ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಪಲಾಯನ ಮಾಡಬೇಕಾಗುವುದು ! – ಪೂ. ಪರಮಾತ್ಮಾ ಸ್ವಾಮೀಜಿ, ಪರಮಾತ್ಮಾ ಸಂಸ್ಥಾನ, ಧಾರವಾಡ

ವಿಜಯಪುರದಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಪೂ. ಪರಮಾತ್ಮಾ ಸ್ವಾಮೀಜಿ

ವಿಜಯಪುರ : ಯಾವಾಗ ಈ ಭಾರತ ಭೂಮಿಯಲ್ಲಿ ಧರ್ಮಕ್ಕೆ ಗ್ಲಾನಿ ಬರುವುದೋ ಆಗ ಹಿಂದೂ ಗಳು ಮತ್ತೆ ಏಳುತ್ತಾರೆ. ೧೯೫೦ ರಲ್ಲಿ ಪಾಕಿಸ್ತಾನ ದಲ್ಲಿ ಶೇ. ೨೩ ರಷ್ಟು ಹಿಂದೂಗಳಿದ್ದರು, ಆವಾಗ ಎಚ್ಚೆತ್ತ ಹಿಂದೂಗಳು ಅಲ್ಲಿನ ಹಿಂದೂಗಳನ್ನು ಜಾಗೃತ ಮಾಡಲು ಪ್ರಯತ್ನಿಸಿದರು. ಆದರೆ ಪಾಕಿಸ್ತಾನದ ಹಿಂದೂಗಳು ಜಾಗೃತರಾಗಲಿಲ್ಲ. ಈಗ ಪಾಕಿಸ್ತಾನದಲ್ಲಿ ಶೇ.೨ ರಷ್ಟು ಹಿಂದೂಗಳು ಉಳಿದಿದ್ದಾರೆ, ಅದೇ ರೀತಿ ೧೯೮೦ ರಲ್ಲಿ ಕಾಶ್ಮಿರದ ಹಿಂದೂಗಳಿಗೆ ಜಾಗೃತರಾಗಲು ಹೇಳಿದರು. ಅವರು ಸಹ ಎಚ್ಚೆತ್ತುಕೊಳ್ಳಲಿಲ್ಲ ಪರಿಣಾಮ ೧೯೯೦ ರಲ್ಲಿ ಜಿಹಾದಿಗಳ ಬೆದರಿಕೆಗೆ ರಾತೋರಾತ್ರಿ ಕಾಶ್ಮೀರದಿಂದ ಹಿಂದೂಗಳು ಪಲಾಯನ ಮಾಡಬೇಕಾಯಿತು. ಇವತ್ತು ಕರ್ನಾಟಕದಲ್ಲಿ ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ೨೦೫೦ ರಲ್ಲಿ ಪಾಕಿಸ್ತಾನ ಮತ್ತು ಕಾಶ್ಮೀರದ ಹಿಂದೂ ಗಳಿಗೆ ಆದ ಗತಿ ಆಗುತ್ತದೆ ಎಂದು ಧಾರವಾಡದ ಪೂ. ಪರಮಾತ್ಮಾ ಸ್ವಾಮೀಜಿಯವರು ಎಚ್ಚರಿಕೆ ನೀಡಿದರು.  ಅವರು ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ ಹಿಂದೂ ರಾಷ್ಟ್ರಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಸನಾತನ ಸಂಸ್ಥೆಯ ಸೌ. ವಿದುಲಾ ಹಳದೀಪುರ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಮಾರ್ಗದರ್ಶನ ಮಾಡಿದರು. ಈ ಕಾರ್ಯಕ್ರಮಕ್ಕೆ ೭೭೨ ಜನ ಧರ್ಮಪ್ರೇಮಿಗಳು ಉಪಸ್ಥಿತರಿದ್ದರು.

ಸಂತರ ಸಂಕಲ್ಪದಿಂದ ೨೦೨೫ ರಲ್ಲಿ ಹಿಂದೂ ರಾ?ದ ಸ್ಥಾಪನೆ ! – ಶ್ರೀ. ಗುರುಪ್ರಸಾದ ಗೌಡ

ಶ್ರೀ. ಗುರುಪ್ರಸಾದ ಗೌಡ

ಭಗವಂತನ ಕೃಪೆ, ಸಂತ ಮಹಾತ್ಮರ ಸಂಕಲ್ಪದಿಂದ ಹಿಂದೂ ರಾಷ್ಟ್ರವು ೨೦೨೫ ರಲ್ಲಿ ಮೊದಲು ಭಾರತ ದಲ್ಲಿ ತದ ನಂತರ ವಿಶ್ವದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆ ಆಗಲಿದೆ.

ಗಮನಾರ್ಹ ಅಂಶ

ಸುಮಾರು ೭೦-೮೦ ಕಿ.ಮೀ. ದೂರದಿಂದ ಬಂದು ಧರ್ಮಪ್ರೇಮಿಗಳು ಈ ಹಿಂದೂ ರಾಷ್ಟ್ರ-ಜಾಗೃತಿ ಸಭೆಗೆ ಉಪಸ್ಥಿತರಿದ್ದರು.