ಭಾಜಪ ಶಾಸಕನ ಮಗನನ್ನು ೪೦ ಲಕ್ಷ ರೂಪಾಯಿ ಲಂಚ ಪಡೆಯುವಾಗ ಬಂಧನ

ಬೆಂಗಳೂರು – ಭಾಜಪದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಇವರ ಮಗ ಪ್ರಶಾಂತ ಕುಮಾರ ಇವರನ್ನು ೪೦ ಲಕ್ಷ ರೂಪಾಯಿ ಲಂಚ ಪಡೆಯುವ ಕರ್ನಾಟಕ ಲೋಕಾಯುಕ್ತರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಶಾಸಕ ವಿರೂಪಾಕ್ಷಪ್ಪ ಇವರು ಇಲ್ಲಿಯ ಕರ್ನಾಟಕದ ಸೋಪ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್ (ಕೆ.ಎಸ್.ಡಿ.ಎಲ್. ನ) ಕಾರ್ಯಾಲಯದಿಂದ ಪ್ರಶಾಂತರವರನ್ನು ಬಂಧಿಸಿದ್ದಾರೆ. ನಂತರ ಲೋಕಾಯುಕ್ತ ಅಧಿಕಾರಿ ಪ್ರಶಾಂತ ಇವರ ಮನೆಗೆ ತಲುಪಿದರು. ಅಲ್ಲಿ ಅವರಿಗೆ ೬ ಕೋಟಿ ರೂಪಾಯಿ ನಗದು ದೊರೆತಿದೆ. ಪ್ರಶಾಂತರವರು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಲೆಕ್ಕಪತ್ರ ಅಧಿಕಾರಿಯಾಗಿದ್ದಾರೆ.

(ಸೌಜನ್ಯ : Dighvijay 24X7 News)

೧. ಬಂಧನದ ನಂತರ ಭಾಜಪದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಇವರು ಕೆ.ಎಸ್.ಡಿ.ಎಲ್.ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ‘ಪ್ರಶಾಂತ ಇವರು ಯಾವುದಕ್ಕೆ ಲಂಚ ಪಡೆದಿದ್ದಾರೆ ಅದರಲ್ಲಿ ನನ್ನ ಸಹಭಾಗಿತ್ವ ಇಲ್ಲ,’ ಎಂದು ಅವರು ಹೇಳಿದರು.

೨. ಲೋಕಾಯುಕ್ತ ಅಧಿಕಾರಿ ನೀಡಿರುವ ಮಾಹಿತಿಯ ಪ್ರಕಾರ ಪ್ರಶಾಂತ ಇವರು ಸೋಪು ಮತ್ತು ಇತರೆ ಡಿಟರ್ಜೆಂಟ್ ತಯಾರಿಸುವುದಕ್ಕೆ ಬೇಕಾಗುವ ಕಚ್ಚಾ ವಸ್ತು ಖರೀದಿ ಮಾಡುವುದಕ್ಕಾಗಿ ಒಬ್ಬ ಕಾಂಟ್ರಾಕ್ಟರ್ ನಿಂದ ೮೦ ಲಕ್ಷ ರೂಪಾಯ ಬೇಡಿಕೆ ಇಟ್ಟಿದ್ದರು. ಆದರೆ ನಂತರ ಕಾಂಟ್ರಾಕ್ಟರ್ ನಿಂದ ಲೋಕಾಯುಕ್ತರ ಬಳಿ ದೂರು ನೀಡಿದ್ದರು.

೩. ಈ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು, ಲೋಕಾಯುಕ್ತವನ್ನು ಮತ್ತೆ ತರುವ ಉದ್ದೇಶ ರಾಜ್ಯದಲ್ಲಿನ ಭ್ರಷ್ಟಾಚಾರ ಬೇರು ಸಹಿತ ಕಿತ್ತು ಹಾಕುವುದಿದೆ, ಎಂದು ಹೇಳಿದರು.

(ಸೌಜನ್ಯ – Public TV)