ಕಾಂಗ್ರೆಸ್ಸಿನ ನಾಯಕ ನ್ಯಾಯವಾದಿ ಕೌಸ್ತವ ಬಾಗಚಿಯ ಬಂಧನ

ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರ ಬಗ್ಗೆ ವೈಯಕ್ತಿಕ ಟೀಕೆ ಮಾಡಲು ಪ್ರಚೋದನೆ ನೀಡಿರುವ ಪ್ರಕರಣ

ಕೊಲಕತಾ – ಪೊಲೀಸರು ಕಾಂಗ್ರೆಸ್ಸಿನ ನಾಯಕ ನ್ಯಾಯವಾದಿ ಕೌಸ್ತವ ಬಾಗಚಿ ಇವರನ್ನು ಬಂಧಿಸಿದ್ದಾರೆ. ಕಾಂಗ್ರೆಸ್ಸಿನ ಬಂಗಾಲ ಪ್ರದೇಶ ಅಧ್ಯಕ್ಷ ಅಧೀರ ರಂಜನ ಚೌದರಿ ಇವರ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ವೈಯಕ್ತಿಕ ಮಟ್ಟದಲ್ಲಿ ಟೀಕೆಸಿದ್ದಾರೆ. ಇದಕ್ಕೆ ಬಾಗಚಿ ಇವರು ವಿರೋಧಿಸುತ್ತ ಮಮತಾ ಬ್ಯಾನರ್ಜಿ ಇವರ ಬಗ್ಗೆ ವೈಯಕ್ತಿಕವಾಗಿ ಟೀಕಿಸಲು ಪ್ರಚೋದನೆ ನೀಡಿದ್ದಾರೆ. ಆದ್ದರಿಂದ ಬಾಗಚಿ ಇವರ ವಿರೋಧದಲ್ಲಿ ಪ್ರಾಥಮಿಕ ವರದಿ ಪ್ರಸ್ತುತಪಡಿಸಿದ್ದಾರೆ. ನಂತರ ಅವರನ್ನು ಬಂಧಿಸಿದ್ದಾರೆ. ‘ಮುಖ್ಯಮಂತ್ರಿ ನನಗೆ ಹೆದರುತ್ತಾರೆ ಮತ್ತು ಇದು ನನ್ನ ರಾಜಕೀಯ ವಿಜಯವಾಗಿದೆ’, ಎಂದು ಬಾಗಚಿ ಇವರು ಬಂಧನದ ನಂತರ ಪ್ರತಿಕ್ರೀಸಿದ್ದಾರೆ.

೧. ಸಾಗರದಿಘಿ ಮತದಾರ ಕ್ಷೇತ್ರದಿಂದ ಉಪಚುನಾವಣೆ ನಡೆಯಿತು. ಅದರಲ್ಲಿ ಕಾಂಗ್ರೆಸ್ಸಿನ ಅಭ್ಯರ್ಥಿ ಜಯಗಳಿಸಿದರು. ಆ ಸಮಯದಲ್ಲಿ ಮಮತಾ ಬ್ಯಾನರ್ಜಿ ಇವರು ಅಧೀರ ರಂಜನ ಚೌದರಿ ಇವರ ಬಗ್ಗೆ ವೈಯಕ್ತಿಕ ಸ್ತರದಲ್ಲಿ ಟೀಕೆಸಿದ್ದರು.

೨. ಇದರ ನಂತರ ಬಾಗಚಿ ಇವರು ಪತ್ರಿಕಾಗೋಷ್ಠೀ ನಡೆಸಿ ಅದರಲ್ಲಿ ಅವರು ತೃಣಮೂಲ ಕಾಂಗ್ರೆಸ್ಸಿನ ಮಾಜಿ ಶಾಸಕ ಮತ್ತು ಐ.ಎ.ಎಸ್. ಅಧಿಕಾರಿ ದೀಪಕ ಘೋಷಕ ಇವರ ಪುಸ್ತಕದಲ್ಲಿನ ಕೆಲವು ಅಂಶಗಳ ಉಲ್ಲೇಖ ಮಾಡಿದರು. ಈ ಪುಸ್ತಕದಲ್ಲಿ ತೃಣ ಮೂಲ ಕಾಂಗ್ರೆಸ್ ಮತ್ತು ಮಮತಾ ಬ್ಯಾನರ್ಜಿ ಇವರ ಬಗ್ಗೆ ಟೀಕಿಸಲಾಗಿದೆ. ಬಾಗಚಿ ಇವರು, “ಒಂದು ವೇಳೆ ಮುಖ್ಯಮಂತ್ರಿಗಳು ನಮ್ಮ ನಾಯಕರ ಬಗ್ಗೆ ವೈಯಕ್ತಿಕ ಮಟ್ಟದಲ್ಲಿ ಟೀಕಿಸಿದರೆ ಆಗ ನಾವು ಕೂಡ ಪುಸ್ತಕದ ಆಧಾರ ಪಡೆದು ಮುಖ್ಯಮಂತ್ರಿಗಳ ಮೇಲೆ ವೈಯಕ್ತಿಕ ಮಟ್ಟದ ಟೀಕೆ ಮಾಡುವೆವು.” ಎಂದು ಹೇಳಿದರು.

೩. ಅವರ ಈ ಹೇಳಿಕೆಯ ನಂತರ ಬಾಗಚಿ ಇವರ ವಿರುದ್ಧ ಷಡ್ಯಂತ್ರ ರೂಪಿಸುವುದು, ಗಲಭೆ ನಡೆಸುವುದಕ್ಕಾಗಿ ಪ್ರಚೋದನಾತ್ಮಕ ಹೇಳಿಕೆ ನೀಡುವುದು ಮುಂತಾದ ಕಲಂಗಳನ್ನು ಹೇರಿ ಅವರನ್ನು ಬಂಧಿಸಿದ್ದಾರೆ.