ನನಗೆ ಅನೇಕ ಬಾರಿ ‘ನನ್ನ ಹೆಸರು ಈಗ ‘ವೀರೇಂದ್ರ ಇಚಲ ಕರಂಜಿಕರ ಇಷ್ಟೇ ಇರದೆ, ಅದಕ್ಕೆ ‘ನ್ಯಾಯವಾದಿ, ಉಚ್ಚ ನ್ಯಾಯಾಲಯ, ಎಂಬ ಹೆಸರು ಬಂದಿದೆ, ಎಂದೆನಿಸುತ್ತದೆ. ನಂತರ ಕೇವಲ ‘ನ್ಯಾಯವಾದಿ, ಉಚ್ಚ ನ್ಯಾಯಾಲಯ ಅಷ್ಟೇ ಆಗಿರದೇ, ‘ಹಿಂದು ವಿಧಿಜ್ಞ ಪರಿಷತ್ತಿನ ಅಧ್ಯಕ್ಷ, ಎಂದು ಆಗಿದೆ. ನನಗೆ ಇರುವ ವಿಶೇಷಣೆಗಳಿಂದ ಅನೇಕ ಬಾರಿ ಸಮಾಜ, ಹಿಂದುತ್ವನಿಷ್ಠ ಮತ್ತು ಸಾಧಕರಿಂದ ನನಗೆ ಗೌರವ ಸಿಗುತ್ತದೆ. ಈ ಕಾರ್ಯವು ಬೌದ್ಧಿಕ ಸ್ತರದಲ್ಲಿರುತ್ತದೆ; ಆದರೆ ನನ್ನ ಸೇವೆಯು ಯಾವುದಾದರೊಂದು ಕ್ಷುದ್ರವರ್ಣದ ಸೇವೆಯನ್ನು ಮಾಡುವ ಸೇವಕರಂತೆ ಆಗಿರುವುದರಿಂದ ನನ್ನನ್ನು ಗೌರವಿಸಿದಾಗ ನನ್ನ ಬಗ್ಗೆ ನಗು ಬರುತ್ತದೆ. ಒಮ್ಮೆ ನನಗೆ ಪರಾತ್ಪರ ಗುರು ಡಾ. ಆಠವಲೆಯವರ ಸತ್ಸಂಗವು ಲಭಿಸಿತು. ಆ ಸಮಯದಲ್ಲಿ ನನ್ನ ಮನಸ್ಸಿನಲ್ಲಿ ಬರುವ ಸಂದೇಹವನ್ನು ನಾನು ಅವರಿಗೆ ಹೇಳಿದೆನು. ಆ ಸಮಯದಲ್ಲಿ ನಮ್ಮಲ್ಲಿ ಮುಂದಿನ ಸಂಭಾಷಣೆ ಆಯಿತು.
ನಾನು : ಈಗ ನನ್ನ ಹೆಸರಿನ ಹಿಂದೆ ಕೇವಲ ಉಚ್ಚ ನ್ಯಾಯಾಲಯದ ನ್ಯಾಯವಾದಿ ಇಷ್ಟೇ ಅಲ್ಲದೇ, ‘ಹಿಂದು ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ, ಎಂದು ಸೇರಿಸಲಾಗುತ್ತದೆ. ನನಗೆ ‘ಆಡಳಿತ ನಿಯಂತ್ರಿತ ದೇವಸ್ಥಾನ ಭ್ರಷ್ಟಾಚಾರ ಮತ್ತು ಹಿಂದೂ ಭಯೋತ್ಪಾದನೆಯ ಖಟ್ಲೆಯ ಪ್ರಕರಣಗಳಲ್ಲಿ ಹಿಂದೂಪರ ನ್ಯಾಯವಾದಿ, ಈ ರೀತಿ ವಿಶೇಷಣ ಗಳು ಸೇರಿರುವುದರಿಂದ ಅನೇಕ ಬಾರಿ ಸಮಾಜದಲ್ಲಿನ ವ್ಯಕ್ತಿ ಮತ್ತು ಸಾಧಕರು ನನ್ನನ್ನು ಗೌರವದಿಂದ ನೋಡುತ್ತಾರೆ. ಆಗ ನನಗೆ ನನ್ನ ಬಗ್ಗೆ ನಗು ಬರುತ್ತದೆ.
ಪರಾತ್ಪರ ಗುರು ಡಾ. ಆಠವಲೆ : ಅದು ಏಕೆ ?
ನಾನು : ನಿಜವಾಗಿಯೂ, ‘ಈ ಸೇವೆ ಅಥವಾ ಕಾರ್ಯ ಎಂದರೆ ಯಾವುದಾದರೊಂದು ಕಟ್ಟಡದ ಕಾವಲುಗಾರನ ಬಳಿ ಪಹರೆಯ ಸೇವೆ ಇರುತ್ತದೆ; ಆದ್ದರಿಂದ ಆ ಕಟ್ಟಡದಲ್ಲಿನ ನಿವಾಸಿಗಳು ಶಾಂತವಾಗಿ ಮಲಗುತ್ತಾರೆ, ಆ ರೀತಿಯಾಗಿದೆ. ಆಶ್ರಮದಲ್ಲಿನ ಸ್ವಚ್ಛತೆಯ ಸೇವೆಯನ್ನು ಮಾಡುವ ಸಾಧಕನು ‘ಎಲ್ಲಿ ಕಸವಿದೆ ? ಅದನ್ನು ಎಲ್ಲಿ ಎಸೆಯಬೇಕು ?, ಎಂದು ನೋಡಬೇಕಾಗುತ್ತದೆ, ನಮ್ಮ ನ್ಯಾಯವಾದಿಗಳ ಸೇವೆಯು ಹಾಗೆಯೇ ಇದೆ, ‘ನಿಜವಾಗಿ ನಾವು ಬೌದ್ಧಿಕ ಸ್ತರದಲ್ಲಿ ಚತುರ್ಥ ಶ್ರೇಣಿಯ ಸಿಬ್ಬಂದಿಗಳಾಗಿದ್ದೇವೆ, ಎಂಬುದನ್ನು ಗಮನಕ್ಕೆ ಬಂದು ನನಗೆ ನಗು ಬರುತ್ತದೆ.
ಪರಾತ್ಪರ ಗುರು ಡಾ. ಆಠವಲೆ : ನೋಡಿ ! ಜನರು ಸುಮ್ಮನೆ ನನ್ನ ಹೆಸರಿನ ಹಿಂದೆ ‘ಪರಮ ಪೂಜ್ಯ ಎಂದು ಸೇರಿಸಿದ್ದಾರೆ.
ನಾನು : ನೀವು ಪರಮ ಪೂಜ್ಯರೇ ಆಗಿದ್ದೀರಿ !
ಪರಾತ್ಪರ ಗುರು ಡಾ. ಆಠವಲೆ : ಹಾಗಾದರೆ ನೀನು ಸಹ ಅಧ್ಯಕ್ಷ ಮತ್ತು ನ್ಯಾಯವಾದಿಯಾಗಿರುವೆ ಅಲ್ಲ !
(ನಾನು ಸುಮ್ಮನಾದೆನು.)
ಅನಂತರ ನನ್ನ ಮನಸ್ಸಿನಲ್ಲಿ, ‘ಪ್ರತಿಯೊಬ್ಬರಿಗೂ ತನ್ನ ಹೆಸರು ಪ್ರಿಯವಾಗಿರುತ್ತದೆ. ನಾನು ಎಂದರೆ ಒಂದು ದೇಹ ಮತ್ತು ‘ಆ ದೇಹದ ವೈಶಿಷ್ಟ್ಯ ಮತ್ತು ಅವನ ಹೆಸರು, ಎಂದಾಗಿರುತ್ತದೆ; ಆದರೆ ‘ಅಧ್ಯಾತ್ಮದಲ್ಲಿ ‘ತನ್ನನ್ನು ಮರೆಯುವುದಿರುತ್ತದೆ. ಹಿಂದುತ್ವನಿಷ್ಠ ನ್ಯಾಯವಾದಿಗಳು ಮಾಡಿದ ಸೇವೆ ಎಂದರೆ ನಿಜವಾಗಿಯೂ ಒಂದು ರೀತಿಯಲ್ಲಿ ಹಿಂದೂಗಳ, ಅಂದರೆ ಸಾಧಕರ ರಕ್ಷಣೆಯ ಸೇವೆಯೇ ಆಗಿದೆ. ರಕ್ಷಣಾಕರ್ತನು ಕಾಳಜಿಯನ್ನು ತೆಗೆದುಕೊಳ್ಳುತ್ತಿರುತ್ತಾನೆ, ಅಂದರೆ ಒಬ್ಬ ಸೇವಕನಾಗಿರುತ್ತಾನೆ. ಎಂಬ ವಿಚಾರ ಬಂದಿತು.
– ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ, ರಾಷ್ಟ್ರೀಯ ಅಧ್ಯಕ್ಷ, ಹಿಂದು ವಿಧಿಜ್ಞ ಪರಿಷತ್ತು, ಮುಂಬೈ. (೨೮.೫.೨೦೨೨)