ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿ ಟರ್ಕಿಯಿಂದ ಕಾಶ್ಮೀರ ಪ್ರಶ್ನೆಯ ಬಗ್ಗೆ ಪಾಕಿಸ್ತಾನದ ‘ರಾಗಾ’ ಎಳೆದಿದೆ !

ಟರ್ಕಿಯ ಕಿವಿ ಹಿಂಡಿದ ಭಾರತ !

ಭಾರತದ ಪ್ರತಿನಿಧಿ ಸಿಮಾ ಪುಂಜಾನಿ

ನವದೆಹಲಿ – ಭಾರತ ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ, ಎಂದು ಟರ್ಕಿ ಪಾಕಿಸ್ತಾನ ಮತ್ತು ಇಸ್ಲಾಮಿ ದೇಶದ ಸಂಘಟನೆಯ ಜೊತೆ ಸೇರಿ ಆರೋಪಿಸಿದೆ. ಈ ಬಗ್ಗೆ ಭಾರತ ಪಾಕಿಸ್ತಾನ ಮತ್ತು ಇಸ್ಲಾಮಿ ದೇಶದ ಸಂಘಟನೆ ಹಾಗೂ ಟರ್ಕಿ ಈ ಮೂವರಿಗೂ ಕೂಡ ಖಂಡತುಂಡವಾಗಿ ಉತ್ತರ ನೀಡಿರುವ ಘಟನೆ ವಿಶ್ವ ಸಂಸ್ತೆಯ ಮಾನಹ ಹಕ್ಕುಗಳ ಪರಿಷತ್ತಿನಲ್ಲಿ ಘಟಿಸಿದೆ.

೧. ಈ ಪರಿಷತ್ತಿನಲ್ಲಿ ಭಾರತದ ಪ್ರತಿನಿಧಿ ಸಿಮಾ ಪುಂಜಾನಿ ಇವರು ಭಾರತದ ಮೇಲೆ ಮಾಡಿರುವ ಆರೋಪಕ್ಕೆ ಉತ್ತರಿಸುವಾಗ, ಸಾಮಾನ್ಯ ಜನರ ಜೀವನ ಮತ್ತು ಅವರ ಉದರ ನಿರ್ವಾಹಕ್ಕಾಗಿ ಹೋರಾಟ ಮಾಡುವ ಪಾಕಿಸ್ತಾನ ಭಾರತದ ಹಿಂದೆ ಬಿದ್ದಿದೆ. ಆದ್ದರಿಂದ ಅದರ ಆದ್ಯತೆ ಹೇಗೆ ತಪ್ಪಾಗಿದೆ, ಎಂಬುದು ಗಮನಕ್ಕೆ ಬರುತ್ತದೆ. ನಾನು ಪಾಕಿಸ್ತಾನದ ನೇತೃತ್ವಕ್ಕೆ ಮತ್ತು ಅಧಿಕಾರಿಗಳಿಗೆ, ಈ ರೀತಿಯ ಆಧಾರ ರಹಿತ ಪ್ರಚಾರ ಮಾಡುವ ಬದಲು ಪಾಕಿಸ್ತಾನದ ಜನರ ಹಿತಕ್ಕಾಗಿ ಶಕ್ತಿ ಖರ್ಚು ಮಾಡಬೇಕು ಎಂದು ಹೇಳಲು ಬಯಸುತ್ತೇನೆ ಎಂದು ಹೇಳಿದರು.

೨. ಪುಂಜಾನಿ ಇವರು ಟರ್ಕಿ ಬಗ್ಗೆ, ನಮಗೆ ಭಾರತದ ಅಂತರಿಕ ಸಮಸ್ಯೆಯಲ್ಲಿ ಟರ್ಕಿ ನೀಡಿದ ಹೇಳಿಕೆಯಿಂದ ದುಃಖವಾಗಿದೆ. ಟರ್ಕಿ ಈ ರೀತಿಯ ಹೇಳಿಕೆ ನೀಡುವುದರಿಂದ ತನ್ನನ್ನು ತಾನು ತಡೆಯಬೇಕು ಎಂದು ನನ್ನ ಸಲಹೆ ಇದೆ ಎಂದು ಹೇಳಿದರು.

೩. ಪುಂಜಾನಿ ಮಾತು ಮುಂದುವರೆಸಿ, ಇಸ್ಲಾಮಿ ದೇಶದ ಸಂಘಟನೆಯಿಂದ ಕಾಶ್ಮೀರದ ಬಗ್ಗೆ ನೀಡಿರುವ ಹೇಳಿಕೆ ತಿರಸ್ಕರಿಸುವಂತಿದೆ. ಈ ಸಂಘಟನೆಯು, ‘ಪಾಕಿಸ್ತಾನ ಭಯೋತ್ಪಾದಕರ ನಿರ್ಮಾಣದಿಂದ ದೂರ ಉಳಿಯಬೇಕು ಮತ್ತು ಭಾರತದ ಪ್ರದೇಶದಲ್ಲಿನ ಕಾನೂನ ಬಾಹಿರ ಅಧಿಕಾರ ಬಿಟ್ಟುಬಿಡಬೇಕು ಎಂದು ಹೇಳಬೇಕಿತ್ತು ಎಂದು ಹೇಳಿದರು.

೪. ಕಾಶ್ಮೀರದ ಬಗ್ಗೆ ಪುಂಜಾನಿ ಇವರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗಿದ್ದು ಅದು ಶಾಶ್ವತವಾಗಿದೆ. ಪಾಕಿಸ್ತಾನವೇ ಭಾರತದ ಪ್ರದೇಶದ ಮೇಲೆ ಕಾನೂನ ಬಾಹಿರವಾಗಿ ನಿಯಂತ್ರಣ ಪಡೆದಿದೆ. ಪಾಕಿಸ್ತಾನ ಅದರ ಭಯೋತ್ಪಾದಕ ಕಾರ್ಖಾನೆಯಿಂದ ದುರ್ಲಕ್ಷ ಮಾಡುವುದಕ್ಕಾಗಿ ಆಧಾರ ರಹಿತ ವಿಷಯ ಮಾತನಾಡುತ್ತಿರುತ್ತದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇದಕ್ಕೆ ಹೇಳುವುದು ನಾಯಿ ಬಾಲ ಯಾವಾಗಲೂ ಡೊಂಕೇ ಇರುತ್ತದೆ ಎಂದು ! ಭಾರತವು ಭೂಕಂಪದ ಸಮಯದಲ್ಲಿ ಟರ್ಕಿಗೆ ಸಹಾಯ ಮಾಡಿದರು ಕೂಡ ಅದು ಇನ್ನೂ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದೆ ಇದು ಸ್ಪಷ್ಟವಾಗಿದೆ !

ಟರ್ಕಿಯಂತಹ ಭಾರತ ದ್ವೇಷಿ ದೇಶಕ್ಕೆ ಮಾಡಿರುವ ಸಹಾಯ ಸಾಕು ಈಗ ಅವರಿಗೆ ಭಾರತ ಮಹತ್ವ ನೀಡಬಾರದೆಂದು ಜನರಿಗೆ ಅನಿಸುತ್ತದೆ !