ಮತಾಂತರಗೊಂಡಿರುವ ದಲಿತ ಕ್ರೈಸ್ತ ಮತ್ತು ಮುಸಲ್ಮಾನರಿಗೆ ಮೀಸಲಾತಿ ನೀಡಬೇಕೆ ಅಥವಾ ಬೇಡವೆ ?, ಈ ಬಗ್ಗೆ ಚಿಂತನೆ !
ನೋಯ್ಡಾ (ಉತ್ತರಪ್ರದೇಶ) – ಪರಿಶಿಷ್ಟ ಜಾತಿಯ ಜನರು ಕ್ರೈಸ್ತ ಮತ್ತು ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವ ಜನರಿಗೆ ಮೀಸಲಾತಿಯ ಲಾಭ ದೊರೆಯಬೇಕೇ ಅಥವಾ ಬೇಡವೇ ? ಈ ವಿಷಯದ ಮೇಲೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ವಿಶ್ವ ಸಂವಾದ ಕೇಂದ್ರ’ ವಿಭಾಗದಿಂದ 2 ದಿನಗಳ ಚಿಂತನೆ ಶಿಬಿರ ಆಯೋಜಿಸಿದೆ. ಮಾರ್ಚ 4 ರಿಂದ ಗೌತಮ ಬುದ್ಧ ವಿದ್ಯಾಪೀಠ, ಗ್ರೇಟರ ನೋಯ್ಡಾದ ಸಹಕಾರದೊಂದಿಗೆ ಈ ಶಿಬಿರ ಪ್ರಾರಂಭವಾಗಲಿದೆ. ಈ ಶಿಬಿರದಲ್ಲಿ ನ್ಯಾಯಾಧೀಶರು, ಶಿಕ್ಷಣತಜ್ಞರು, ಸಂಶೋಧನೆ ನಡೆಸುವ ವಿದ್ಯಾರ್ಥಿಗಳು, ಸ್ವಯಂ ಸೇವಿ ಸಂಸ್ಥೆಗಳು ಮತ್ತು ಕೆಲವು ನಿವೃತ್ತ ಅಧಿಕಾರಿಗಳು ಸಹಭಾಗಿಯಾಗಲಿದ್ದಾರೆಂದು ಹೇಳಲಾಗುತ್ತಿದೆ.
Vishwa Samvad Kendra organizing a Conclave on Conversion and Reservation at Gautam Buddha University, Noida at 4-5 March,2023.
Speakers : Shri @sanjaypaswanbjp , Shri @DrMilindKamble, Shri @DrJadhav pic.twitter.com/tiC5pqucNO
— Vishva Hindu Parishad -VHP (@VHPDigital) February 26, 2023
1. ಅಕ್ಟೋಬರ 2022 ರಲ್ಲಿ ಕೇಂದ್ರಸರಕಾರವು ನಿವೃತ್ತ ಮುಖ್ಯ ನ್ಯಾಯಾಧೀಶರಾದ ಬಾಲಕೃಷ್ಣನ್ ಇವರ ಅಧ್ಯಕ್ಷತೆಯಲ್ಲಿ ಒಂದು ಆಯೋಗ ರಚಿಸಲಾಗಿದೆ. ಯಾವ ಪರಿಶಿಷ್ಟ ಜಾತಿಯ ಜನರು ಇತರೆ ಧರ್ಮದಲ್ಲಿ ಪ್ರವೇಶಿಸಿದ್ದಾರೆಯೋ, ಆ ಜನರ ಸದ್ಯದ ಸ್ಥಿತಿ ಏನಾಗಿದೆ ? ಈ ಬಗ್ಗೆ ಆಯೋಗ ಪರಿಶೀಲನೆ ಮಾಡಲಿದೆ. ಇದರ ವರದಿಯನ್ನು ಜಾರಿಗೊಳಿಸಲು 2 ವರ್ಷಗಳ ಕಾಲಾವಕಾಶವನ್ನು ನೀಡಲಾಗಿದೆ.
2. ಇಲ್ಲಿಯವರೆಗೆ ಕೇವಲ ಹಿಂದೂ ಧರ್ಮದ ದಲಿತ, ಬೌದ್ಧ ಮತ್ತು ಸಿಖ್ಖ ಇವರಿಗೆ ಮೀಸಲಾತಿಯ ಪ್ರಯೋಜನ ಸಿಗುತ್ತಿತ್ತು. ಕ್ರೈಸ್ತ ಮತ್ತು ಇಸ್ಲಾಂ ಸ್ವೀಕರಿಸಿದ ದಲಿತರಿಗೂ ಮೀಸಲಾತಿಯ ಲಾಭ ಸಿಗಬೇಕು ಅದಕ್ಕಾಗಿ ಅನೇಕ ಅರ್ಜಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ.
3. ಕಾಂಗ್ರೆಸ್ ಪೋಷಿತ ಸಂಯುಕ್ತ ಪ್ರಗತಿಪರ ಸಂಯುಕ್ತ ಸರಕಾರದ ಕಾಲಾವಧಿಯಲ್ಲಿ ರಂಗನಾಥ ಮಿಶ್ರಾ ಮತ್ತು ಸಚ್ಚರ ಆಯೋಗದ ಸ್ಥಾಪನೆ ಮಾಡಲಾಗಿತ್ತು. ಈ ಎರಡೂ ಆಯೋಗಗಳ ವರದಿಯು ದಲಿತ ಮುಸಲ್ಮಾನರಿಗೆ ಪ್ರತಿನಿಧಿತ್ವ ನೀಡುವ ಪರವಾಗಿತ್ತು. ‘ದಲಿತರು ಕ್ರೈಸ್ತ ಅಥವಾ ಮುಸ್ಲಿಂ ಧರ್ಮವನ್ನು ಸ್ವೀಕರಿಸಿದರೂ ಅವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವಣೆಯಾಗಿಲ್ಲ’, ಎಂದು ಸಚ್ಚರ ಆಯೋಗದ ವರದಿಯಲ್ಲಿ ಕಂಡು ಬಂದಿದೆ. 2007ರಲ್ಲಿ ಮಿಶ್ರಾ ಆಯೋಗವು ಜಾರಿಗೊಳಿಸಿದ ವರದಿಯಲ್ಲಿ ಅವರು ಪರಿಶಿಷ್ಟ ಜಾತಿಗೆ ಧರ್ಮದಿಂದ ಪ್ರತ್ಯೇಕಗೊಳಿಸುವ ಶಿಫಾರಸ್ಸು ಮಾಡಿದೆ.
ಮೀಸಲಾತಿ ನೀಡಲು ವಿಶ್ವ ಹಿಂದೂ ಪರಿಷತ್ತಿನ ವಿರೋಧ !
ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿ ವಿಜಯ ಶಂಕರ ತಿವಾರಿಯವರು ಈ ವಿಷಯದ ಬಗ್ಗೆ ಮಾತನಾಡುತ್ತಾ, ವಿಶ್ವ ಹಿಂದೂ ಪರಿಷತ್ತು ಮೊದಲಿನಿಂದಲೂ ಕ್ರೈಸ್ತ ಮತ್ತು ಮುಸ್ಲಿಂ ಧರ್ಮಕ್ಕೆ ಹೋಗಿರುವ ಪರಿಶಿಷ್ಟ ಜಾತಿಯ ಜನರಿಗೆ ಮೀಸಲಾತಿಯ ಲಾಭ ಸಿಗಬಾರದು ಎಂದು ಅಭಿಪ್ರಾಯವಾಗಿದೆ. ಹಾಗೆಯೇ ಯಾವ ಜನರು ಹಿಂದೂ ಧರ್ಮಕ್ಕೆ ಘರವಾಪಸಿ ಮಾಡುತ್ತಿರುವರೋ ಅವರಿಗೆ ಮೀಸಲಾತಿ ಸಿಗಬೇಕು ಎಂದು ಹೇಳಿದೆ.