ಪಂಜಾಬ್ ಜೈಲಿನಲ್ಲಿ ಸಿದ್ಧೂ ಮೂಸೆವಾಲಾ ಹತ್ಯೆಯ ಆರೋಪಿಗಳ ನಡುವೆ ನಡೆದ ಹೊಡೆದಾಟದಲ್ಲಿ ಇಬ್ಬರ ಸಾವು, ಮತ್ತೊಬ್ಬ ಗಾಯ

ಗೋಯಿಂದವಾಲ ಸಾಹಿಬ ಕಾರಾಗೃಹ

ತರಣತಾರಣ (ಪಂಜಾಬ) – ಇಲ್ಲಿಯ ಗೋಯಿಂದವಾಲ ಸಾಹಿಬ ಜೈಲಿನಲ್ಲಿ ಪಂಜಾಬಿ ಗಾಯಕ ಸಿದ್ಧು ಮೂಸೆವಾಲಾನ ಹತ್ಯೆಯ ಪ್ರಕರಣದ 3 ಆರೋಪಿಗಳ ನಡುವೆ ನಡೆದ ಕಾದಾಟದಲ್ಲಿ ಮನದೀಪ ತುಫಾನ ಮತ್ತು ಮನಮೋಹನ ಸಿಂಹ ಈ 2 ಆರೋಪಿಗಳು ಸಾವನ್ನಪ್ಪಿದ್ದು, ಕೇಶವ ಹೆಸರಿನ ಮೂರನೇ ಆರೋಪಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಅವನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸ ಉಪಅಧೀಕ್ಷಕ ಜಸಪಾಲಸಿಂಹ ಢಿಲ್ಲನ ನೀಡಿರುವ ಮಾಹಿತಿಯನುಸಾರ ಫೆಬ್ರವರಿ 26 ರಂದು ಸಾಯಂಕಾಲ 3 ಆರೋಪಿಗಳ ನಡುವೆ ವಾದ ನಡೆದು ಹೊಡದಾಟ ಆರಂಭವಾಯಿತು. ಅವರು ಒಬ್ಬರಿಗೊಬ್ಬರಿಗೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದರು. (ಕಾರಾಗೃಹದಲ್ಲಿ ಆರೋಪಿಗಳಿಗೆ ಕಬ್ಬಿಣದ ಸಲಾಕೆ ಹೇಗೆ ದೊರೆಯಿತು ? ಇದನ್ನು ಗಮನಿಸಿದಾಗ ಕಾರಾಗೃಹದ ಆಡಳಿತದ ವೈಫಲ್ಯತೆ ಕಂಡು ಬರುತ್ತದೆ – ಸಂಪಾದಕರು) ಈ ಹಲ್ಲೆಯಲ್ಲಿ ಮೂವರೂ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಇಬ್ಬರು ಸಾವನ್ನಪ್ಪಿದರು. ಮೂರನೇಯವನ ಮೇಲೆ ಚಿಕಿತ್ಸೆ ಮುಂದುವರಿದಿದೆ.

ಸಂಪಾದಕೀಯ ನಿಲುವು

ಆಪ್ ಅಧಿಕಾರದಲ್ಲಿರುವ ಪಂಜಾಬ್ ನಲ್ಲಿ ಎಲ್ಲೆಡೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದು ಗಮನಕ್ಕೆ ಬರುತ್ತಿದೆ, ಸರಕಾರ ಈಗ ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು !