ಮಕ್ಕಳು ಹಾಲಿವುಡ ನ ಚಲನಚಿತ್ರ ನೋಡಿದರೆ ೫ ವರ್ಷ ಹಾಗೂ ಪೋಷಕರಿಗೆ ೬ ತಿಂಗಳ ಜೈಲು ಶಿಕ್ಷೆ !

ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ ಜೊಂಗ ಉನ್

ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್

ಸೇವುಲ್ – ಹಾಲಿವುಡನ ಚಲನಚಿತ್ರಗಳಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಆಗುತ್ತಿರುವುದರಿಂದ ಚಲನಚಿತ್ರ ನೋಡುವ ಮಕ್ಕಳಿಗೆ ೫ ವರ್ಷ ಹಾಗೂ ಅವರ ಪೋಷಕರಿಗೆ ೬ ತಿಂಗಳ ಜೈಲು ಶಿಕ್ಷೆ ನೀಡುವುದು, ಎಂದು ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಇವರು ಘೋಷಣೆ ಮಾಡಿದರು. ಇದಕ್ಕಾಗಿ ಅವರು ಕಾನೂನು ರೂಪಿಸಿದ್ದಾರೆ. ಕೆಲವು ದಿನಗಳ ಹಿಂದೆಯೇ ಉತ್ತರ ಕೋರಿಯಾದಲ್ಲಿ ಎರಡು ಶಾಲೆಯ ವಿದ್ಯಾರ್ಥಿಗಳಿಗೆ ದಕ್ಷಿಣ ಕೋರಿಯನ್ ಹಾಗೂ ಅಮೇರಿಕಾ ಚಲನಚಿತ್ರ ನೋಡಿರುವ ಅಪರಾಧದಲ್ಲಿ ಮರಣದಂಡನೆಯ ಶಿಕ್ಷೆ ನೀಡಿಲಾಗಿತ್ತು. ‘ಕೆ-ಡ್ರಾಮಾ’ ಹೆಸರಿನಿಂದ ಗುರುತಿಸುವ ದಕ್ಷಿಣ ಕೊರಿಯನ್ ಚಲನಚಿತ್ರ ನೋಡುವುದು ಮತ್ತು ಅದರ ಪ್ರಸಾರ ಮಾಡುವುದು, ಇದು ಉತ್ತರ ಕೋರಿಯಾದಲ್ಲಿ ಗಂಭೀರ ಅಪರಾಧವಾಗಿದೆ. ಈ ಅಪರಾಧದ ಅಡಿಯಲ್ಲಿ ಶಿಕ್ಷೆ ನೀಡಿದ್ದರು.