ಸರ್ವೋಚ್ಚ ನ್ಯಾಯಾಲಯದಿಂದ ಉದ್ಯಮಿ ಮುಕೇಶ ಅಂಬಾನಿಯವರ ಕುಟುಂಬದವರಿಗೆ ದೇಶ-ವಿದೇಶಗಳಲ್ಲಿ ‘ಝಡ್ ಪ್ಲಸ್’ ಭದ್ರತೆ ಒದಗಿಸುವಂತೆ ಆದೇಶ

ಭದ್ರತೆಯ ವೆಚ್ಚವನ್ನು ಅಂಬಾನಿಯವರಿಗೆ ವಸೂಲು ಮಾಡುವಂತೆ ಆದೇಶ

ನವ ದೆಹಲಿ – ಮುಕೇಶ ಅಂಬಾನಿಯವರಿಗೆ ಕೇವಲ ಮಹಾರಾಷ್ಟ್ರ ಅಥವಾ ಭಾರತದಲ್ಲಿಯಷ್ಟೇ ಅಲ್ಲದೇ ಜಗತ್ತಿನಾದ್ಯಂತ ಅತ್ಯುನ್ನತ ದರ್ಜೆಯ ಅಂದರೆ ‘ಝಡ್ ಪ್ಲಸ್’ ಭದ್ರತೆ ಒದಗಿಸಬೇಕು, ಎಂದು ಸರ್ವೋಚ್ಚ ನ್ಯಾಯಾಲಯವು ತ್ರಿಪುರಾ ಉಚ್ಚ ನ್ಯಾಯಾಲಯದ ಒಂದು ಆದೇಶಕ್ಕೆ ಆವಾಹನೆ ನೀಡಿರುವ ಅರ್ಜಿಯ ಕುರಿತು ಆಲಿಕೆಯ ಸಮಯದಲ್ಲಿ ಹೇಳಿತು. ಮುಂಬಯಿ ಮತ್ತು ಮಹಾರಾಷ್ಟ್ರದಲ್ಲಿಯೂ ಭದ್ರತೆ ಪೂರೈಸುವ ಜವಾಬ್ದಾರಿಯನ್ನು ರಾಜ್ಯ ಸರಕಾರದ್ದಾಗಿದ್ದರೆ, ಭಾರತಾದ್ಯಂತ ಮತ್ತು ಜಗತ್ತಿನಲ್ಲಿ ಎಲ್ಲೆಲ್ಲಿ ಅವರು ಹೋಗುವರೋ, ಆ ಎಲ್ಲ ಸ್ಥಳಗಳಲ್ಲಿ ಈ ಭದ್ರತೆಯನ್ನು ಪೂರೈಸುವ ಜವಾಬ್ದಾರಿ ಕೇಂದ್ರ ಗೃಹಸಚಿವಾಲಯದ್ದಾಗಿದೆ. ಕೇವಲ ಮುಂಬಯಿಗೆ ಸೀಮಿತಗೊಳಿಸಿ ಭದ್ರತೆ ಒದಗಿಸುವ ಜವಾಬ್ದಾರಿ ಕಡಿಮೆ ವೆಚ್ಚದ್ದಾಗಿದ್ದರೂ, ಜಗತ್ತಿನಾದ್ಯಂತ ಅತ್ಯುನ್ನತ ದರ್ಜೆಯ ಭದ್ರತೆ ಪೂರೈಸುವ ವೆಚ್ಚ ದೊಡ್ಡದಾಗಿದೆ. ಈ ವೆಚ್ಚವನ್ನು ಅಂಬಾನಿ ಕುಟುಂಬದವರು ಭರಿಸುವುದು ಎಂದೂ ಸಹ ನ್ಯಾಯಾಲಯವು ಆದೇಶದಲ್ಲಿ ನಮೂದಿಸಿದೆ.

ಮುಕೇಶ ಅಂಬಾನಿಯವರು, ಅವರ ಪತ್ನಿ ನೀತಾ ಅಂಬಾನಿ ಮತ್ತು ಅವರ ಮೂವರು ಮಕ್ಕಳಾದ ಆಕಾಶ, ಅನಂತ ಮತ್ತು ಇಶಾ ಇವರಿಗೆ ಬಂದಿರುವ ಬೆದರಿಕೆಯ ಪ್ರಕರಣದ ಮೂಲ ಕಾಗದ ಪತ್ರಗಳು ಮತ್ತು ದಾಖಲೆಗಳನ್ನು ಹಾಜರು ಪಡಿಸುವಂತೆ ತ್ರಿಪುರಾ ಉಚ್ಚ ನ್ಯಾಯಾಲಯವು ಇತ್ತೀಚೆಗಷ್ಟೇ ಕೇಂದ್ರ ಗೃಹಸಚಿವಾಲಯಕ್ಕೆ ಆದೇಶ ನೀಡಿತ್ತು. ಈ ಪ್ರಕರಣದಲ್ಲಿ ಕೇಂದ್ರದಿಂದ ವಿಶೇಷ ರಜಾ ಅವಧಿಯಲ್ಲಿ ದೂರು ದಾಖಲಿಸಲಾಗಿತ್ತು. ಅದಕ್ಕನುಗುಣವಾಗಿ ನ್ಯಾಯಾಲಯವು ತ್ರಿಪುರಾ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ಪ್ರಕರಣಗಳ ತೀರ್ಪು ನೀಡುತ್ತಾ, ಈ ವಿಷಯದಲ್ಲಿ ಅಂತಿಮ ಆದೇಶ ನೀಡಿದೆ.