ಯಾದಗಿರಿಯಲ್ಲಿ ಭುಗಿಲೆದ್ದ ಟಿಪ್ಪು ಸರ್ಕಲ್ ವಿವಾದ ನಿಷೇಧಾಜ್ಞೆ ಜಾರಿ

ಟಿಪ್ಪುವಿನ ಹೆಸರನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ ನಂತರ, ಪೊಲೀಸರಿಂದ ನಿಷೇಧಾಜ್ಞೆ ಜಾರಿ

ಯಾದಗಿರಿಯಿಂದ ವಿವಾದಿತ ಟಿಪ್ಪು ಸುಲ್ತಾನ್ ಪೋಸ್ಟರ್

ಯಾದಗಿರಿ – ಇಲ್ಲಿನ ಹತ್ತಿಕುಣಿ ರಸ್ತೆಯಲ್ಲಿರುವ ವೃತ್ತಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಹಿಂದೂ ಸಂಘಟನೆಯು ವಿರೋಧ ವ್ಯಕ್ತಪಡಿಸಿದೆ. ವೃತ್ತಕ್ಕೆ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಹೆಸರಿಡುವಂತೆ ಒತ್ತಾಯಿಸಿ ಈ ಸಂಘಟನೆ ಪ್ರತಿಭಟನೆ ನಡೆಸಿದಾಗ ಇಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಹೀಗಾಗಿ ಪೊಲೀಸರು ಇಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಅಲ್ಲದೆ, ಈ ಸ್ಥಳದಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ. ಕಾನೂನು ಸುವ್ಯವಸ್ಥೆಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೆಚ್ಚುವರಿ ಆಯುಕ್ತ ಶಾ ಆಲಂ ಹುಸೇನ್ ಎಚ್ಚರಿಕೆ ನೀಡಿದ್ದಾರೆ.

(ಸೌಜನ್ಯ : Asianet Suvarna News)

1. ಈ ವೃತ್ತಕ್ಕೆ ಟಿಪ್ಪು ಸುಲ್ತಾನ್ ಎಂದು ಅಕ್ರಮವಾಗಿ ಹೆಸರಿಸುವುದರ ವಿರುದ್ಧ ಜೈ ಛತ್ರಪತಿ ಶಿವಾಜಿ ಸೇನೆಯು ಆಂದೋಲನದ ಎಚ್ಚರಿಕೆ ನೀಡಿದೆ. ಈ ಸಂಘಟನೆಯು, ಹೆಸರು ಬದಲಾಯಿಸದಿದ್ದರೆ ಗಾಂಧಿ ಚೌಕ್‌ನಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದೆ. ಇಲ್ಲಿನ ಆಡಳಿತ ಅಧಿಕಾರಿಗಳು ಟಿಪ್ಪು ಹೆಸರಿನ ಫಲಕವನ್ನು ಅಳಿಸಿ ಹಾಕಬೇಕು. ಟಿಪ್ಪುವಿನ ಹೆಸರನ್ನು ಇಡುವುದು ನ್ಯಾಯಾಲಯದ ಆದೇಶದ ಅವಹೇಳನೆಯಾಗಿದೆ ಎಂದು ಹೇಳಿದೆ.

2. ಈ ಸಂಘಟನೆಯ ಪ್ರಕಾರ, 1996 ರಲ್ಲಿ, ವೃತ್ತಕ್ಕೆ ಮುಹಮ್ಮದ್ ಅಬ್ದುಲ್ ಕಲಾಂ ಆಜಾದ್ ಹೆಸರಿಡಲಾಗಿತ್ತು; ಆದರೆ ನಗರಸಭೆ 2010 ರಲ್ಲಿ ಎಲ್ಲರ ಒಪ್ಪಿಗೆಯೊಂದಿಗೆ ಟಿಪ್ಪು ಸುಲ್ತಾನ್ ಎಂದು ಹೆಸರನ್ನು ಬದಲಾಯಿಸಿತು. ಇತ್ತೀಚೆಗಷ್ಟೇ ಅಲ್ಲಿ ಟಿಪ್ಪುವಿನ ಹೆಸರಿನಲ್ಲಿ ಭಿತ್ತಿಚಿತ್ರ, ಧ್ವಜ ಹಾಕಲಾಗಿದೆ.

ಸಂಪಾದಕೀಯ ನಿಲುವು
ಕರ್ನಾಟಕದಲ್ಲಿ ಭಾಜಪ ಸರಕಾರ ಇರುವಾಗ ಟಿಪ್ಪು ಸುಲ್ತಾನ್ ಹೆಸರನ್ನು ಹೇಗೆ ಇಡಲಾಗುತ್ತಿದೆ ?, ಎಂದು ಹಿಂದೂಗಳ ಮನಸ್ಸಿನಲ್ಲಿ ಪ್ರಶ್ನೆ ಉದ್ಭವಿಸುತ್ತದೆ !