೭ ಮಾರ್ಚ್ ೨೦೨೩ ರಂದು ‘ಧೂಳಿವಂದನ’ ಇದೆ. ಆ ನಿಮಿತ್ತ…
‘ಧೂಳಿವಂದನ’ವನ್ನು ಆಚರಿಸಿ; ಆದರೆ ರಸಾಯನಿಕ ಬಣ್ಣಗಳಿಂದಲ್ಲ, ಮುತ್ತುಗದ ಹೂವುಗಳ ಮತ್ತು ಇತರ ನೈಸರ್ಗಿಕ ಬಣ್ಣಗಳನ್ನು ತಯಾರಿಸಿ ಆಡಿ ! ನೈಸರ್ಗಿಕ ಬಣ್ಣಗಳು ಮುಖ ಮತ್ತು ತ್ವಚೆಗೂ ಲಾಭದಾಯಕವಾಗಿರುತ್ತವೆ. ಆ ಬಣ್ಣಗಳನ್ನು ನಾವು ನಮ್ಮ ಮನೆಯಲ್ಲಿ ತಯಾರಿಸಬಹುದು.
ನೈಸರ್ಗಿಕ ಬಣ್ಣಗಳನ್ನು ತಯಾರಿಸುವ ಕೃತಿ
೧. ಹಸಿರು ಬಣ್ಣ : ಪಾಲಕ್, ಕೊತ್ತಂಬರಿಸೊಪ್ಪು ಅಥವಾ ಪುದಿನಾ ಇವುಗಳ ಎಲೆಗಳನ್ನು ಕುಟ್ಟಿ (ಪುಡಿ ಮಾಡಿ) ನೀರಿನಲ್ಲಿ ಸೇರಿಸಿದಾಗ ಹಸಿರು ಬಣ್ಣವು ಸಿದ್ಧವಾಗುತ್ತದೆ.
೨. ಕೆಂಪು ಬಣ್ಣ : ಕೆಂಪು ಗುಲಾಬಿ ಹೂವುಗಳ ಪಕ್ಕಳೆಗಳನ್ನು ಚೆನ್ನಾಗಿ ಒಣಗಿಸಿ ಕುಟ್ಟಿ (ಪುಡಿ ಮಾಡಿ) ಹಿಟ್ಟಿನಲ್ಲಿ ಸೇರಿಸಿದಾಗ ಕೆಂಪು ಬಣ್ಣದ ಗುಲಾಲ್ ತಯಾರಾಗುತ್ತದೆ.
೩. ಕೇಸರಿ ಬಣ್ಣ : ಒಂದು ಚಿಟಿಕೆಯಷ್ಟು ಗಂಧದ ಚೂರ್ಣವನ್ನು ಒಂದು ಲೀಟರ್ ನೀರಿನಲ್ಲಿ ಸೇರಿಸಿದಾಗ ಕೇಸರಿ ಬಣ್ಣವು ತಯಾರಾಗುತ್ತದೆ.’ (ಸೌಜನ್ಯ : ಮಾಸಿಕ ‘ಋಷಿಪ್ರಸಾದ’, ಫೆಬ್ರುವರಿ ೨೦೧೮, ಸಂಚಿಕೆ ೩೦೨)