ನಾನು ಹಿಂದುತ್ವನಿಷ್ಠ ಮತ್ತು ‘ಹಿಂದುತ್ವದ ಸೈನಿಕ’ನಾಗಿದ್ದೇನೆ !

ಫ್ರಾನ್ಸುವಾ ಗೋತಿಯೆ

೧. ಹಿಂದೂಗಳು ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚು ಹಿಂಸೆಗೊಳಗಾದ, ಸಹನಶೀಲ ಮತ್ತು ಸರ್ವಸಮಾವೇಶಕ ಜನರು !

ನನ್ನ ಹೆಸರು ಫ್ರಾನ್ಸುವಾ ಗೋತಿಯೆ, ನಾನು ಫ್ರೆಂಚ್ ಪ್ರಜೆ. ನಾನು ಕ್ಯಾಥೊಲಿಕ್ ಆಗಿ ಹುಟ್ಟಿ ಬೆಳೆದರೂ, ನಾನು ಹಿಂದುತ್ವದ ಸಮರ್ಥಕನಾಗಿದ್ದೇನೆ. ಹಿಂದೂಗಳು ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚು ಹಿಂಸೆಗೊಳಗಾದ ಮತ್ತು ಸಹನಶೀಲ ಜನರಲ್ಲಿ ಒಬ್ಬರಾಗಿದ್ದಾರೆ. ನಾನು ಒಬ್ಬ ಲೇಖಕ ಮತ್ತು ಪತ್ರಕರ್ತನಾಗಿ ಹಿಂದೂಗಳ ರಕ್ಷಣೆ ಮಾಡಲು ಪ್ರಯತ್ನಿಸುತ್ತೇನೆ, ಏಕೆಂದರೆ ಹಿಂದೂ ಧರ್ಮದ ಹಿಂದೆ ಒಂದು ಸಾರ್ವಕಾಲಿಕ ಅಧ್ಯಾತ್ಮವಿದೆ, ಅದು ವೈಶ್ವಿಕವಾಗಿದೆ. ‘ಹಿಂದೂಗಳು ‘ವಸುಧೈವ ಕುಟುಂಬಕಮ್’ ಎಂದು ಒಪ್ಪುತ್ತಾರೆ, ಅಂದರೆ ಈ ಜಗತ್ತು ಒಂದು ಕುಟುಂಬವಾಗಿದೆ’ ಎಂದು ಅವರು ತಿಳಿಯುತ್ತಾರೆ. ಈ ಪೃಥ್ವಿಯಲ್ಲಿ ಎರಡು ಬಹುದೊಡ್ಡ ಏಕೇಶ್ವರವಾದಿ ಧರ್ಮವು ಇನ್ನೂ ‘ಕೇವಲ ತಮ್ಮ ದೇವರೇ ನಿಜವಾದ ದೇವರು ಮತ್ತು ಸಂಪೂರ್ಣ ಮನುಕುಲವನ್ನು ಈ ನಿಜವಾದ ದೇವರಲ್ಲಿ ರೂಪಾಂತರಿಸುವುದು ತಮ್ಮ ಕರ್ತವ್ಯವಾಗಿದೆ’ ಎಂದು ನಂಬುತ್ತಾರೆ. ಹೀಗೆ ತಿಳಿದು ಅವರು ಬಲವಂತವಾಗಿ ಅಥವಾ ಆರ್ಥಿಕ ಆಮಿಷವನ್ನೊಡ್ಡಿ ಪ್ರಯತ್ನ ಮಾಡುತ್ತಿರುತ್ತಾರೆ.

೨. ಜಗತ್ತಿನಾದ್ಯಂತ ಹಿಂದೂಗಳನ್ನು ನಕಾರಾತ್ಮಕವಾಗಿ ಬಿಂಬಿಸಲು ಮಾಡಲಾಗುವ ಪ್ರಯತ್ನ !

ಹಿಂದೂ ಧರ್ಮದಲ್ಲಿ ಪ್ರಾಚೀನ ಕಾಲದಿಂದಲೂ ದೇವರು ಮತ್ತು ದೇವತೆಗಳು ವಿವಿಧ ಸಂದರ್ಭಗಳಲ್ಲಿ, ವಿವಿಧ ಹೆಸರುಗಳಲ್ಲಿ ಮತ್ತು ವಿವಿಧ ಶಾಸ್ತ್ರಗಳೊಂದಿಗೆ ಪ್ರಕಟವಾಗುತ್ತಾರೆ ಎಂಬ ನಂಬಿಕೆಯಿದೆ. ಆದ್ದರಿಂದ ಒಬ್ಬ ಹಿಂದೂವಿಗೆ ಮಸೀದಿ, ಚರ್ಚ್ ಅಥವಾ ಗುರುದ್ವಾರವನ್ನು ಪ್ರವೇಶಿಸಲು ಏನೂ ಸಂಕೋಚವಾಗುವುದಿಲ್ಲ. ಏಕೆಂದರೆ ತಾವು ಏನೋ ಪಾಪ ಮಾಡುತ್ತಿದ್ದೇವೆ ಎಂದು ಅವರಿಗೆ ಅನಿಸುವುದಿಲ್ಲ. ಆದ್ದರಿಂದಲೇ ಜಗತ್ತಿನಲ್ಲಿ ಹಿಂಸೆಗೊಳಗಾದ ಪ್ರತಿಯೊಬ್ಬ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಆಶ್ರಯ ದೊರಕಿತು. ಕ್ರೈಸ್ತರು, ಸಿರಿಯಾ ಅಥವಾ ಅರಬ್‌ನಿಂದ ಓಡಿಹೋದ ಕ್ರೈಸ್ತ ಸಮುದಾಯಗಳು, ತುರ್ಕಸ್ತಾನದ ನರಸಂಹಾರದಿಂದ ಓಡಿ ಹೋದ ಅರ್ಮೇನಿಯನ್ ಜನರು, ಇರಾನ್‌ನಿಂದ ಹೊರಬಿದ್ದ ಪಾರ್ಸಿಗಳಿಂದ ಜ್ಯೂಗಳವರೆಗಿನ ಅನೇಕ ಪಂಥಗಳ ಜನರಿಗೆ ಭಾರತವು ಆಶ್ರಯ ನೀಡಿದೆ. ಅವರು ಹಿಂಸೆಗೊಳಗಾಗದೇ ಇರುವ ಏಕೈಕ ದೇಶ ಭಾರತವಾಗಿದೆ. ಇಂದು ಟಿಬೇಟಿಯನ್ನರು ಚೀನೀ ಜನರ ಹಿಂಸೆಯಿಂದ ಪಲಾಯನಗೈಯ್ದರು ಮತ್ತು ಅವರು ತಮ್ಮ ಧಾರ್ಮಿಕ ಮುಖಂಡ ದಲೈ ಲಾಮಾರವರ ಸುತ್ತಲೂ ಭಾರತದಲ್ಲಿಯೇ ಒಂದು ‘ಮಿನಿ ಟಿಬೇಟ್’ ನಿರ್ಮಿಸಿದರು.

ನಾನೊಬ್ಬ ಪತ್ರಕರ್ತ ಮತ್ತು ವಿದೇಶದ ಬಿಳಿ ವ್ಯಕ್ತಿ ಎಂದು ಭಾರತದಲ್ಲಿ ಯಾವಾಗಲೂ ಸಂಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸಿದ್ದೇನೆ. ಇಲ್ಲಿ ನಾನು ಎಂದಿಗೂ ಮೋಸ ಹೋಗಿಲ್ಲ, ಏಕೆಂದರೆ ವಾಶಿಂಗ್ಟನ್‌ನ ಉಪನಗರದಲ್ಲಿ ನಾವು ಮೋಸ ಹೋಗುವ ಸಾಧ್ಯತೆ ಇರುತ್ತದೆ. ಭಾರತದಲ್ಲಿ ಪೊಲೀಸರು ರಸ್ತೆಯಲ್ಲಿ ನನಗೆ ಎಂದಿಗೂ ಕಾಗದಪತ್ರಗಳನ್ನು ಕೇಳಲಿಲ್ಲ. ಆದರೆ ಪ್ಯಾರಿಸ್‌ನ ಮೆಟ್ರೋನಲ್ಲಿ ನಾನ್-ಕ್ಯಾಕೆಶಿಯನ್‌ಗೆ (ಕಪ್ಪುವರ್ಣದವ) ಈ ಅನುಭವವಾಗುತ್ತದೆ ! ಭಾರತದಲ್ಲಿ ನಾನು ಸ್ವತಂತ್ರವಾಗಿ ಬರೆಯಬಲ್ಲೆ. ನಾನು ಇಲ್ಲಿನ ಸರಕಾರವನ್ನೂ ಟೀಕಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ನಡೆದ ಸಮ್ಮೇಳನದಲ್ಲಿ (‘ಡಿಸ್ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ ಎಂದರೆ ಜಾಗತಿಕ ಹಿಂದುತ್ವದ ಉಚ್ಚಾಟನಾ ಪರಿಷತ್ತಿನಲ್ಲಿ) ‘ಹಿಂದುತ್ವವನ್ನು ನಾಝಿ ತತ್ತ್ವಜ್ಞಾನದೊಂದಿಗೆ ಹೋಲಿಸಿ’ ಮತ್ತು ಪ್ರಜಾಪ್ರಭುತ್ವದಿಂದ ಆಯ್ಕೆಯಾದ ‘ಭಾರತೀಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹಿಟ್ಲರ್‌ನೊಂದಿಗೆ ಹೋಲಿಸಿ’ ಅಥವಾ ‘ಹಿಂದುತ್ವನಿಷ್ಠ ಸಂಘಟನೆಗಳನ್ನು ತಾಲಿಬಾನ್‌ನೊಂದಿಗೆ ತುಲನೆ’ ಮಾಡುವುದನ್ನು ನೋಡಿದಾಗ ನನ್ನ ಹೃದಯ ಚುಚ್ಚಿದಂತಾಗುತ್ತದೆ ಮತ್ತು ನನಗೆ ಸಿಟ್ಟು ಬರುತ್ತದೆ. ಈ ರೀತಿ ತುಲನೆಯಾಗಲು ಸಾಧ್ಯವೇ ಇಲ್ಲ ಎಂಬುದನ್ನು ಭಾರತದಲ್ಲಿರುವ ಯಾರು ಬೇಕಾದರೂ ಖಚಿತಪಡಿಸಿಕೊಳ್ಳಬಹುದು. ಅಮೇರಿಕಾದ ‘ವರ್ಲ್ಡ್ ಟ್ರೇಡ್ ಸೆಂಟರ್’ ಮೇಲಿನ ಆಕ್ರಮಣದ ಸ್ಮರಣಾದಿನದಂದೇ ‘ಡಿಸ್ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಪರಿಷತ್ತನ್ನು ಆಯೋಜಿಸುವುದು ಅಷ್ಟೇ ನಿಂದನೀಯವಾಗಿದೆ.

೩. ಆಂಗ್ಲರು ಹಿಂದೂಗಳ ಬಗ್ಗೆ ಜಗತ್ತಿನಲ್ಲಿ ನಕಾರಾತ್ಮಕತೆ ನಿರ್ಮಿಸುವುದು

ನಿಜ ನೋಡಿದರೆ ಅನೇಕರ ಮುಖ್ಯ ಸಮಸ್ಯೆ ಭಾರತದ ಇತಿಹಾಸ, ಸಂಸ್ಕೃತಿ, ತತ್ತ್ವಜ್ಞಾನ ಮತ್ತು ಸಾಹಿತ್ಯ ಇವುಗಳ ಅಧ್ಯಯನ ಮಾಡುವುದರಲ್ಲಿದೆ. ಬ್ರಿಟಿಷರು ಮೋರಟೈಮರ್ ವೀಲರ್ ಎಂಬವನ ನೇತೃತ್ವದಲ್ಲಿ ಒಂದು ಇಂಡಾಲಜಿ (ವಿದ್ಯಾಶಾಸ್ತ್ರ) ತಂತ್ರವನ್ನು ನಿರ್ಮಿಸಿದರು, ಅದರ ಮೂಲಕ ಅವರು ಭಾರತದ ಪ್ರಾಚೀನ ಸಂಸ್ಕೃತಿ, ಅವಶೇಷ, ಮಂದಿರಗಳು ಇತ್ಯಾದಿಗಳ ಬಗ್ಗೆ ಆಸಕ್ತಿ ತೋರಿಸಿದರು, ಆದರೆ ಅವರು ಯಾವಾಗಲೂ ಕ್ರೈಸ್ತ ಸಂಸ್ಕೃತಿಯನ್ನೇ ಉತ್ಕೃಷ್ಟವೆಂದು ತೋರಿಸಿದರು. ಯಾರ ಹೆಸರಿನಲ್ಲಿ ಭಾರತದಲ್ಲಿ ಅಸಂಖ್ಯಾತ ರಸ್ತೆಗಳಿಗೆ ಹೆಸರಿಡಲಾಗಿದೆಯೋ, ಆ ಮ್ಯಾಕ್ಸ್‌ಮುಲ್ಲರ್ ಎಂಬ ಪ್ರಸಿದ್ಧ ಇತಿಹಾಸಕಾರ ಮತ್ತು ಸಾಹಿತ್ಯಕಾರನು ತನ್ನ ಪತ್ನಿಗೆ ಒಂದು ಪತ್ರವನ್ನು ಬರೆದು ‘ಯೇಸು ಕ್ರಿಸ್ತನೇ ನಿಜವಾದ ಏಕೈಕ ದೇವರಾಗಿದ್ದಾರೆ ಮತ್ತು ಹಿಂದೂಗಳು ನಿಧರ್ಮಿಗಳಾಗಿದ್ದಾರೆ’ ಎಂದಿದ್ದಾನೆ. ಇಂದಿನ ಆಧುನಿಕ ಇತಿಹಾಸಕಾರರು ಅದೇ ಮಾನಸಿಕತೆಯನ್ನಿಟ್ಟುಕೊಂಡಿದ್ದಾರೆ ಮತ್ತು ಉದ್ದೇಶಪೂರ್ವಕವಾಗಿ ‘ಭಾರತೀಯರು ಒಂದು ನಿಕೃಷ್ಟ ದರ್ಜೆಯ ವಂಶಜರಾಗಿದ್ದಾರೆ’ ಎಂಬುದನ್ನು ನಂಬುತ್ತಾರೆ.

೪. ಭಾರತವು ಎಲ್ಲ ರೀತಿಯಿಂದ ಜಾಗತಿಕ ಮಹಾಶಕ್ತಿಯಾಗುವುದು !

ಈ ದೇಶದಲ್ಲಿ ನಾನು ೪೦ ವರ್ಷಗಳಿಂದ ವಾಸಿಸುತ್ತಿದ್ದೇನೆ. ನಾನು ಭಾರತದ ಉತ್ತರದಿಂದ ದಕ್ಷಿಣ ಮತ್ತು ಅರುಣಾಚಲ ಪ್ರದೇಶದಿಂದ ಚೀನಾದ ಗಡಿಯವರೆಗೆ ತುಂಬಾ ಪ್ರಯಾಣ ಮಾಡಿದ್ದೇನೆ. ನನಗೆ ಜಗತ್ತಿನಲ್ಲಿ ಅತ್ಯಂತ ಸ್ನೇಹಪರ, ಮುಕ್ತಮನಸ್ಸಿನ ಮತ್ತು ಸಹನಶೀಲ ವ್ಯಕ್ತಿಗಳು ಎಂದಿಗೂ ಸಿಗಲಿಲ್ಲ. ನನಗೆ ವಿಶ್ವಾಸವಿದೆ, ಸ್ವಾಮಿ ವಿವೇಕಾನಂದರು ಅಥವಾ ಶ್ರೀ ಯೋಗಿ ಅರವಿಂದರು ಭವಿಷ್ಯ ಹೇಳಿದ ಪ್ರಕಾರ ‘ಭಾರತವು ಕೇವಲ ಜಗತ್ತಿನ ಆಧ್ಯಾತ್ಮಿಕ ನಾಯಕನಷ್ಟೇ ಅಲ್ಲ, ಆರ್ಥಿಕ, ಸೈನ್ಯ ಮತ್ತು ರಾಜಕೀಯ ಮಹಾಶಕ್ತಿಯಾಗಲಿದೆ’.

ಹೇಗೆ ಮಹಾನ್ ಶ್ರೀ ಯೋಗಿ ಅರವಿಂದರು ಪ್ರಕಟರಾಗಿ “ಇದು ಹಿಂದೂ ಧರ್ಮದ ಸತ್ಯ. ನಾನು ಜಗತ್ತಿಗೆ ಸಾರುತ್ತಿರುವುದು ಇದೇ ಧರ್ಮ. ನಾನು ಋಷಿಗಳು, ಸಂತರು ಮತ್ತು ಅವತಾರಗಳಿಂದ ಪರಿಪೂರ್ಣತೆ ಮತ್ತು ಅಭಿವೃದ್ಧಿ ಹೊಂದಿದ್ದೇನೆ ಮತ್ತು ಈಗ ನಾನು ರಾಷ್ಟ್ರದಲ್ಲಿ ನನ್ನ ಕೆಲಸವನ್ನು ಮಾಡುತ್ತಿದ್ದೇನೆ. ನನ್ನ ಮಾತನ್ನು ಕಳುಹಿಸಲು ನಾನು ಈ ರಾಷ್ಟ್ರವನ್ನು ಬೆಳೆಸುತ್ತಿದ್ದೇನೆ. ಇದು ಸನಾತನ ಧರ್ಮ, ಇದು ಶಾಶ್ವತ ಮತ್ತು ನೀವು ಇದನ್ನು ಮೊದಲು ತಿಳಿದಿರಲಿಲ್ಲ; ಆದರೆ ನಾನೀಗ ಅದನ್ನು ನಿಮಗೆ ಬಹಿರಂಗಪಡಿಸಿದ್ದೇನೆ, ಎಂದಿದ್ದರು. ಹಾಗಾಗಿ ನೀವು ಬಯಸಿದರೆ ನನ್ನನ್ನು ‘ಹಿಂದುತ್ವದ ಸೈನಿಕ ಎಂದು ಕರೆಯಬಹುದು.

– ಫ್ರಾನ್ಸುವಾ ಗೋತಿಯೆ, ಫ್ರೆಂಚ್ ಪತ್ರಕರ್ತ