡಿಜೆ’ (ವಾದ್ಯವೃಂದ) ಹಾಕಲಾಗಿತ್ತು. ಹಾಗೆಯೇ ಪರಸ್ಪರರ ಮೇಲೆ ಬಣ್ಣಗಳನ್ನು ಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಈ ವಿಶ್ವವಿದ್ಯಾಲಯದಲ್ಲಿ ಇಫ್ತಾರ ಪಾರ್ಟಿಯನ್ನು ಆಯೋಜಿಸಲಾಗಿದ್ದ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರ ಮಾಡಿ ಹೋಳಿ ಆಚರಿಸುವುದರ ಮೇಲಿನ ನಿರ್ಬಂಧವನ್ನು ವಿರೋಧಿಸಲಾಗುತ್ತಿದೆ.

೧. ಹೋಳಿ ಆಚರಿಸದಿರುವ ಆದೇಶವನ್ನು ವಿದ್ಯಾರ್ಥಿ ಸಂಘಟನೆಗಳು ವಿರೋಧಿಸುತ್ತಿವೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರಾದ ಅಭಯ ಸಿಂಹರವರು ಮಾತನಾಡುತ್ತ, ಬನಾರಸ ಹಿಂದೂ ವಿಶ್ವವಿದ್ಯಾಲಯವು ದೇಶದಲ್ಲಿನ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾಗಿದೆ. ಇಲ್ಲಿಯೇ ವಿದ್ಯಾರ್ಥಿಗಳಿಗೆ ಹೋಳಿ ಆಡಲು ನಿರ್ಬಂಧ ಹೇರಿದರೆ, ಇನ್ನೂ ಎಲ್ಲಿ ಅನುಮತಿ ನೀಡಲಾಗುವುದು ?

೨. ವಿಶ್ವವಿದ್ಯಾಲಯದ ಉಪಕುಲಗುರು ಪ್ರಾ. ಸುಧೀರ ಜೈನರವರು ಏಪ್ರಿಲ್‌ ೨೬, ೨೦೨೨ರಂದು ಇಫ್ತಾರ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಈ ಬಗ್ಗೆ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಪರಿಸರದಲ್ಲಿ ಇಫ್ತಾರ ಪಾರ್ಟಿಯನ್ನು ಆಯೋಜಿಸಬಹುದಾದರೆ ಹೋಳಿಯನ್ನು ಏಕೆ ಆಚರಿಸಬಾರದು ಎಂದು ಹೇಳುತ್ತಿದ್ದಾರೆ, ಎಂದು ಹೇಳಿದರು.