ಭಗವಾನ ಅಯ್ಯಪ್ಪ ಸ್ವಾಮಿಯ ಅಪಮಾನ ಮಾಡುವ ನಾಸ್ತಿಕ ಮುಖಂಡನಿಗೆ ಸಮೂಹದಿಂದ ಧರ್ಮದೇಟು !

ಪೊಲೀಸರ ವಾಹನದೊಳಗೆ ನುಗ್ಗಿ ಹಲ್ಲೆ

ಹಮನಕೊಂಡಾ (ತೇಲಂಗಾಣಾ) – ಶ್ರೀ ಅಯ್ಯಪ್ಪ ಸ್ವಾಮಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ದೇವರ ಅವಮಾನ ಮಾಡುವ ‘ಭಾರತ ನಾಸ್ತಿಕ ಸಂಘ’ದ ತೇಲಂಗಾಣ ರಾಜ್ಯಾಧ್ಯಕ್ಷ ಮತ್ತು ನಾಸ್ತಿಕತಾವಾದಿ ಮುಖಂಡ ಬೈರಿ ನರೇಶನನ್ನು ಸಮೂಹವು ಪೊಲೀಸರ ವಾಹನದೊಳಗೆ ನುಗ್ಗಿ ಧರ್ಮದೇಟು ನೀಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ದಾಳಿ ಮಾಡಿದವರೆಲ್ಲರನ್ನೂ ಬಂಧಿಸಿದೆ. ಶ್ರೀ ಅಯ್ಯಪ್ಪ ಸ್ವಾಮಿಯ ಅವಮಾನ ಮಾಡಿದ ಪ್ರಕರಣದಲ್ಲಿ ಡಿಸೆಂಬರ 31, 2022 ರಂದು ನರೇಶನನ್ನು ಬಂಧಿಸಿ ಕಾರಾಗೃಹದಲ್ಲಿ ಹಾಕಲಾಗಿತ್ತು. ತದನಂತರ ಅವನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು. ಬೈರಿ ನರೇಶ ನಿರಂತರವಾಗಿ ಹಿಂದೂಗಳ ದೇವತೆಯ ವಿಷಯದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡುತ್ತಿದ್ದುದರಿಂದ ಅವನ ವಿರುದ್ಧ ಜನರು ಆಕ್ರೋಷಗೊಂಡಿದ್ದರು. ಇದರಿಂದ ಈ ಹಿಂದೆಯೂ ಅವನಿಗೆ ಜನರ ಕೋಪಕ್ಕೆ ತುತ್ತಾಗಬೇಕಾಗಿತ್ತು. ನರೇಶನ ವಿರುದ್ಧ ಆಂಧ್ರಪ್ರದೇಶ ಮತ್ತು ತೇಲಂಗಾಣಾ ರಾಜ್ಯದಲ್ಲಿ 200 ಕ್ಕಿಂತ ಅಧಿಕ ದೂರುಗಳು ದಾಖಲಿಸಲಾಗಿದೆ.

ಬೈರಿ ನರೇಶನು ಹಮನಕೊಂಡಾದಲ್ಲಿರುವ ಒಂದು ಕಾನೂನು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹಾಜರಾಗಿದ್ದನು. ಅಲ್ಲಿ ಅವನ ಮೇಲೆ ಕೆಲವು ಜನರು ಹಲ್ಲೆ ನಡೆಸಲು ಬರುತ್ತಿರುವ ಮಾಹಿತಿ ದೊರಕಿತು. ಹೆದರಿದ ನರೇಶನು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದನು. ತಕ್ಷಣವೇ ಪೊಲೀಸರು ಬಂದು ನರೇಶನಿಗೆ ರಕ್ಷಣೆ ನೀಡುತ್ತಾ ಪೊಲೀಸ ವಾಹನದಲ್ಲಿ ಕುಳ್ಳಿರಿಸಿದರು. ಅಷ್ಟರಲ್ಲಿ ಉದ್ರಿಕ್ತ ಜನರ ಗುಂಪು ಅಲ್ಲಿಗೆ ತಲುಪಿ ಪೊಲೀಸರ ವಾಹನದೊಳಗೆ ನುಗ್ಗಿ ನರೇಶನ ಮೇಲೆ ಹಲ್ಲೆ ಮಾಡಿದರು.

ಸಂಪಾದಕೀಯ ನಿಲುವು

ಈ ರೀತಿ ಎಲ್ಲೆಡೆ ನಡೆಯಬಾರದು ಅದಕ್ಕಾಗಿ ಸರಕಾರ ದೇವತೆಗಳ ಅಪಮಾನವನ್ನು ತಡೆಯಲು ತಕ್ಷಣ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದೇ ಹಿಂದೂಗಳಿಗೆ ಅನಿಸುತ್ತದೆ !