|
ಬೇರಹಾಮಪುರ (ಬಂಗಾಲ) – ಭಾರತ ಮತ್ತು ಬಾಂಗ್ಲಾದೇಶದ ಬಂಗಾಲ ಗಡಿಯಲ್ಲಿ ಫೆಬ್ರವರಿ ೨೬ ರಂದು ಬಾಂಗ್ಲಾದೇಶದ ಗೂಂಡಾಗಳು ಮತ್ತು ನಾಗರೀಕರು ಗಡಿ ಭದ್ರತಾ ಪಡೆಯ ಸೈನಿಕರ ಮೇಲೆ ದಾಳಿ ನಡೆಸಿದರು. ಬೇರಹಾಮಪುರ ಸೆಕ್ಟರ್ ನಲ್ಲಿ ನಿರ್ಮಲಚರ ಪೋಸ್ಟ್ ೩೫ ನೇ ಬಟಾಲಿಯನ್ ನ ಪ್ರದೇಶದಲ್ಲಿ ರಾತ್ರಿಯ ಸಮಯದಲ್ಲಿ ಈ ಘಟನೆ ನಡೆದಿದೆ. ೧೦೦ ಕ್ಕೂ ಹೆಚ್ಚಿನ ಬಾಂಗ್ಲಾದೇಶಿಯರ ಬಳಿ ಮಾರಕಾಸ್ತ್ರಗಳು ಇದ್ದವು. ಅವರು ಸೈನಿಕರಿಂದ ಬಂದುಕು ಕಸಿದುಕೊಂಡು ಬಾಂಗ್ಲಾದೇಶಕ್ಕೆ ಪರಾರಿಯಾದರು. ಈ ದಾಳಿಯಲ್ಲಿ ೨ ಸೈನಿಕರು ಗಾಯಗೊಂಡಿದ್ದಾರೆ. ಇದರ ಬಗ್ಗೆ ಗಡಿ ಭದ್ರತಾ ದಳವು ಮಾಹಿತಿ ನೀಡಿದೆ. ಈ ಘಟನೆಯ ಬಗ್ಗೆ ಗಡಿ ಭದ್ರತಾ ಪಡೆಯಿಂದ ‘ಬಾರ್ಡರ್ ಗೈಡ್ಸ್ ಬಾಂಗ್ಲಾದೇಶ’ ಇವರೆದರು ಸೂತ್ರಗಳನ್ನು ಮಂಡಿಸಿದ್ದಾರೆ. ಹಾಗೂ ಈ ಪ್ರಕರಣದಲ್ಲಿ ಧ್ವಜ ಸಭೆ ಕೂಡ ಕರೆದಿದ್ದಾರೆ.
JUST IN : Bangladeshis 🇧🇩 attack #BSF 🇮🇳 again, severely injures 2 Jawans.
Over 100 Bangladeshi villagers attacked BSF jawans on Sunday at the IB near Berhampore, West Bengal.#IADN pic.twitter.com/kGNw5CbMKF
— Indian Aerospace Defence News (IADN) (@NewsIADN) February 26, 2023
ಬೆಹರಾಮಪುರ ಪ್ರದೇಶದಲ್ಲಿನ ಭಾರತೀಯ ರೈತರು ಬಾಂಗ್ಲಾದೇಶದ ರೈತರ ಬೆಳೆಯನ್ನು ನಾಶ ಮಾಡುತ್ತಾರೆ ಎಂದು ದೂರು ನೀಡಿದ್ದರು. ಆದ್ದರಿಂದ ಗಡಿ ಭದ್ರತಾ ದಳವು ಅವರ ರಕ್ಷಣೆಗಾಗಿ ಈ ಪ್ರದೇಶದಲ್ಲಿ ತಾತ್ಕಾಲಿಕ ಚೌಕೀ ಸ್ಥಾಪನೆ ಮಾಡಿದ್ದರು. ಈ ಹಿಂದೆ ಕೂಡ ಗಡಿಯಲ್ಲಿ ಕಳ್ಳ ಸಾಗಾಣಿಕೆದಾರರು ಮತ್ತು ನುಸುಳುಕೋರರಿಂದ ಸೈನಿಕರ ಮೇಲೆ ದಾಳಿ ನಡೆದಿವೆ.
ಸಂಪಾದಕೀಯ ನಿಲುವುಸೈನಿಕರ ಮೇಲೆ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಯುತ್ತಿರುವಾಗ ಅವರ ಮೇಲೆ ಗುಂಡು ಹಾರಿಸಲು ಆದೇಶ ಇಲ್ಲವೇ ? ಸೈನಿಕರಿಗೆ ಥಳಿಸಿ ಅವರಿಂದ ಬಂದೂಕು ಕಸಿದುಕೊಂಡು ಹೋಗುತ್ತಿದ್ದರೇ, ಗಡಿಯಲ್ಲಿ ಸೈನಿಕರ ನೇಮಕ ಏತಕ್ಕಾಗಿ ಮಾಡಿದೆ ? |