ನವ ದೆಹಲಿ ‘ಅಂತರರಾಷ್ಟ್ರೀಯ ಪುಸ್ತಕ ಮೇಳ’ದಲ್ಲಿ ಕ್ರೈಸ್ತರ ಮತಾಂತರದ ಷಡ್ಯಂತ್ರವನ್ನು ವಿಫಲಗೊಳಿಸಿದ ಹಿಂದುತ್ವ ನಿಷ್ಠರು !

ನವದೆಹಲಿ – ಇಲ್ಲಿಯ ಪ್ರಗತಿ ಮೈದಾನದಲ್ಲಿ ‘ನವ ದೆಹಲಿ ಅಂತರರಾಷ್ಟ್ರೀಯ ಪುಸ್ತಕ ಮೇಳ’ದಲ್ಲಿ ಕ್ರೈಸ್ತರಿಂದ ನಡೆಯುತ್ತಿರುವ ಮತಾಂತರದ ಪ್ರಯತ್ನವನ್ನು ಜಾಗೃತ ಹಿಂದುತ್ವ ನಿಷ್ಠರು ವಿಫಲಗೊಳಿಸಿದ್ದಾರೆ. ಅವರು ಸ್ಟಾಲ್ ನಲ್ಲಿ ಹಾಕಿದ್ದ ‘ಫ್ರೀ ಹೋಲಿ ಬೈಬಲ್’ ಈ ಬಿತ್ತಿ ಪತ್ರಕಗಳನ್ನು ಹರೆದು ಹಾಕಿ ಅಲ್ಲಿಯ ಪುಸ್ತಕದ ಕೆಲವು ಪ್ರತಿ ವಶಪಡಿಸಿಕೊಂಡರು.

ಇಲ್ಲಿಯ ಪ್ರಗತಿ ಮೈದಾನದಲ್ಲಿ ಫೆಬ್ರವರಿ ೨೬ ರಿಂದ ಮಾರ್ಚ್ ೫ ರ ವರೆಗೆ ‘ನವದೆಹಲಿ ಅಂತರರಾಷ್ಟ್ರೀಯ ಪುಸ್ತಕ ಮೇಳ’ವನ್ನು ಆಯೋಜಿಸಲಾಗಿತ್ತು. ಈ ಸ್ಥಳದಲ್ಲಿ ‘ಗಡಿಯನ್ಸ್ ಇಂಟರ್ನ್ಯಾಷನಲ್’ ಈ ಕ್ರೈಸ್ತ ಸಂಸ್ಥೆಯ ವತಿಯಿಂದ ಪುಸ್ತಕಗಳ ಸ್ಟಾಲ್ ಹಾಕಲಾಗಿತ್ತು. ಈ ಸ್ಟಾಲ್ ನಲ್ಲಿ ಫೆಬ್ರವರಿ ೨೪ ರಿಂದ ಬೈಬಲ್ ಗಳನ್ನು ಉಚಿತವಾಗಿ ವಿತರಿಸುತ್ತಿದ್ದರು. ಈ ಮಾಹಿತಿ ದೊರೆಯುತ್ತಲೇ ೩೦ ಕ್ಕೂ ಹೆಚ್ಚಿನ ಹಿಂದುತ್ವನಿಷ್ಠರು ಕ್ರೈಸ್ತ ಮೀಷೀನರಿಯ ‘ಬೈಬಲ್ ಮಾರಾಟ ನಿಲ್ಲಿಸಲು ಹಾಗೂ ಹಿಂದುಗಳ ಮತಾಂತರ ನಿಲ್ಲಿಸಬೇಕು’, ಎಂದು ಒತ್ತಾಯಿಸಿದರು. ಈ ಸಮಯದಲ್ಲಿ ಅವರು ‘ಜೈ ಶ್ರೀ ರಾಮ’ ”ಭಾರತ ಮಾತಾ ಕೀ ಜೈ’ ಎಂದು ಘೋಷಣೆ ನೀಡಿದರು. ಹಿಂದುತ್ವನಿಷ್ಠರ ಆಕ್ರಮಣಕಾರಿ ರೂಪ ನೋಡಿ ಕೆಲವು ಕಾಲ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಲ್ಲಿಯ ಕೆಲವು ಕಮ್ಯುನಿಸ್ಟ್ ವಿಚಾರಸರಣಿಯ ಜನರು ಹಿಂದುತ್ವನಿಷ್ಠರಿಗೆ ವಿರೋಧಿಸುವ ಪ್ರಯತ್ನ ಮಾಡಿದರು; ಆದರೆ ಏನು ಪ್ರಯೋಜನವಾಗಲಿಲ್ಲ. ಅದರ ನಂತರ ಆಯೋಜಕರು ನಿಯಮಿತ ಸುರಕ್ಷೆಗಾಗಿ ೨ ಸುರಕ್ಷಾ ರಕ್ಷಕರನ್ನು ನೀಡಿದರು. ಆ ಸಮಯದಲ್ಲಿ ಕ್ರೈಸ್ತರು ಪ್ರಸಾರ ಮಾಧ್ಯಮಗಳಿಗೆ, ‘ಇತರ ಧರ್ಮದವರು ಭಗವದ್ಗೀತೆ ಗ್ರಂಥವನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಅದರಂತೆ ನಾವು ಕೂಡ ಬೈಬಲ್ ವಿತರಿಸುತ್ತೇವೆ’, ಎಂದು ಹೇಳಿದರು (ಹಿಂದೂಗಳು ಭಗವದ್ಗೀತೆಯನ್ನು ಉಚಿತವಾಗಿ ವಿತರಿಸುತ್ತಿದ್ದರೂ ಕೂಡ ಅವರ ಉದ್ದೇಶ ಇತರ ಧರ್ಮದವರನ್ನು ಮತಾಂತರ ಮಾಡುವುದು ಇರುವುದಿಲ್ಲ. ಕ್ರೈಸ್ತರು ಮಾತ್ರ ಬೈಬಲನ್ನು ಉಚಿತವಾಗಿ ವಿತರಿಸಿ ಅವರ ಧರ್ಮದ ಪ್ರಸಾರ ಮಾಡಿ ಹಿಂದುಗಳನ್ನು ಮತಾಂತರಗೊಳಿಸುವ ಪ್ರಯತ್ನ ಮಾಡುತ್ತಾರೆ ! – ಸಂಪಾದಕರು)

ಸಂಪಾದಕೀಯ ನಿಲುವು

ಮತಾಂತರ ಮಾಡುವುದಕ್ಕಾಗಿ ಪ್ರತಿಯೊಂದು ಅವಕಾಶದ ಲಾಭ ಪಡೆಯುವ ದೂರ್ತ ಕ್ರೈಸ್ತರು !